ಕಳೆದ ವರ್ಷ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿದ್ದ ಈ ಐವರು ಆಟಗಾರರ ಹೆಸರು ಈ ಬಾರಿ ಇಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಳೆದ ವರ್ಷ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿದ್ದ ಈ ಐವರು ಆಟಗಾರರ ಹೆಸರು ಈ ಬಾರಿ ಇಲ್ಲ

ಕಳೆದ ವರ್ಷ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿದ್ದ ಈ ಐವರು ಆಟಗಾರರ ಹೆಸರು ಈ ಬಾರಿ ಇಲ್ಲ

  • ಬಿಸಿಸಿಐ, ಟೀಮ್‌ ಇಂಡಿಯಾ ಪುರುಷ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಕೆಲವು ಆಟಗಾರರನ್ನು ಮತ್ತೆ ಸೇರಿಸಿಕೊಳ್ಳಲಾಗಿದೆ. ಇದೇ ವೇಳೆ ಕಳೆದ ವರ್ಷ ಪಟ್ಟಿಯಲ್ಲಿದ್ದ ಐವರು ಆಟಗಾರರನ್ನು ಈ ಬಾರಿ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಗಿಡಲಾಗಿದೆ. ಈ ಆಟಗಾರರು ಯಾರು ಎಂದು ನೋಡೋಣ.

ಶಾರ್ದೂಲ್ ಠಾಕೂರ್: ಟೀಮ್ ಇಂಡಿಯಾ ಪರ ಕೆಲವು ಪಂದ್ಯಗಳಲ್ಲಿ ತಮ್ಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಶಾರ್ದೂಲ್ ಠಾಕೂರ್, ಈ ಬಾರಿ ಕೇಂದ್ರ ಒಪ್ಪಂದ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಕಳೆದ ಬಾರಿ ಅವನು ಸಿ ದರ್ಜೆಯಲ್ಲಿದ್ದರು.
icon

(1 / 5)

(PTI)

ಆರ್ ಅಶ್ವಿನ್: ಕಳೆದ ವರ್ಷದ ಕೇಂದ್ರ ಒಪ್ಪಂದ ಪಟ್ಟಿಯಲ್ಲಿದ್ದ ಆಟಗಾರರಲ್ಲಿ ರವಿಚಂದ್ರನ್ ಅಶ್ವಿನ್ ಕೂಡ ಒಬ್ಬರು. ಈ ಬಾರಿ ಅವರಿಲ್ಲ. ಇದಕ್ಕೆ ಕಾರಣ ಈ ಸ್ಪಿನ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವುದು. ಕೊನೆಯ ಬಾರಿ ಅವರು ಎ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದರು. ಅಶ್ವಿನ್ ಪ್ರಸ್ತುತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ.
icon

(2 / 5)

(AFP)

ಕೆ.ಎಸ್.ಭರತ್: ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ಕೆ.ಎಸ್. ಭರತ್ ಅವರನ್ನು ಕೇಂದ್ರ ಒಪ್ಪಂದದಿಂದ ಬಿಡುಗಡೆ ಮಾಡಲಾಗಿದೆ. ರಣಜಿ ಟ್ರೋಫಿಯಲ್ಲಿ ತ್ರಿಶತಕ ಗಳಿಸಿದ ಏಕೈಕ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ಇವರು. ಕೊನೆಯದಾಗಿ ಅವರನ್ನು ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಸಿ ಗ್ರೇಡ್ ಕೊಡಲಾಗಿತ್ತು.
icon

(3 / 5)

(Reuters)

ಆವೇಶ್ ಖಾನ್: ಮಧ್ಯಮ ವೇಗದ ಬೌಲರ್ ಆವೇಶ್ ಖಾನ್ ಅವರ ಹೆಸರೂ ಈ ಪಟ್ಟಿಯಲ್ಲಿಲ್ಲ. ಕೊನೆಯ ಬಾರಿ ಅವರಿಗೆ ಸಿ ಗ್ರೇಡ್‌ ನೀಡಲಾಗಿತ್ತು. ಖಾನ್ ಭಾರತೀಯ ಕ್ರಿಕೆಟ್ ತಂಡದ ಪರ 8 ಏಕದಿನ ಮತ್ತು 25 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಈ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದಾರೆ.
icon

(4 / 5)

(Surjeet Yadav)

ಜಿತೇಶ್ ಶರ್ಮಾ: ಈ ಬಾರಿ ಜಿತೇಶ್ ಶರ್ಮಾ ಅವರ ಹೆಸರೂ ಇಲ್ಲ. ಈ ವಿಕೆಟ್ ಕೀಪರ್ ಬ್ಯಾಟನ್ ಕಳೆದ ಬಾರಿ ಸಿ ಗ್ರೇಡ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಶರ್ಮಾ ಭಾರತ ಪರ 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ.
icon

(5 / 5)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು