ಇಂಗ್ಲೆಂಡ್ ಸರಣಿ, ಚಾಂಪಿಯನ್ಸ್ ಟ್ರೋಫಿ; ಭಾರತ ತಂಡಕ್ಕೆ ಆಯ್ಕೆಯಾಗಲು 6 ವಿಕೆಟ್ ಕೀಪರ್‌ಗಳ ನಡುವೆ ಸ್ಪರ್ಧೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂಗ್ಲೆಂಡ್ ಸರಣಿ, ಚಾಂಪಿಯನ್ಸ್ ಟ್ರೋಫಿ; ಭಾರತ ತಂಡಕ್ಕೆ ಆಯ್ಕೆಯಾಗಲು 6 ವಿಕೆಟ್ ಕೀಪರ್‌ಗಳ ನಡುವೆ ಸ್ಪರ್ಧೆ

ಇಂಗ್ಲೆಂಡ್ ಸರಣಿ, ಚಾಂಪಿಯನ್ಸ್ ಟ್ರೋಫಿ; ಭಾರತ ತಂಡಕ್ಕೆ ಆಯ್ಕೆಯಾಗಲು 6 ವಿಕೆಟ್ ಕೀಪರ್‌ಗಳ ನಡುವೆ ಸ್ಪರ್ಧೆ

  • ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ 2 ಸರಣಿ ಮತ್ತು ಅದರ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಏಕದಿನ ಸರಣಿ ಜೊತೆಗೆ ಚಾಂಪಿಯನ್ಸ್ ಟ್ರೋಫಿಗೂ ಒಂದೇ ಬಾರಿ ಭಾರತ ತಂಡದ ಆಯ್ಕೆ ಮಾಡುವುದು ಬಹುತೇಕ ಖಚಿತ. ಆಟಗಾರರ ನಡುವೆ ಭಾರಿ ಸ್ಪರ್ಧೆ ಇದ್ದು, ಒಂದು ಸ್ಥಾನಕ್ಕೆ ಹಲವರು ಕಾಯುತ್ತಿದ್ದಾರೆ.

ಪ್ರಮುಖ ಟೂರ್ನಿಗೆ ಆಯ್ಕೆಯಾಗಲು ಅರ್ಧ ಡಜನ್‌ನಷ್ಟು ವಿಕೆಟ್ ಕೀಪರ್‌ಗಳು ಕಾಯುತ್ತಿದ್ದಾರೆ. ಅವರಲ್ಲಿ ಇಬ್ಬರು ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಕೆಲವು ವಿಕೆಟ್‌ ಕೀಪರ್‌ಗಳು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆಯಾಗುವ ರೇಸ್‌ನಿಂದ ಹೊರಗುಳಿಯಲಿದ್ದಾರೆ.
icon

(1 / 8)

(AFP)

2023ರ ಏಕದಿನ ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್ ಭಾರತ ಪರ ವಿಕೆಟ್ ಕೀಪಿಂಗ್ ಮಾಡಿದ್ದರು. ಆ ಸಮಯದಲ್ಲಿ ರಿಷಭ್ ಪಂತ್ ಆಯ್ಕೆಗೆ ಲಭ್ಯವಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಗೆ ರಾಹುಲ್‌ ಸ್ಥಾನ ಪಡೆಯದಿರುವುದು ಖಚಿತವಾಗಿದೆ. ಏಕೆಂದರೆ ತಮ್ಮನ್ನು ಆಯ್ಕೆಗೆ ಪರಿಗಣಿಸದಂತೆ ಕನ್ನಡಿಗ ಮನವಿ ಮಾಡಿದ್ದಾರೆ. ಇದೇ ವೇಳೆ ಚಾಂಪಿಯನ್ಸ್ ಟ್ರೋಫಿಗೆ ರಾಹುಲ್ ಭಾರತದ ಮೊದಲನೇ ಆಯ್ಕೆಯ ವಿಕೆಟ್‌ ಕೀಪರ್ ಆಗುವ ಸಾಧ್ಯತೆಯಿದೆ.
icon

(2 / 8)

(FP)

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ರಿಷಭ್ ಪಂತ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿಲ್ಲ. ಆದರೆ, ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತ. ಪಂತ್ ತಂಡದಲ್ಲಿ ಸ್ಥಾನ ಪಡೆದರೆ ಎರಡನೇ ಆಯ್ಕೆಯ ವಿಕೆಟ್ ಕೀಪರ್ ಆಗಲಿದ್ದಾರೆ. ಅಂತಹ ಸಂದರ್ಭದಲ್ಲಿ, ಕೆಎಲ್ ರಾಹುಲ್‌ ಕೂಡಾ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಬಹುದು.
icon

(3 / 8)

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ಸ್ಯಾಮ್ಸನ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆಯಬಹುದು. ಆದರೆ, ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಹೆಚ್ಚುವರಿ ವಿಕೆಟ್ ಕೀಪರ್ ಅಥವಾ ಬ್ಯಾಟರ್‌ ಆಗಿ ಆಯ್ಕೆಯಾಗುವುದು ಕಷ್ಟ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಇವರ ಪರಿಗಣನೆ ಸಾಧ್ಯತೆ ಇಲ್ಲ.
icon

(4 / 8)

ಇಶಾನ್ ಕಿಶನ್ ಕೆಲವು ಸಮಯದಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅವರು, ಸದ್ಯ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇಲ್ಲ. ಇಂಗ್ಲೆಂಡ್ ವಿರುದ್ಧದ ಎರಡು ಸೀಮಿತ ಓವರ್‌ಗಳ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಇಶಾನ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇಲ್ಲ.
icon

(5 / 8)

(PTI)

ಧ್ರುವ್ ಜುರೆಲ್ ಭಾರತೀಯ ಟೆಸ್ಟ್ ತಂಡದ ಎರಡನೇ ಆಯ್ಕೆಯ ವಿಕೆಟ್ ಕೀಪರ್. ಆದಾಗ್ಯೂ, ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಅವರನ್ನು ಪರಿಗಣಿಸುವುದು ಕಷ್ಟ. ಹೀಗಾಗಿ ಜುರೆಲ್ ಇಂಗ್ಲೆಂಡ್ ವಿರುದ್ಧದ ಟಿ20, ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಆಡುವ ಸಾಧ್ಯತೆಯಿಲ್ಲ.
icon

(6 / 8)

ಜಿತೇಶ್ ಶರ್ಮಾ ಅವರನ್ನು ಟಿ20 ಕ್ರಿಕೆಟ್‌ಗೆ ಆಯ್ಕೆದಾರರು ಪರಿಗಣಿಸಬಹುದು. ಆದರೆ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಅಲ್ಲ. ಆದಾಗ್ಯೂ, ಜಿತೇಶ್ ಏಕದಿನ ಸ್ವರೂಪದಿಂದ ದೂರ ಉಳಿದಿದ್ದಾರೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಜಿತೇಶ್ ಅವರನ್ನು ಪರೀಕ್ಷಿಸಬಹುದು. ಆದರೆ, ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಪ್ರವೇಶಿಸುವ ಸಾಧ್ಯತೆಯಿಲ್ಲ.
icon

(7 / 8)

ಫೆಬ್ರುವರಿ 19ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದ್ದು, ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿ ಜನವರಿ 22ರಿಂದ ಆರಂಭವಾಗಲಿದೆ. ಅದರ ಬೆನ್ನಲ್ಲೇ ಏಕದಿನ ಸರಣಿ ಮೊದಲ್ಗೊಳ್ಳಲಿದೆ. ಹೀಗಾಗಿ ಜನವರಿ 12ರಂದು ಈ ಎಲ್ಲಾ ಟೂರ್ನಿಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
icon

(8 / 8)

ಇತರ ಗ್ಯಾಲರಿಗಳು