Kannada News  /  Photo Gallery  /  Cracks Develop In Houses In Jammu And Kashmir's Doda, Locals Evacuate

Jammu and Kashmir: ಉತ್ತರಾಖಂಡದ ಜೋಶಿಮಠ ಆಯ್ತು, ಈಗ ಜಮ್ಮು ಮತ್ತು ಕಾಶ್ಮೀರದ ಮನೆಗಳ ಗೋಡೆಗಳಲ್ಲೂ ಬಿರುಕು!

05 February 2023, 17:30 IST HT Kannada Desk
05 February 2023, 17:30 , IST

ಉತ್ತರಾಖಂಡದ ಜೋಶಿಮಠದಲ್ಲಿ ಸಂಭವಿಸಿದ ಭೂಕುಸಿತದ ಘಟನೆಗಳು ನೆನಪಿರುವಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಭೂಕುಸಿತದ ಭೀತಿ ಎದುರಾಗಿದೆ. ಅಲ್ಲಿನ ದೋಡಾ ಪ್ರದೇಶದಲ್ಲಿ ಹಲವು ಮನೆಗಳ ಗೋಡೆಗಳಲ್ಲಿಯೂ ಬಿರುಕು ಕಂಡುಬಂದಿದೆ. ಅಲ್ಲಿನ ಆಡಳಿತವು ಜನರನ್ನು ಸ್ಥಳಾಂತರ ಮಾಡಿದೆ.

ಫೆಬ್ರವರಿ 4ರಂದು ಭಾರತದ ಭೌಗೋಳಿಕ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳ ತಂಡವು ಜಮ್ಮು ಮತ್ತು ಕಾಶ್ಮೀರದ ದೋಡಾ ಪ್ರದೇಶಕ್ಕೆ ಆಗಮಿಸಿ ಬಿರುಕು ಬಿಟ್ಟ ಪ್ರದೇಶಗಳನ್ನು ಪರಿಶೀಲಿಸಿದೆ. ಜೋಶಿಮಠದ ಘಟನೆಯಂತೆಯೂ ಇಲ್ಲೂ ಭೂಕುಸಿತ ನಡೆಯುತ್ತಿದೆಯೇ ಎಂದು ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಪರಿಶೀಲನೆ ವೇಳೆ ಸುಮಾರು 20 ಕಟ್ಟಡಗಳು/ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. 

(1 / 6)

ಫೆಬ್ರವರಿ 4ರಂದು ಭಾರತದ ಭೌಗೋಳಿಕ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳ ತಂಡವು ಜಮ್ಮು ಮತ್ತು ಕಾಶ್ಮೀರದ ದೋಡಾ ಪ್ರದೇಶಕ್ಕೆ ಆಗಮಿಸಿ ಬಿರುಕು ಬಿಟ್ಟ ಪ್ರದೇಶಗಳನ್ನು ಪರಿಶೀಲಿಸಿದೆ. ಜೋಶಿಮಠದ ಘಟನೆಯಂತೆಯೂ ಇಲ್ಲೂ ಭೂಕುಸಿತ ನಡೆಯುತ್ತಿದೆಯೇ ಎಂದು ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಪರಿಶೀಲನೆ ವೇಳೆ ಸುಮಾರು 20 ಕಟ್ಟಡಗಳು/ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. (HT_PRINT)

ಬಿರುಕು ಬಿಟ್ಟ ಮನೆಗಳಲ್ಲಿ ಭೂಕುಸಿತದ ಅನುಭವವಾಗಿದೆ. ಕಳೆದ ಕೆಲವು ದಿನಗಳಿಂದ ಇಂತಹ ಅನುಭವವಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ. 

(2 / 6)

ಬಿರುಕು ಬಿಟ್ಟ ಮನೆಗಳಲ್ಲಿ ಭೂಕುಸಿತದ ಅನುಭವವಾಗಿದೆ. ಕಳೆದ ಕೆಲವು ದಿನಗಳಿಂದ ಇಂತಹ ಅನುಭವವಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ. (ANI )

ದೋಡಾದಲ್ಲಿನ ಈ ಬಿರುಕುಗಳು ಉತ್ತರಾಖಂಡದ ಜೋಶಿಮಠದ ಚಮೋಲಿ ಪ್ರದೇಶವನ್ನು ನೆನಪಿಸಿದೆ. ಜೋಶಿಮಠದಲ್ಲಿ ಭೂಕುಸಿತ ಸಂಭವಿಸಿ ಸಾವಿರಾರು ಜನರು ತಮ್ಮ ಮನೆ ಮಠ ಕಳೆದುಕೊಂಡಿದ್ದಾರೆ.   

(3 / 6)

ದೋಡಾದಲ್ಲಿನ ಈ ಬಿರುಕುಗಳು ಉತ್ತರಾಖಂಡದ ಜೋಶಿಮಠದ ಚಮೋಲಿ ಪ್ರದೇಶವನ್ನು ನೆನಪಿಸಿದೆ. ಜೋಶಿಮಠದಲ್ಲಿ ಭೂಕುಸಿತ ಸಂಭವಿಸಿ ಸಾವಿರಾರು ಜನರು ತಮ್ಮ ಮನೆ ಮಠ ಕಳೆದುಕೊಂಡಿದ್ದಾರೆ.   (ANI )

ನಮ್ಮ ಮನೆಯ ವಸ್ತುಗಳನ್ನು ಇಡಲು ಮತ್ತು ಮಕ್ಕಳ ಸುರಕ್ಷತೆಗೆ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. 

(4 / 6)

ನಮ್ಮ ಮನೆಯ ವಸ್ತುಗಳನ್ನು ಇಡಲು ಮತ್ತು ಮಕ್ಕಳ ಸುರಕ್ಷತೆಗೆ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. (ANI (Shanky Rathore))

ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾದ ವಿಜ್ಞಾನಿಗಳು ಇಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ನೀಡಲಿದ್ದಾರೆ. ಜನರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ. 

(5 / 6)

ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾದ ವಿಜ್ಞಾನಿಗಳು ಇಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ನೀಡಲಿದ್ದಾರೆ. ಜನರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ. (ANI (Shanky Rathore))

ನಹಿ ಬಸ್ತಿ ಪ್ರದೇಶ ಮಾತ್ರವಲ್ಲದೆ ಸುತ್ತಲಿನ ಜನರೂ ಭೀತಿಯಲ್ಲಿದ್ದು, ಭೂಕುಸಿತದ ಆತಂಕದಲ್ಲಿದ್ದಾರೆ. 

(6 / 6)

ನಹಿ ಬಸ್ತಿ ಪ್ರದೇಶ ಮಾತ್ರವಲ್ಲದೆ ಸುತ್ತಲಿನ ಜನರೂ ಭೀತಿಯಲ್ಲಿದ್ದು, ಭೂಕುಸಿತದ ಆತಂಕದಲ್ಲಿದ್ದಾರೆ. (PTI)

ಇತರ ಗ್ಯಾಲರಿಗಳು