Travis Head Birthday: ತಂದೆಯಾದ ಬಳಿಕ ಮದುವೆಯಾಗಿದ್ದ ಟ್ರಾವಿಸ್ ಹೆಡ್; ಅಂದು ಸಾವಿನ ದವಡೆಯಿಂದ ಪಾರಾಗಿದ್ದರು!
- ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್, ಇಂದು (ಡಿಸೆಂಬರ್ 29) 31 ವರ್ಷ ಪೂರೈಸಿದ್ದಾರೆ. ಇಂದು ಅವರ ಹುಟ್ಟುಹಬ್ಬ. ಭಾರತ ಕ್ರಿಕೆಟ್ ತಂಡವನ್ನು ಪ್ರತಿ ಬಾರಿ ಕಾಡುವ ಹೆಡ್, ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯದಲ್ಲೂ ಆಡುತ್ತಿದ್ದಾರೆ.

(1 / 6)
ಭಾರತದ ವಿರುದ್ಧ ಪ್ರತಿ ಬಾರಿಯೂ ಅಬ್ಬರಿಸುವ ಟ್ರಾವಿಸ್ ಹೆಡ್, ಈ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿಯೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ, ನಾಲ್ಕು ಟೆಸ್ಟ್ ಪಂದ್ಯಗಳ ಎಂಟು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಸಹಿತ 411 ರನ್ ಗಳಿಸಿದ್ದಾರೆ. ಭಾರತದ ವಿರುದ್ಧ ಹೆಡ್ ಅವರ ದಾಖಲೆ ಅತ್ಯುತ್ತಮವಾಗಿದೆ.
(2 / 6)
ಆಸ್ಟ್ರೇಲಿಯಾದ ಕ್ರಿಕೆಟಿಗ ಟ್ರಾವಿಸ್ ಹೆಡ್ ಮತ್ತು ರೂಪದರ್ಶಿ ಜೆಸ್ಸಿಕಾ ಡೇವಿಸ್ ದೀರ್ಘಕಾಲದ ಡೇಟಿಂಗ್ ನಂತರ 2023ರ ಏಪ್ರಿಲ್ 15ರಂದು ಅಡಿಲೇಡ್‌ನಲ್ಲಿ ವಿವಾಹವಾದರು.
(3 / 6)
ಟ್ರಾವಿಸ್ ಮತ್ತು ಜೆಸ್ಸಿಕಾ 2021ರ ಮಾರ್ಚ್ ತಿಂಗಳಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2022ರ ಸೆಪ್ಟೆಂಬರ್ ತಿಂಗಳಲ್ಲಿ, ಅವರಿಬ್ಬರೂ ಮುದ್ದಾದ ಹೆಣ್ಣು ಮಗುವಿನ ಪೋಷಕರಾದರು.
(4 / 6)
ಟ್ರಾವಿಸ್ ಹೆಡ್ ಮತ್ತು ಜೆಸ್ಸಿಕಾ ಡೇವಿಸ್ 2022ರ ಮೇ ತಿಂಗಳಲ್ಲಿ ವಿಮಾನ ದುರಂತದಿಂದ ಪಾರಾಗಿದ್ದರು. ಜೆಸ್ಸಿಕಾ ಗರ್ಭಿಣಿಯಾಗಿದ್ದಾಗ ಮಾಲ್ಡೀವ್ಸ್ ಪ್ರವಾಸದಿಂದ ಮರಳುತ್ತಿದ್ದಾಗ ಘಟನೆ ನಡೆದಿತ್ತು. ತಾವು ಪ್ರಾಣಾಪಾಯದಿಂದ ಪಾರಾಗಿದ್ದಾಗಿ ಖುದ್ದು ಡೇವಿಸ್ ಹೇಳಿಕೊಂಡಿದ್ದಾರೆ.
(5 / 6)
ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ ಜೆಸ್ಸಿಕಾ, ಮಾಲ್ಡೀವ್ಸ್‌ನಿಂದ ಹಿಂದಿರುಗುವಾಗ ವಿಮಾನದಲ್ಲಿ ಏನೋ ದೋಷವಿದೆ ಎಂದು ಹೇಳಿದರು. ಹೀಗಾಗಿ ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ, ವಿಮಾನವು ಮತ್ತೆ ತುರ್ತು ಭೂಸ್ಪರ್ಶ ಮಾಡಿತು.
ಇತರ ಗ್ಯಾಲರಿಗಳು