ಮೊದಲ ಏಕದಿನ ಪಂದ್ಯಕ್ಕೆ ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11; ವರುಣ್ ಚಕ್ರವರ್ತಿ ಪದಾರ್ಪಣೆ?
- India Playing 11: ಟೀಮ್ ಇಂಡಿಯಾ ಆಡುವ 11ರ ಬಳಗವನ್ನು ಆಯ್ಕೆ ಮಾಡಲು ಗೊಂದಲಕ್ಕೆ ಒಳಗಾಗಿದೆ. ಅದರಲ್ಲೂ ಸ್ಪಿನ್ ವಿಭಾಗ. ಏಕೆಂದರೆ ಸ್ಪಿನ್ ವಿಭಾಗದಲ್ಲಿ ಮೂವರು ಸ್ಪಿನ್ ಆಲ್ರೌಂಡರ್ಗಳು ಸೇರಿ ಐವರಿದ್ದಾರೆ.
- India Playing 11: ಟೀಮ್ ಇಂಡಿಯಾ ಆಡುವ 11ರ ಬಳಗವನ್ನು ಆಯ್ಕೆ ಮಾಡಲು ಗೊಂದಲಕ್ಕೆ ಒಳಗಾಗಿದೆ. ಅದರಲ್ಲೂ ಸ್ಪಿನ್ ವಿಭಾಗ. ಏಕೆಂದರೆ ಸ್ಪಿನ್ ವಿಭಾಗದಲ್ಲಿ ಮೂವರು ಸ್ಪಿನ್ ಆಲ್ರೌಂಡರ್ಗಳು ಸೇರಿ ಐವರಿದ್ದಾರೆ.
(1 / 10)
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಫೆಬ್ರವರಿ 6ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಪಂದ್ಯವು ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ. ಭರ್ಜರಿ ಕಸರತ್ತು ನಡೆಸಿರುವ ಉಭಯ ತಂಡಗಳು, ಸರಣಿ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿವೆ.
(AFP)(2 / 10)
ಮತ್ತೊಂದೆಡೆ, ಈ ಸರಣಿಯು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅಭ್ಯಾಸದ ಭಾಗವೂ ಆಗಿದೆ. ಈಗಾಗಲೇ ಟಿ20ಐ ಸರಣಿ ಗೆದ್ದಿರುವ ಭಾರತ ತಂಡವು ಏಕದಿನ ಸರಣಿ ಮೇಲೂ ಕಣ್ಣಿಟ್ಟಿದೆ. ಆದರೆ, ಇಂಗ್ಲೆಂಡ್ ಟಿ20 ಸರಣಿ ಸೋಲಿನ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಅದಕ್ಕಾಗಿ ಭಾರೀ ಸಿದ್ದತೆ ನಡೆಸಿದೆ.
(AFP)(3 / 10)
ಇಂಗ್ಲೆಂಡ್ ತಂಡವು ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿಯೇ ತನ್ನ ಬಲಿಷ್ಠ ಪ್ಲೇಯಿಂಗ್ 11 ಘೋಷಿಸಿದೆ. ಆದರೆ, ಟೀಮ್ ಇಂಡಿಯಾ ಆಡುವ 11ರ ಬಳಗವನ್ನು ಆಯ್ಕೆ ಮಾಡಲು ಗೊಂದಲಕ್ಕೆ ಒಳಗಾಗಿದೆ. ಅದರಲ್ಲೂ ಸ್ಪಿನ್ ವಿಭಾಗ. ಏಕೆಂದರೆ ಸ್ಪಿನ್ ವಿಭಾಗದಲ್ಲಿ ಮೂವರು ಸ್ಪಿನ್ ಆಲ್ರೌಂಡರ್ಗಳು ಸೇರಿ ಐವರಿದ್ದಾರೆ.
(Snehal Sontakke)(4 / 10)
ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಸ್ಪಿನ್ ಆಲ್ರೌಂಡರ್ಗಳಾಗಿದ್ದರೆ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಸ್ಪೆಷಲಿಸ್ಟ್ ಸ್ಪಿನ್ನರ್ಗಳು. ವರುಣ್ರನ್ನು ಫೆ 4ರಂದು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
(5 / 10)
ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ 14 ವಿಕೆಟ್ ಉರುಳಿಸಿ ಉತ್ತಮ ಪ್ರದರ್ಶನ ನೀಡಿದ್ದ ಹಿನ್ನೆಲೆ ಮತ್ತೆ ಅಂತಹದ್ದೇ ನಿರೀಕ್ಷೆಯೊಂದಿಗೆ ವರುಣ್ರನ್ನು ಏಕದಿನ ಸರಣಿಗೂ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಆಡುವ 11ರಲ್ಲೂ ಅವಕಾಶದ ನೀರೀಕ್ಷೆ ಇದೆ.
(BCCI - X)(6 / 10)
ಆರಂಭಿಕರಾಗಿ ರೋಹಿತ್, ಗಿಲ್ ಆಡುವುದು ಖಚಿತ. ವಿರಾಟ್ ಮತ್ತು ಅಯ್ಯರ್ ಕ್ರಮವಾಗಿ 3, 4ರಲ್ಲಿ ಆಡುತ್ತಾರೆ. ವಿಕೆಟ್ ಕೀಪರ್ ಸ್ಥಾನಕ್ಕೆ ಪಂತ್ ಮತ್ತು ರಾಹುಲ್ ನಡುವೆ ಪೈಪೋಟಿ ನಡೆಯಲಿದೆ. ಆದರೆ ಮೊದಲ ಆಯ್ಕೆ ಪಂತ್ ಎಂದು ಈ ಹಿಂದೆ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೇಳಿದ್ದರು. ಹೀಗಾಗಿ ಅವರೇ ಆಡಬಹುದು ಎನ್ನಲಾಗಿದೆ.
(AFP)(7 / 10)
ವೇಗದ ಆಲ್ರೌಂಡರ್ ಮತ್ತು ಫಿನಿಷರ್ ಪಾತ್ರವನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಳ್ಳಲಿದ್ದಾರೆ. ಆದರೆ ಕೆಳ ಕ್ರಮಾಂಕದಲ್ಲಿ ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ ಮತ್ತು ಇಬ್ಬರು ಸ್ಪಿನ್ ಆಲ್ರೌಂಡರ್ಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರ ಟೀಮ್ ಮ್ಯಾನೇಜ್ಮೆಂಟ್ನದ್ದು.
(PTI)(8 / 10)
ಅದರಂತೆ, ಸ್ಪಿನ್ ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಸ್ಥಾನ ಪಡೆಯುವ ಸ್ಥಾನ ಪಡೆಯುವುದು ಎನ್ನಲಾಗಿದೆ. ಆದರೆ ಸ್ಪೆಷಲಿಸ್ಟ್ ಸ್ಪಿನ್ನರ್ ಸ್ಥಾನಕ್ಕೆ ಕುಲ್ದೀಪ್ ಬದಲಿಗೆ ವರುಣ್ಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಟಿ20ಐ ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ್ದೇ ಇದಕ್ಕೆ ಕಾರಣ ಎಂದು ವರದಿಯಾಗಿದೆ.
(PTI)(9 / 10)
ಇನ್ನು ವೇಗದ ಬೌಲರ್ಗಳಾಗಿ ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್ ಕಣಕ್ಕಿಳಿಯಲಿದ್ದಾರೆ. ಒಟ್ಟು ಮೂವರು ವೇಗಿಗಳು, ಮೂವರು ಸ್ಪಿನ್ನರ್ಗಳೊಂದಿಗೆ ಭಾರತ ತಂಡ ಆಡುವ ನಿರೀಕ್ಷೆ ಇದೆ.
(Surjeet Yadav)ಇತರ ಗ್ಯಾಲರಿಗಳು