ಕನ್ನಡ ಸುದ್ದಿ  /  Photo Gallery  /  Cricket 6 Debutants Performance In India Vs England Test Series Sarfaraz Khan Dhruv Jurel Rajat Patidar Akash Deep Jra

ಜುರೆಲ್‌ ಟಾಪ್‌, ಪಾಟೀದಾರ್‌ ಪ್ಲಾಪ್; ಭಾರತ vs ಇಂಗ್ಲೆಂಡ್ ಸರಣಿಯಲ್ಲಿ ಪದಾರ್ಪಣೆ ಮಾಡಿದ ಆಟಗಾರರ ಪ್ರದರ್ಶನ ಹೀಗಿತ್ತು

  • India vs England: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂಲಕ ಉಭಯ ತಂಡಗಳಲ್ಲಿ 6 ಕ್ರಿಕೆಟಿಗರು ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಎಲ್ಲಾ ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡೋಣ.

ಬ್ಯಾಟರ್‌ ಹಾಗೂ ವಿಕೆಟ್‌ ಕೀಪರ್ ಧ್ರುವ್ ಜುರೆಲ್‌, ಟೆಸ್ಟ್ ವೃತ್ತಿಜೀವನವನ್ನು ಯಶಸ್ವಿಯಾಗಿ ಆರಂಭಿಸಿದರು. ದಿನೇಶ್ ಕಾರ್ತಿಕ್ ಅವರಿಂದ ಭಾರತದ ಕ್ಯಾಪ್ ಪಡೆದ ಜುರೆಲ್, ತಾವಾಡಿದ ಎರಡನೇ ಟೆಸ್ಟ್‌ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವೃತ್ತಿಜೀವನದ ಅತ್ಯುತ್ತಮ 90 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 39 ರನ್ ಗಳಿಸಿದರು.
icon

(1 / 6)

ಬ್ಯಾಟರ್‌ ಹಾಗೂ ವಿಕೆಟ್‌ ಕೀಪರ್ ಧ್ರುವ್ ಜುರೆಲ್‌, ಟೆಸ್ಟ್ ವೃತ್ತಿಜೀವನವನ್ನು ಯಶಸ್ವಿಯಾಗಿ ಆರಂಭಿಸಿದರು. ದಿನೇಶ್ ಕಾರ್ತಿಕ್ ಅವರಿಂದ ಭಾರತದ ಕ್ಯಾಪ್ ಪಡೆದ ಜುರೆಲ್, ತಾವಾಡಿದ ಎರಡನೇ ಟೆಸ್ಟ್‌ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವೃತ್ತಿಜೀವನದ ಅತ್ಯುತ್ತಮ 90 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 39 ರನ್ ಗಳಿಸಿದರು.(ANI)

ವಿಶಾಖಪಟ್ಟಣದಲ್ಲಿ ನಡೆದ 2ನೇ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ರಜತ್ ಪಾಟೀದಾರ್, ಎರಡು ಬಾರಿ ಡಕೌಟ್‌ ಸೇರಿದಂತೆ 6 ಇನ್ನಿಂಗ್ಸ್‌ಗಳಿಂದ ಕೇವಲ 63 ರನ್‌ ಮಾತ್ರ ಗಳಿಸಿದ್ದಾರೆ. ಸತತ ಮೂರು ಪಂದ್ಯಗಳಲ್ಲಿ ವಿಫಲರಾಗಿರುವ ಅವರು ಮುಂದಿನ ಪಂದ್ಯಗಳಲ್ಲಿ ಅವಕಾಶ ಪಡೆಯುವುದು ಅನುಮಾನವಾಗಿದೆ.
icon

(2 / 6)

ವಿಶಾಖಪಟ್ಟಣದಲ್ಲಿ ನಡೆದ 2ನೇ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ರಜತ್ ಪಾಟೀದಾರ್, ಎರಡು ಬಾರಿ ಡಕೌಟ್‌ ಸೇರಿದಂತೆ 6 ಇನ್ನಿಂಗ್ಸ್‌ಗಳಿಂದ ಕೇವಲ 63 ರನ್‌ ಮಾತ್ರ ಗಳಿಸಿದ್ದಾರೆ. ಸತತ ಮೂರು ಪಂದ್ಯಗಳಲ್ಲಿ ವಿಫಲರಾಗಿರುವ ಅವರು ಮುಂದಿನ ಪಂದ್ಯಗಳಲ್ಲಿ ಅವಕಾಶ ಪಡೆಯುವುದು ಅನುಮಾನವಾಗಿದೆ.(AFP)

ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಬದಲಿಗೆ ಅವಕಾಶ ಪಡೆದ ಆಕಾಶ್ ದೀಪ್, ಆರಂಭದಲ್ಳೇ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಆಂಗ್ಲ ಆರಂಭಿಕರಾದ ಝಾಕ್ ಕ್ರಾಲಿ, ಬೆನ್ ಡಕೆಟ್ ಮತ್ತು ಒಲ್ಲಿ ಪೋಪ್ ಅವರನ್ನು ಔಟ್ ಮಾಡುವ ಮೂಲಕ ಪ್ರಭಾವ ಬೀರಿದರು.
icon

(3 / 6)

ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಬದಲಿಗೆ ಅವಕಾಶ ಪಡೆದ ಆಕಾಶ್ ದೀಪ್, ಆರಂಭದಲ್ಳೇ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಆಂಗ್ಲ ಆರಂಭಿಕರಾದ ಝಾಕ್ ಕ್ರಾಲಿ, ಬೆನ್ ಡಕೆಟ್ ಮತ್ತು ಒಲ್ಲಿ ಪೋಪ್ ಅವರನ್ನು ಔಟ್ ಮಾಡುವ ಮೂಲಕ ಪ್ರಭಾವ ಬೀರಿದರು.(ANI)

ರಾಜ್‌ಕೋಟ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯವಾಡಿದ ಸರ್ಫರಾಜ್ ಖಾನ್, ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ಅರ್ಧಶತಕ ಸಿಡಿಸುವ ಮೂಲಕ ಅಬ್ಬರಿಸಿದರು. ಅಲ್ಲದೆ ವೇಗವಾಗಿ ಬ್ಯಾಟ್‌ ಬೀಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿದರು.
icon

(4 / 6)

ರಾಜ್‌ಕೋಟ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯವಾಡಿದ ಸರ್ಫರಾಜ್ ಖಾನ್, ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ಅರ್ಧಶತಕ ಸಿಡಿಸುವ ಮೂಲಕ ಅಬ್ಬರಿಸಿದರು. ಅಲ್ಲದೆ ವೇಗವಾಗಿ ಬ್ಯಾಟ್‌ ಬೀಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿದರು.(PTI)

ಇಂಗ್ಲೆಂಡ್‌ ತಂಡದ ಎಡಗೈ ಸ್ಪಿನ್ನರ್ ಟಾಮ್ ಹಾರ್ಟ್ಲಿ 11 ವಿಕೆಟ್ ಪಡೆದು ಅಬ್ಬರಿಸಿದ್ದಾರೆ. ಅಲ್ಲದೆ 159 ರನ್ ಗಳಿಸುವ ಮೂಲಕ ಭಾರತಕ್ಕೆ ಕಂಟಕರಾಗಿದ್ದಾರೆ.
icon

(5 / 6)

ಇಂಗ್ಲೆಂಡ್‌ ತಂಡದ ಎಡಗೈ ಸ್ಪಿನ್ನರ್ ಟಾಮ್ ಹಾರ್ಟ್ಲಿ 11 ವಿಕೆಟ್ ಪಡೆದು ಅಬ್ಬರಿಸಿದ್ದಾರೆ. ಅಲ್ಲದೆ 159 ರನ್ ಗಳಿಸುವ ಮೂಲಕ ಭಾರತಕ್ಕೆ ಕಂಟಕರಾಗಿದ್ದಾರೆ.(PTI)

ಶೋಯೆಬ್ ಬಶೀರ್ ಪ್ರಸಕ್ತ ಸರಣಿಯಲ್ಲಿ ಒಟ್ಟು 12 ವಿಕೆಟ್‌ ಕಬಳಿಸಿದ್ದಾರೆ. 2 ಪಂದ್ಯಗಳಲ್ಲಿ ಆಡಿರುವ ಅವರು ಒಂದು ಬಾರಿ ಐದು ವಿಕೆಟ್‌ ಗೊಂಚಲನ್ನು ಪಡೆದಿದ್ದಾರೆ.
icon

(6 / 6)

ಶೋಯೆಬ್ ಬಶೀರ್ ಪ್ರಸಕ್ತ ಸರಣಿಯಲ್ಲಿ ಒಟ್ಟು 12 ವಿಕೆಟ್‌ ಕಬಳಿಸಿದ್ದಾರೆ. 2 ಪಂದ್ಯಗಳಲ್ಲಿ ಆಡಿರುವ ಅವರು ಒಂದು ಬಾರಿ ಐದು ವಿಕೆಟ್‌ ಗೊಂಚಲನ್ನು ಪಡೆದಿದ್ದಾರೆ.(PTI)


IPL_Entry_Point

ಇತರ ಗ್ಯಾಲರಿಗಳು