ಭಾರತದ ವಿರುದ್ಧ ಕೇವಲ 23 ರನ್ ಗಳಿಸಿದರೂ ಇತಿಹಾಸ ನಿರ್ಮಿಸಿದ ಬಾಬರ್ ಅಜಮ್
- Babar Azam: ಟೀಮ್ ಇಂಡಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಕೇವಲ 23 ರನ್ ಗಳಿಸಿದ ಬಾಬರ್ ಅಜಮ್ ಪಾಕಿಸ್ತಾನ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ.
- Babar Azam: ಟೀಮ್ ಇಂಡಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಕೇವಲ 23 ರನ್ ಗಳಿಸಿದ ಬಾಬರ್ ಅಜಮ್ ಪಾಕಿಸ್ತಾನ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ.
(1 / 10)
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿರುದ್ಧ 23 ರನ್ ಸಿಡಿಸಿದ ಬಾಬರ್ ಅಜಮ್ ಅವರು ಪಾಕಿಸ್ತಾನ ತಂಡದ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಸಯೀದ್ ಅನ್ವರ್ ನಂತರ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
(AFP)(2 / 10)
ಆರಂಭಿಕನಾಗಿ ಕಣಕ್ಕಿಳಿದು ತಾನು ಎದುರಿಸಿದ 26 ಎಸೆತಗಳಲ್ಲಿ 5 ಬೌಂಡರಿ ಸಹಿತ 23 ರನ್ ಬಾರಿಸಿದ ಬಾಬರ್, ಪಾಕ್ಗೆ ಉತ್ತಮ ಆರಂಭದ ಭರವಸೆ ನೀಡಿದರು. ಆದರೆ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ಕೊಟ್ಟು ಹೊರ ನಡೆದರು.
(AFP)(3 / 10)
ಏಕದಿನ ಮಾದರಿಯ ಐಸಿಸಿ ಟೂರ್ನಮೆಂಟ್ಗಳಲ್ಲಿ (ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ) ಪಾಕಿಸ್ತಾನ ಪರ ಅತಿ ಹೆಚ್ಚು ರನ್ ಗಳಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(AFP)(4 / 10)
ಬಾಬರ್ ಅಜಮ್ ಐಸಿಸಿ ಏಕದಿನ ಸ್ವರೂಪದಲ್ಲಿ 1000 ರನ್ ಪೂರ್ಣಗೊಳಿಸಿದ ಪಾಕಿಸ್ತಾನದ 3ನೇ ಬ್ಯಾಟರ್ ಕೂಡ ಹೌದು. ಅಜಮ್ ತಮ್ಮ 24ನೇ ಇನ್ನಿಂಗ್ಸ್‌ನಲ್ಲಿ ಹರ್ಷಿತ್ ರಾಣಾ ಅವರ ಬೌಲಿಂಗ್ನಲ್ಲಿ ಕವರ್ ಡ್ರೈವ್ ಬೌಂಡರಿ ಸಿಡಿಸಿ ಈ ಮೈಲಿಗಲ್ಲು ತಲುಪಿದರು.
(Surjeet Yadav)(5 / 10)
ಸಯೀದ್ ಅನ್ವರ್, ಜಾವೇದ್ ಮಿಯಾಂದಾದ್ ಅವರು ಐಸಿಸಿ ಏಕದಿನ ಟೂರ್ನಿಗಳಲ್ಲಿ ಪಾಕಿಸ್ತಾನ ಪರ ಬಾಬರ್ಗಿಂತಲೂ ಮೊದಲು 1,000 ಪ್ಲಸ್ ರನ್ ಗಳಿಸಿದ ಮೊದಲ ಇಬ್ಬರು ಆಟಗಾರರು. ಇಬ್ಬರು ಕ್ರಮವಾಗಿ 1,204 ಮತ್ತು 1,083 ರನ್ ಸಿಡಿಸಿದ್ದಾರೆ.
(Surjeet Yadav)(6 / 10)
ಐಸಿಸಿ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಯೀದ್ ಅನ್ವರ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಏಕದಿನ ವಿಶ್ವಕಪ್ನಲ್ಲಿ 915 ರನ್ (21 ಪಂದ್ಯ), ಚಾಂಪಿಯನ್ಸ್ ಟ್ರೋಫಿಯಲ್ಲಿ 289 ರನ್ (4 ಪಂದ್ಯ) ಸಿಡಿಸಿದ್ದಾರೆ.
(7 / 10)
ಎರಡನೇ ಸ್ಥಾನದಲ್ಲಿರುವ ಜಾವೆದ್ ಮಿಯಾಮಿಂದ್ ಅವರು 30 ಇನ್ನಿಂಗ್ಸ್ಗಳಲ್ಲಿ 1083 ರನ್ ಬಾರಿಸಿದ್ದಾರೆ. ಏಕದಿನ ವಿಶ್ವಕಪ್ನಲ್ಲಿ 794 ರನ್ (17 ಇನ್ನಿಂಗ್ಸ್), ಚಾಂಪಿಯನ್ಸ್ ಟ್ರೋಫಿ 220 ರನ್ (7 ಇನ್ನಿಂಗ್ಸ್) ಸಿಡಿಸಿದ್ದಾರೆ.
(8 / 10)
ಮೂರನೇ ಸ್ಥಾನದಲ್ಲಿರುವ ಬಾಬರ್ ಏಕದಿನ ವಿಶ್ವಕಪ್ನಲ್ಲಿ 17 ಪಂದ್ಯಗಳಲ್ಲಿ 794 ರನ್ ಗಳಿಸಿದ್ದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ 7 ಪಂದ್ಯಗಳಲ್ಲಿ 220 ರನ್ ಸಿಡಿಸಿದ್ದಾರೆ. ಒಟ್ಟು 24 ಇನ್ನಿಂಗ್ಸ್ಗಳಲ್ಲಿ 1 ಶತಕ, 8 ಅರ್ಧಶತಕ ಸಹಿತ 1014 ರನ್ ಬಾರಿಸಿದ್ದಾರೆ. 50.70ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
(PTI)(9 / 10)
ಏಕದಿನ ಮಾದರಿಯ ಐಸಿಸಿ ಟೂರ್ನಮೆಂಟ್ಗಳಲ್ಲಿ ಆಡಿರುವ 19 ಇನ್ನಿಂಗ್ಸ್ಗಳಲ್ಲಿ 865 ರನ್ ರನ್ ಸಿಡಿಸಿರುವ ಮಿಸ್ಬಾ ಉಲ್ ಹಕ್ ಐದನೇ ಸ್ಥಾನದಲ್ಲಿದ್ದಾರೆ.
ಇತರ ಗ್ಯಾಲರಿಗಳು












