ಚಹಲ್-ಧನಶ್ರೀ ವಿಚ್ಛೇದನ ವದಂತಿ ಮಧ್ಯೆ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ದಾಂಪತ್ಯ ಜೀವನದಲ್ಲಿ ಬಿರುಕು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಹಲ್-ಧನಶ್ರೀ ವಿಚ್ಛೇದನ ವದಂತಿ ಮಧ್ಯೆ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ದಾಂಪತ್ಯ ಜೀವನದಲ್ಲಿ ಬಿರುಕು?

ಚಹಲ್-ಧನಶ್ರೀ ವಿಚ್ಛೇದನ ವದಂತಿ ಮಧ್ಯೆ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ದಾಂಪತ್ಯ ಜೀವನದಲ್ಲಿ ಬಿರುಕು?

  • ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ವದಂತಿ ನಡುವೆಯೇ ಭಾರತದ ಕ್ರಿಕೆಟಿಗ ಮನೀಶ್ ಪಾಂಡೆ ಅವರು ತನ್ನ ಪತ್ನಿಯೊಂದಿಗೆ ಡಿವೋರ್ಸ್ ಪಡೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ವದಂತಿಯ ನಡುವೆಯೇ ಮತ್ತೊಬ್ಬ ಕ್ರಿಕೆಟಿಗ ದಾಂಪತ್ಯ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಚಹಲ್ ಮತ್ತು ಧನಶ್ರೀ ಇನ್​ಸ್ಟಾಗ್ರಾಂನಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡ ಬಳಿಕ ವಿಚ್ಛೇದನದ ಊಹಾಪೋಹ ಹಬ್ಬಿತ್ತು.
icon

(1 / 5)

ಚಹಲ್-ಧನಶ್ರೀ ವಿಚ್ಛೇದನ ಸುದ್ದಿಯ ನಡುವೆ ಟೀಮ್ ಇಂಡಿಯಾ ಹಾಗೂ ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಮತ್ತು ನಟಿ ಆಶ್ರಿತಾ ಶೆಟ್ಟಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ರೂಮರ್ ಹಬ್ಬಿದೆ. ಇವರ ದಾಂಪತ್ಯದಲ್ಲೂ ಬಿರುಕು ಮೂಡಿದ್ದು, ಇನ್​ಸ್ಟಾಗ್ರಾಂನಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
icon

(2 / 5)

(X)

ಹಲವು ವರದಿಗಳ ಪ್ರಕಾರ, ಇಬ್ಬರು ಸಹ ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಅಳಿಸಿದ್ದಾರೆ. ಮನೀಶ್ ಮತ್ತು ಆಶ್ರಿತಾ 2019 ರಲ್ಲಿ ವಿವಾಹವಾದರು. ಮದುವೆಯ ನಂತರ, ಇಬ್ಬರೂ ವಿವಿಧ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
icon

(3 / 5)

ಜೂನ್​ನಿಂದಲೇ ಮನೀಶ್ ಮತ್ತು ಆಶ್ರಿತಾ ಅವರ ವಿಚ್ಛೇದನ ಸುದ್ದಿ ಹಬ್ಬಿತ್ತು. ಇದೀಗ ಈಗ ಊಹಾಪೋಹಗಳು ನಿಜವಾಗಲಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಮನೀಶ್ ಆಗಲಿ, ಆಶ್ರಿತಾ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 
icon

(4 / 5)

ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಗೆ ಮನೀಶ್ ಅವರನ್ನು ಕರ್ನಾಟಕ ತಂಡದಿಂದ ಕೈಬಿಡಲಾಗಿತ್ತು. ಐಪಿಎಲ್ ಮೆಗಾ ಹರಾಜಿನಲ್ಲಿ ಮೂಲ ಬೆಲೆ 75 ಲಕ್ಷಕ್ಕೆ ಕೆಕೆಆರ್ ಫ್ರಾಂಚೈಸಿ ಪಾಲಾಗಿರುವ ಮನೀಶ್, ಐಪಿಎಲ್​ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು