ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 5 ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಎಂಎಸ್ ಧೋನಿ; ಥಲಾ ಫರ್ ದಿ ರೀಸನ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 5 ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಎಂಎಸ್ ಧೋನಿ; ಥಲಾ ಫರ್ ದಿ ರೀಸನ್

ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 5 ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಎಂಎಸ್ ಧೋನಿ; ಥಲಾ ಫರ್ ದಿ ರೀಸನ್

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ 2025ರ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ, 5 ಅಪ್ರತಿಮ ದಾಖಲೆಗಳನ್ನು ನಿರ್ಮಿಸುವ ಅಂಚಿನಲ್ಲಿದ್ದಾರೆ. ಬ್ಯಾಟಿಂಗ್‌ ಮತ್ತು ಕೀಪಿಂಗ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಲು ಮಾಹಿ ಸಜ್ಜಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾರ್ಚ್‌ 28ರ ಶುಕ್ರವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕೇವಲ 19 ರನ್ ಗಳಿಸಿದರೆ ದಾಖಲೆಯೊಂದು ಆಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಮಾಹಿ ಪಾತ್ರರಾಗಲಿದ್ದಾರೆ. ಆ ಮೂಲಕ ಸುರೇಶ್ ರೈನಾ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿಯಲಿದ್ದಾರೆ.
icon

(1 / 7)

(AFP)

ಐಪಿಎಲ್‌ನಲ್ಲಿ ಚೆನ್ನೈ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. ಅವರು ಚೆನ್ನೈ ಜರ್ಸಿಯಲ್ಲಿ ಒಟ್ಟು 4687 ರನ್ ಗಳಿಸಿದ್ದಾರೆ. ಧೋನಿ ಖಾತೆಯಲ್ಲಿ 4669 ರನ್ ಇದೆ.
icon

(2 / 7)

(AP)

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ 5 ಆಟಗಾರರನ್ನು ಔಟ್‌ ಮಾಡಿದರೆ ವಿಶೇಷ ದ್ವಿಶತಕವನ್ನು ಪೂರೈಸಲಿದ್ದಾರೆ. ಅಂದರೆ, ಮಾಹಿ ಐಪಿಎಲ್‌ನಲ್ಲಿ ಕ್ಯಾಚ್‌ಗಳು ಮತ್ತು ಸ್ಟಂಪಿಂಗ್‌ ಸೇರಿದಂತೆ 200 ವಿಕೆಟ್‌ ಪಡೆದ ಸಾಧನೆಯನ್ನು ಮಾಡಲಿದ್ದಾರೆ. ವಿಕೆಟ್ ಕೀಪರ್ ಆಗಿ ಮಾತ್ರವಲ್ಲದೆ ಫೀಲ್ಡರ್ ಆಗಿಯೂ ತೆಗೆದುಕೊಂಡ ಕ್ಯಾಚ್‌ಗಳನ್ನು ಲೆಕ್ಕಹಾಕಲಾಗಿದೆ.
icon

(3 / 7)

ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ಎರಡು ಕ್ಯಾಚ್‌ ಪಡೆದರೆ, ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 150 ಕ್ಯಾಚ್ ಪಡೆದ ಏಕೈಕ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 265 ಐಪಿಎಲ್ ಪಂದ್ಯಗಳ 258 ಇನ್ನಿಂಗ್ಸ್‌ಗಳಲ್ಲಿ ಧೋನಿ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಈ ವೇಳೆ 148 ಕ್ಯಾಚ್ ಪಡೆದಿದ್ದಾರೆ. ಚಿತ್ರ ಕೃಪೆ ಪಿಟಿಐ.
icon

(4 / 7)

ಆರ್‌ಸಿಬಿ ವಿರುದ್ಧ ಧೋನಿ ಎರಡು ಕ್ಯಾಚ್‌ ಪಡೆದರೆ, ಚೆನ್ನೈ ಜರ್ಸಿಯಲ್ಲಿ ಒಟ್ಟಾರೆ 150 ಕ್ಯಾಚ್‌ಗಳನ್ನು ಪಡೆದ ಮೊದಲ ವಿಕೆಟ್ ಕೀಪರ್ ಮತ್ತು ಫೀಲ್ಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಧೋನಿ ಚೆನ್ನೈ ಪರ ಒಟ್ಟು 144 ಕ್ಯಾಚ್ ಪಡೆದಿದ್ದಾರೆ. ಚಿತ್ರ ಕೃಪೆ ಪಿಟಿಐ.
icon

(5 / 7)

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ಕೇವಲ 31 ರನ್ ಗಳಿಸಿದರೆ, ಐಪಿಎಲ್‌ನಲ್ಲಿ ಚೆಪಾಕ್‌ ಮೈದಾನದಲ್ಲಿ 1500 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಧೋನಿ 59 ಇನ್ನಿಂಗ್ಸ್‌ಗಳಲ್ಲಿ ಈವರೆಗೆ 1469 ರನ್ ಗಳಿಸಿದ್ದಾರೆ. ಸುರೇಶ್ ರೈನಾ 55 ಇನ್ನಿಂಗ್ಸ್ಗಳಲ್ಲಿ 1498 ರನ್ ಗಳಿಸಿದ್ದಾರೆ. ಅಂದರೆ, ಧೋನಿ ಶುಕ್ರವಾರ 30 ರನ್ ಗಳಿಸಿದರೆ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರುತ್ತಾರೆ. ಚಿತ್ರ ಕೃಪೆ ಪಿಟಿಐ.
icon

(6 / 7)

ಇಂದು (ಮಾ.28)ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವೆ ಐಪಿಎಲ್‌ ಪಂದ್ಯ ನಡೆಯುತ್ತಿದೆ.
icon

(7 / 7)

(REUTERS)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು