ಉಗಾಂಡ ವಿರುದ್ಧ ಗೆದ್ದು ದಾಖಲೆಗಳ ಉತ್ತುಂಗಕ್ಕೇರಿದ ಅಫ್ಘಾನಿಸ್ತಾನ; ಭಾರತವೂ ಮಾಡಿಲ್ಲ ಇಷ್ಟೊಂದು ರೆಕಾರ್ಡ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಉಗಾಂಡ ವಿರುದ್ಧ ಗೆದ್ದು ದಾಖಲೆಗಳ ಉತ್ತುಂಗಕ್ಕೇರಿದ ಅಫ್ಘಾನಿಸ್ತಾನ; ಭಾರತವೂ ಮಾಡಿಲ್ಲ ಇಷ್ಟೊಂದು ರೆಕಾರ್ಡ್

ಉಗಾಂಡ ವಿರುದ್ಧ ಗೆದ್ದು ದಾಖಲೆಗಳ ಉತ್ತುಂಗಕ್ಕೇರಿದ ಅಫ್ಘಾನಿಸ್ತಾನ; ಭಾರತವೂ ಮಾಡಿಲ್ಲ ಇಷ್ಟೊಂದು ರೆಕಾರ್ಡ್

  • ಟಿ20 ವಿಶ್ವಕಪ್‌ನಲ್ಲಿ ಉಗಾಂಡಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಅಫ್ಘಾನಿಸ್ತಾನ, ಟೂರ್ನಿಯಲ್ಲಿ ಶುಭಾರಂಭ ಮಾಡಿತು. ರಶೀದ್ ಖಾನ್ ನೇತೃತ್ವದ ಅಫ್ಘನ್‌ ತಂಡವು,ದಾಖಲೆಯ ಅಂತರದ ಗೆಲುವಿನೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಉಗಾಂಡಾ ವಿರುದ್ಧ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿತು. ರಶೀದ್ ಖಾನ್ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿ ಉಗಾಂಡಾ ತಂಡವನ್ನು 125 ರನ್‌ಗಳಿಂದ ಸೋಲಿಸಿದ್ದಾರೆ. ಪಂದ್ಯದಲ್ಲಿ ಅಫ್ಘನ್‌ ಹಲವು ದಾಖಲೆಗಳನ್ನು ನಿರ್ಮಿಸಿದೆ.
icon

(1 / 6)

ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಮೊದಲ ವಿಕೆಟ್‌ಗೆ 154 ರನ್ ಜೊತೆಯಾಟವಾಡಿದರು. ಇದು ಪುರುಷರ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಆರಂಭಿಕ ಜೊತೆಯಾಟವಾಗಿದೆ. ಇಂಗ್ಲೆಂಡ್‌ ತಂಡದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ 2022ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ 170 ರನ್‌ಗಳ ಅಜೇಯ ಜೊತೆಯಾಟವಾಡಿದ್ದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಆರಂಭಿಕ ಜೊತೆಯಾಟದ ಸಾರ್ವಕಾಲಿಕ ದಾಖಲೆಯಾಗಿದೆ. ಗುರ್ಬಾಜ್-ಜದ್ರಾನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
icon

(2 / 6)

ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಮೊದಲ ವಿಕೆಟ್‌ಗೆ 154 ರನ್ ಜೊತೆಯಾಟವಾಡಿದರು. ಇದು ಪುರುಷರ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಆರಂಭಿಕ ಜೊತೆಯಾಟವಾಗಿದೆ. ಇಂಗ್ಲೆಂಡ್‌ ತಂಡದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ 2022ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ 170 ರನ್‌ಗಳ ಅಜೇಯ ಜೊತೆಯಾಟವಾಡಿದ್ದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಆರಂಭಿಕ ಜೊತೆಯಾಟದ ಸಾರ್ವಕಾಲಿಕ ದಾಖಲೆಯಾಗಿದೆ. ಗುರ್ಬಾಜ್-ಜದ್ರಾನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.(PTI)

ರಹಮಾನುಲ್ಲಾ ಮತ್ತು ಇಬ್ರಾಹಿಂ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಆರಂಭಿಕ ಜೊತೆಯಾಟವಾಡಿದ ದಾಖಲೆ ನಿರ್ಮಿಸಿದ್ದಾರೆ.‌ ಈ ವೇಳೆ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ದಾಖಲೆಯನ್ನು ಹಿಂದಿಕ್ಕಿದರು. 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಿ ಆರಂಭಿಕರು ಭಾರತದ ವಿರುದ್ಧ ಆರಂಭಿಕರಾಗಿ 152 ರನ್‌ ಪೇರಿಸಿದ್ದರು.
icon

(3 / 6)

ರಹಮಾನುಲ್ಲಾ ಮತ್ತು ಇಬ್ರಾಹಿಂ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಆರಂಭಿಕ ಜೊತೆಯಾಟವಾಡಿದ ದಾಖಲೆ ನಿರ್ಮಿಸಿದ್ದಾರೆ.‌ ಈ ವೇಳೆ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ದಾಖಲೆಯನ್ನು ಹಿಂದಿಕ್ಕಿದರು. 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಿ ಆರಂಭಿಕರು ಭಾರತದ ವಿರುದ್ಧ ಆರಂಭಿಕರಾಗಿ 152 ರನ್‌ ಪೇರಿಸಿದ್ದರು.(AP)

ಮಂಗಳವಾರ ಉಗಾಂಡಾ ವಿರುದ್ಧ ನಡೆದ ಪಂದ್ಯದಲ್ಲಿ ರಹಮಾನುಲ್ಲಾ ಗುರ್ಬಾಜ್ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 76 ರನ್ ಗಳಿಸಿದರು. ಆ ಮೂಲಕ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ವಿಶೇಷವೆಂದರೆ, ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅಫ್ಘಾನ್ ವಿಕೆಟ್‌ ಕೀಪರ್ ಗಳಿಸಿದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.
icon

(4 / 6)

ಮಂಗಳವಾರ ಉಗಾಂಡಾ ವಿರುದ್ಧ ನಡೆದ ಪಂದ್ಯದಲ್ಲಿ ರಹಮಾನುಲ್ಲಾ ಗುರ್ಬಾಜ್ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 76 ರನ್ ಗಳಿಸಿದರು. ಆ ಮೂಲಕ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ವಿಶೇಷವೆಂದರೆ, ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅಫ್ಘಾನ್ ವಿಕೆಟ್‌ ಕೀಪರ್ ಗಳಿಸಿದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.(AP)

ರಹಮಾನುಲ್ಲಾ ಗುರ್ಬಾಜ್ ಟಿ20 ವಿಶ್ವಕಪ್‌ನಲ್ಲಿ ಅಫ್ಘನ್ ವಿಕೆಟ್ ಕೀಪರ್ ಆಗಿ ಮಾತ್ರವಲ್ಲದೆ ಬ್ಯಾಟರ್‌ ಆಗಿಯೂ ಅತಿ ಹೆಚ್ಚು ವೈಯಕ್ತಿಕ ಇನ್ನಿಂಗ್ಸ್ ಆಡಿದ್ದಾರೆ. ಈ ಹಿಂದೆ ಈ ದಾಖಲೆ ನಜೀಬುಲ್ಲಾ ಜದ್ರನ್ ಹೆಸರಿನಲ್ಲಿತ್ತು. 2021ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಜೀಬ್ 73 ರನ್ ಗಳಿಸಿದ್ದರು.
icon

(5 / 6)

ರಹಮಾನುಲ್ಲಾ ಗುರ್ಬಾಜ್ ಟಿ20 ವಿಶ್ವಕಪ್‌ನಲ್ಲಿ ಅಫ್ಘನ್ ವಿಕೆಟ್ ಕೀಪರ್ ಆಗಿ ಮಾತ್ರವಲ್ಲದೆ ಬ್ಯಾಟರ್‌ ಆಗಿಯೂ ಅತಿ ಹೆಚ್ಚು ವೈಯಕ್ತಿಕ ಇನ್ನಿಂಗ್ಸ್ ಆಡಿದ್ದಾರೆ. ಈ ಹಿಂದೆ ಈ ದಾಖಲೆ ನಜೀಬುಲ್ಲಾ ಜದ್ರನ್ ಹೆಸರಿನಲ್ಲಿತ್ತು. 2021ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಜೀಬ್ 73 ರನ್ ಗಳಿಸಿದ್ದರು.(AP)

ಗಯಾನಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಉಗಾಂಡಾ 58 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ಅಫ್ಘಾನಿಸ್ತಾನ 125 ರನ್‌ಗಳಿಂದ ಗೆದ್ದುಕೊಂಡಿತು. ದಕ್ಷಿಣ ಆಫ್ರಿಕಾದ ನಂತರ ಟಿ20 ವಿಶ್ವಕಪ್‌ನಲ್ಲ ಒಂದಕ್ಕಿಂತ ಹೆಚ್ಚು ಬಾರಿ 100 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಪಂದ್ಯ ಗೆದ್ದ ಎರಡನೇ ತಂಡ ಹೆಗ್ಗಳಿಕೆ ಅಫ್ಘಾನಿಸ್ತಾನದ್ದು. ದಕ್ಷಿಣ ಆಫ್ರಿಕಾ 2009ರಲ್ಲಿ ಸ್ಕಾಟ್ಲೆಂಡ್ ವಿರುದ್ಧ 130 ರನ್‌ಗಳಿಂದ ಹಾಗೂ 2022ರಲ್ಲಿ ಬಾಂಗ್ಲಾದೇಶ ವಿರುದ್ಧ 104 ರನ್‌ಗಳಿಂದ ಜಯ ಸಾಧಿಸಿತ್ತು. ಅಫ್ಘಾನಿಸ್ತಾನ ಈ ಹಿಂದೆ 2021ರಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯವನ್ನು 130 ರನ್‌ಗಳಿಂದ ಗೆದ್ದಿತ್ತು.
icon

(6 / 6)

ಇತರ ಗ್ಯಾಲರಿಗಳು