ಅಭಿಷೇಕ್ ಶರ್ಮಾ ಅಬ್ಬರದ ಶತಕಕ್ಕೆ ಬೆಚ್ಚಿದ ಪಂಜಾಬ್‌; 141 ರನ್‌ ಸಿಡಿಸಿ ಹಲವು ದಾಖಲೆಗಳ ಅಳಿಸಿದ ಎಸ್‌ಆರ್‌ಎಚ್‌ ಆಟಗಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಭಿಷೇಕ್ ಶರ್ಮಾ ಅಬ್ಬರದ ಶತಕಕ್ಕೆ ಬೆಚ್ಚಿದ ಪಂಜಾಬ್‌; 141 ರನ್‌ ಸಿಡಿಸಿ ಹಲವು ದಾಖಲೆಗಳ ಅಳಿಸಿದ ಎಸ್‌ಆರ್‌ಎಚ್‌ ಆಟಗಾರ

ಅಭಿಷೇಕ್ ಶರ್ಮಾ ಅಬ್ಬರದ ಶತಕಕ್ಕೆ ಬೆಚ್ಚಿದ ಪಂಜಾಬ್‌; 141 ರನ್‌ ಸಿಡಿಸಿ ಹಲವು ದಾಖಲೆಗಳ ಅಳಿಸಿದ ಎಸ್‌ಆರ್‌ಎಚ್‌ ಆಟಗಾರ

  • ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ, ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದ್ದಾರೆ. ಈಗಾಗಲೇ ಟೀಮ್‌ ಇಂಡಿಯಾ ಪರ ಆಡಿದ ಎರಡನೇ ಪಂದ್ಯದಲ್ಲೇ ಶತಕ ಬಾರಿಸಿದ್ದ ಯುವ ಬ್ಯಾಟರ್‌, ಎಸ್‌ಆರ್‌ಎಚ್‌ ಪರ ಅಬ್ಬರದ ಸೆಂಚುರಿ ಬಾರಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ.

ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಭಿಷೇಕ್‌ ಅಬ್ಬರ ಕಂಡುಬಂತು. ಆರಂಭದಿಂದಲೂ ವೇಗದ ಆಟಕ್ಕೆ ಮಣೆ ಹಾಕಿದ ಅವರು ಕೇವಲ 40 ಎಸೆತಗಳಲ್ಲಿ ಸೆಂಚುರಿ ಬಾರಿಸಿದರು.
icon

(1 / 9)

(REUTERS)

ಇದು ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಒಟ್ಟಾರೆ ಮೂರನೇ ಶತಕ. ಎಸ್‌ಆರ್‌ಎಚ್‌ ತಂಡದ ಪರ ಎರಡನೇ ಶತಕ. ಟೂರ್ನಿಯಲ್ಲಿ ತಂಡದ ಮೊದಲ ಪಂದ್ಯದಲ್ಲಿ ಇಶಾನ್‌ ಕಿಶನ್‌ ಸೆಂಚುರಿ ಬಾರಿಸಿದ್ದರು.
icon

(2 / 9)

(AFP)

ಕೇವಲ 40 ಎಸೆತಗಳಲ್ಲಿ ಅಭಿಷೇಕ್‌ ಬಾರಿಸಿದ ಶತಕವು, ಐಪಿಎಲ್‌ ಇತಿಹಾಸದಲ್ಲಿ 6ನೇ ವೇಗದ ಶತಕವಾಗಿದೆ.
icon

(3 / 9)

ಶತಕ ಸಿಡಿಸಿದ ಅಭಿಷೇಕ್‌, ಭರ್ಜರಿ ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಸ್ಟೇಡಿಯಂನಲ್ಲಿ ಅಭಿಷೇಕ್‌ ಜಯಘೋಷ ಕೇಳಿಬಂತು. ಸಂಭ್ರಮದ ನಡುವೆ ಅಭಿಷೇಕ್‌ ಶರ್ಮಾ ಚೀಟಿಯೊಂದನ್ನು ಹಿಡಿದು ತೋರಿಸಿದರು. ಅದರಲ್ಲಿ THIS ONE IS FOR ORANGE ARMY ಎಂದು ಬರೆಯಲಾಗಿತ್ತು. ಅಂದರೆ, ಅಭಿಷೇಕ್‌ ಶರ್ಮಾ ಈ ಶತಕವನ್ನು ಎಸ್‌ಆರ್‌ಎಚ್‌ ತಂಡಕ್ಕೆ ನಿರಂತರ ಬೆಂಬಲ ವ್ಯಕ್ತಪಡಿಸುತ್ತಿರುವ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.
icon

(4 / 9)

ಸನ್‌ರೈಸರ್ಸ್‌ ತಂಡವು ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿತ್ತು. ಇದು ತಂಡದ ಆತ್ಮವಿಶ್ವಾಸ ಕುಗ್ಗಿತ್ತು. ಹೀಗಾಗಿ ಈ ಪಂದ್ಯದಲ್ಲಿ ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ತಂಡವನ್ನು ನಿರಂತರವಾಗಿ ಬೆಂಬಲಿಸಿದ ಅಭಿಮಾನಿಗಳಿಗೆ ಅಭಿಷೇಕ್‌ ಕೃತಜ್ಞತೆ ಸಲ್ಲಿಸಿದ್ದಾರೆ.
icon

(5 / 9)

ಮೊದಲ ವಿಕೆಟ್‌ಗೆ ಅಭಿಷೇಕ್‌ ಹಾಗೂ ಟ್ರಾವಿಸ್‌ ಹೆಡ್‌ 171 ರನ್‌ಗಳ ಜೊತೆಯಾಟವಾಡಿದರು.
icon

(6 / 9)

(AP)

ಪಂದ್ಯದಲ್ಲಿ ಅಂತಿಮವಾಗಿ ಅಭಿಷೇಕ್‌ 55 ಎಸೆತಗಳಲ್ಲಿ 14 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್‌ ಸಹಿತ 141 ರನ್‌ ಸಿಡಿಸಿ ಔಟಾದರು.
icon

(7 / 9)

ಐಪಿಎಲ್‌ ಇತಿಹಾಸದಲ್ಲಿ ಭಾರತೀಯ ಆಟಗಾರನೊಬ್ಬನ ಗರಿಷ್ಠ ವೈಯಕ್ತಿಕ ರನ್‌ ಇದಾಗಿದೆ. ಅಲ್ಲದೆ ಎಸ್‌ಆರ್‌ಎಚ್‌ ಪರವೂ ಇದು ಗರಿಷ್ಠ ಮೊತ್ತವಾಗಿದೆ.
icon

(8 / 9)

ಅಭಿಷೇಕ್‌ ಸಿಡಿಸಿದ 141 ರನ್‌, ಐಪಿಎಲ್‌ ಇತಿಹಾಸದಲ್ಲಿ ಮೂರನೇ ಗರಿಷ್ಠ ಸ್ಕೋರ್‌ ಆಗಿದೆ.
icon

(9 / 9)

ಅಭಿಷೇಕ್‌ ಸಿಡಿಸಿದ 141 ರನ್‌, ಐಪಿಎಲ್‌ ಇತಿಹಾಸದಲ್ಲಿ ಮೂರನೇ ಗರಿಷ್ಠ ಸ್ಕೋರ್‌ ಆಗಿದೆ.
(PTI)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು