ಹೆಚ್ಚುವರಿ ರನ್ ನೀಡುವುದರಲ್ಲೂ ಕೆಟ್ಟ ದಾಖಲೆ ಬರೆದ ಆಸ್ಟ್ರೇಲಿಯಾ; ಈ ಕುಖ್ಯಾತಿಗೆ ಒಳಗಾದ ವಿಶ್ವದ 3ನೇ ತಂಡ, ಭಾರತಕ್ಕೆ ಅಗ್ರಸ್ಥಾನ
- Most extras conceded in a Champions Trophy innings: ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ಹೆಚ್ಚುವರಿ ರನ್ ನೀಡಿದ ಅಗ್ರ-5 ತಂಡಗಳನ್ನು ಮುಂದೆ ನೋಡೋಣ.
- Most extras conceded in a Champions Trophy innings: ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ಹೆಚ್ಚುವರಿ ರನ್ ನೀಡಿದ ಅಗ್ರ-5 ತಂಡಗಳನ್ನು ಮುಂದೆ ನೋಡೋಣ.
(1 / 7)
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದೆ. ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಸಾಕಷ್ಟು ಹೆಚ್ಚುವರಿ (ಎಕ್ಸ್ಟ್ರಾ) ರನ್ ನೀಡಿದೆ.
(AFP)(2 / 7)
ಆಸ್ಟ್ರೇಯಾ ತಂಡವು ಅತಿ ಹೆಚ್ಚು ಬಿಟ್ಟುಕೊಟ್ಟ ವಿಶ್ವದ ಮೂರನೇ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ಹೆಚ್ಚುವರಿ ರನ್ ನೀಡಿದ ಅಗ್ರ-5 ತಂಡಗಳನ್ನು ಮುಂದೆ ನೋಡೋಣ.
(3 / 7)
ಹೆಚ್ಚುವರಿ ರನ್ ಬಿಟ್ಟುಕೊಟ್ಟ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 2004ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೀನ್ಯಾ ವಿರುದ್ಧ ಭಾರತ 42 ಹೆಚ್ಚುವರಿ ರನ್ ಬಿಟ್ಟುಕೊಟ್ಟಿತ್ತು. ಇದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಇನ್ನಿಂಗ್ಸ್ ಒಂದರಲ್ಲಿ ಯಾವುದೇ ತಂಡ ಬಿಟ್ಟುಕೊಟ್ಟ ಅತ್ಯಧಿಕ ಹೆಚ್ಚುವರಿ ರನ್ ಆಗಿದೆ.
(AFP)(4 / 7)
ನೆದರ್ಲೆಂಡ್ಸ್ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 2002ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ವಿರುದ್ಧದ ಡಚ್ಚರು 38 ರನ್ ಹೆಚ್ಚುವರಿ ನೀಡಿದ್ದರು. ಈ ಪಂದ್ಯ ಕೊಲೊಂಬೊದಲ್ಲಿ ನಡೆದಿತ್ತು.
(5 / 7)
ಆಸ್ಟ್ರೇಲಿಯಾ ಈಗ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿದೆ. ಲಾಹೋರ್ನಲ್ಲಿ ಶುಕ್ರವಾರ (ಫೆ 28) ಅಫ್ಘಾನಿಸ್ತಾನ ವಿರುದ್ಧ 37 ಹೆಚ್ಚುವರಿ ರನ್ ನೀಡಿದೆ. ಇದರೊಂದಿಗೆ ತನ್ನದೇ ದಾಖಲೆಯನ್ನು ಮುರಿದಿದೆ.
(AP)(6 / 7)
2006ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊಹಾಲಿಯಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 36 ಹೆಚ್ಚುವರಿ ರನ್ ಬಿಟ್ಟುಕೊಟ್ಟಿತ್ತು. ಲಂಕನ್ನರು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇತರ ಗ್ಯಾಲರಿಗಳು