ಈ ಸಲ ಕಪ್ ನಮ್ಮದಾಗಲು ಸಪ್ತಸೂತ್ರಗಳು; ಈ ಕಾರಣಕ್ಕೆ ಆರ್‌ಸಿಬಿ ಐಪಿಎಲ್ 2024 ಟ್ರೋಫಿ ಗೆಲ್ಲುವ ಫೇವರೆಟ್
- RR vs RCB: ಪ್ರಚಂಡ ಫಾರ್ಮ್‌ನಲ್ಲಿರುವ ಆರ್‌ಸಿಬಿ ತಂಡವು, ಕಳಪೆ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎಲಿಮನೇಟರ್ ಪಂದ್ಯದಲ್ಲಿ ಎದುರಿಸಲು ಸಜ್ಜಾಗಿದೆ. ಈ ಬಾರಿ ಆರ್‌ಸಿಬಿ ಗೆಲ್ಲುವ ಫೇವರೆಟ್ ತಂಡವಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಮುಂದಿನ ಸತತ ಎರಡು ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಲಗ್ಗೆ ಹಾಕಲು ತಂಡಕ್ಕೆ ಸಪ್ತಸೂತ್ರಗಳು ಹೀಗಿವೆ.
- RR vs RCB: ಪ್ರಚಂಡ ಫಾರ್ಮ್‌ನಲ್ಲಿರುವ ಆರ್‌ಸಿಬಿ ತಂಡವು, ಕಳಪೆ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎಲಿಮನೇಟರ್ ಪಂದ್ಯದಲ್ಲಿ ಎದುರಿಸಲು ಸಜ್ಜಾಗಿದೆ. ಈ ಬಾರಿ ಆರ್‌ಸಿಬಿ ಗೆಲ್ಲುವ ಫೇವರೆಟ್ ತಂಡವಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಮುಂದಿನ ಸತತ ಎರಡು ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಲಗ್ಗೆ ಹಾಕಲು ತಂಡಕ್ಕೆ ಸಪ್ತಸೂತ್ರಗಳು ಹೀಗಿವೆ.
(1 / 7)
ಸತತ ಗೆಲುವು, ಅಚ್ಚರಿಯ ಕಂಬ್ಯಾಕ್: ಐಪಿಎಲ್ 2024ರಲ್ಲಿ ಆರ್‌ಸಿಬಿಯ ಆರಂಭ ಎಷ್ಟು ಕಳಪೆಯಾಗಿತ್ತು ಎಂಬುದು ಗೊತ್ತೇ ಇದೆ. ಕೇವಲ ಒಂದು ಪಂದ್ಯ ಗೆದ್ದು ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇತ್ತು. ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದ ನಂತರ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ, ಕೊನೆಯಲ್ಲಿ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಲಗ್ಗೆ ಹಾಕಿದೆ. ತವರು ಮೈದಾನದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಸೂಪರ್ ಕಿಂಗ್ಸ್ ವಿರುದ್ಧದ ಗೆಲುವು ತಂಡದ ಭರವಸೆ ಹೆಚ್ಚಿಸಿದೆ.
(AFP)(2 / 7)
ಬ್ಯಾಟರ್‌ಗಳ ಫಾರ್ಮ್: ಆರಂಭದಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿ, ಆರ್‌ಸಿಬಿ ಬ್ಯಾಟರ್‌ಗಳು ಯಾರೂ ಅಬ್ಬರಿಸಲಿಲ್ಲ. ಆದರೆ, ಪಂದ್ಯಾವಳಿಯು ಪ್ಲೇಆಫ್‌ಗೆ ಸಮೀಪಿಸುತ್ತಿರುವಾಗ ಬ್ಯಾಟರ್‌ಗಳು ನಿಧಾನವಾಗಿ ಲಯ ಕಂಡುಕೊಂಡರು. ಇದಕ್ಕೆ ಚೆನ್ನೈ ವಿರುದ್ಧ ತಂಡದ ಆಲ್‌ರೌಂಡ್ ಪ್ರದರ್ಶನವೇ ಸಾಕ್ಷಿ. ರಜತ್ ಪಾಟೀದಾರ್ ಮತ್ತು ಕ್ಯಾಮರೂನ್ ಗ್ರೀನ್ ಕೂಡಾ ಅಬ್ಬರಿಸುತ್ತಿದ್ದಾರೆ.
(AFP)(3 / 7)
ಪ್ಲೇಆಫ್ ಆಡಿದ ಅನುಭವ: ಆರ್‌ಸಿಬಿಯು ಇನ್ನೂ ಐಪಿಎಲ್ ಟ್ರೋಫಿ ಗೆದ್ದಿಲ್ಲವಾದರೂ, ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಕಳೆದ ಐದು ವರ್ಷಗಳಲ್ಲಿ ತಂಡವು ನಾಲ್ಕು ಬಾರಿ ಪ್ಲೇಆಫ್ ತಲುಪಿರುವುದು ಇದಕ್ಕೆ ಸಾಕ್ಷಿ. ಈ ಹಿಂದೆ ಮೂರು ಬಾರಿ ಫೈನಲ್ ಆಡಿದ ಅನುಭವ ಕೂಡಾ ತಂಡಕ್ಕಿದೆ. ಕಪ್ ಗೆದ್ದಿಲ್ಲವಾದರೂ, ಅನುಭವ ಇದೆ.
(AFP)(4 / 7)
ಅನುಭವಿ ಆಟಗಾರರು: ತಂಡದಲ್ಲಿ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮೊಹಮ್ಮದ್ ಸಿರಾಜ್ಗ್ಲೆನ್ ಮ್ಯಾಕ್ಟ್‌ವೆಲ್ ಅವರಂಥ ಅನುಭವಿ ಆಟಗಾರರಿದ್ದಾರೆ. ಯುವ ಆಟಗಾರರು ಕೂಡಾ ಇವರ ಮಾರ್ಗದರ್ಶನದಲ್ಲಿ ಮಿಂಚುತ್ತಿದ್ದಾರೆ.
(AFP)(5 / 7)
ರಾಜಸ್ಥಾನ್ ರಾಯಲ್ಸ್ ದರ್ಬಲ್ಯವೇ ಆರ್‌ಸಿಬಿಗೆ ಬಲ: ರಾಜಸ್ಥಾನ್ ರಾಯಲ್ಸ್ ತಂಡವು ಟೂರ್ನಿಯ ಆರಂಭಿಕ ಒಂಬತ್ತು ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದಿತ್ತು. ಆದರೆ, ಕೊನೆಯ ಐದು ಪಂದ್ಯಗಳಲ್ಲಿ ತಂಡವು ಒಂದರಲ್ಲೂ ಗೆದ್ದಿಲ್ಲ. ಏಪ್ರಿಲ್ ತಿಂಗಳಲ್ಲಿ ಗೆಲುವಿನ ನಾಗಾಲೋಟದಲ್ಲಿದ್ದ ರಾಯಲ್ಸ್, ಮೇ ತಿಂಗಳಲ್ಲಿ ಲಯ ಕಳೆದುಕೊಂಡಿದೆ. ಈ ತಿಂಗಳಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಂದರಲ್ಲೂ ಸಂಜು ಸ್ಯಾಮ್ಸನ್ ಪಡೆ ಗೆದ್ದಿಲ್ಲ. ಇದರಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋತರೆ, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ.
(PTI)(6 / 7)
ಫಾರ್ಮ್‌ನಲ್ಲಿಲ್ಲದ ರಾಜಸ್ಥಾನ್ ರಾಯಲ್ಸ್: ರಾಜಸ್ಥಾನ್ ಕೊನೆಯ ಬಾರಿ ಆಡಿದ್ದು ಮೇ 15ರಂದು, 7 ದಿನಗಳಿಂದ ತಂಡ ಒಂದೂ ಪಂದ್ಯ ಆಡಿಲ್ಲ. ಇದು ಆರ್‌ಸಿಬಿ ತಂಡಕ್ಕೆ ಲಾಭವಾಗಲಿದೆ. ಕಳಪೆ ಫಾರ್ಮ್‌ನಲ್ಲಿರುವ ರಾಜಸ್ಥಾನಕ್ಕೆ ಉತ್ತಮ ಫರ್ಮ್‌ನಲ್ಲಿರುವ ಆರ್‌ಸಿಬಿ ಖಂಡಿತಾ ಕಂಟಲವಾಗಲಿದೆ.
(ANI )(7 / 7)
ರಾಜಸ್ಥಾನ ತಂಡದಲ್ಲಿ ನಾಯಕ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರೂ ಆರ್‌ಸಿಬಿಕೆ ಕಂಟಕರಾಗಬಹುದು. ಆರ್‌ಸಿಬಿ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಬಟ್ಲರ್ ಈಗ ತಂಡದಲ್ಲಿಲ್ಲ. ಹೀಗಾಗಿ ಈ ಇಬ್ಬರನ್ನು ತಂಡ ಮಟ್ಟ ಹಾಕಬೇಕಿದೆ. ಟೂರ್ನಿಯಲ್ಲಿ ಸಂಜು 5 ಅರ್ಧಶತಕ ಸಿಡಿಸಿದ್ದರೆ, ಪರಾಗ್ 4 ಅರ್ಧಶತಕ ಬಾರಿಸಿದ್ದಾರೆ.
(ANI )ಇತರ ಗ್ಯಾಲರಿಗಳು