BCCI Awards: ಸಚಿನ್ ತೆಂಡೂಲ್ಕರ್‌ಗೆ ಜೀವಮಾನ ಸಾಧನೆ, ಅಶ್ವಿನ್‌ಗೆ ವಿಶೇಷ ಪ್ರಶಸ್ತಿ; ಬುಮ್ರಾ-ಮಂಧಾನಗೂ ಗೌರವ
- (ಬಿಸಿಸಿಐ) ಸಚಿನ್ ತೆಂಡೂಲ್ಕರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಿದೆ. ಶನಿವಾರ (ಫೆ.1) ನಡೆಯಲಿರುವ ಬಿಸಿಸಿಐ ವಾರ್ಷಿಕ ಸಮಾರಂಭದಲ್ಲಿ ಮಾಸ್ಟರ್ ಬ್ಲಾಸ್ಟರ್‌ಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಬಿಸಿಸಿಐ ಪ್ರದಾನ ಮಾಡಲಿದೆ. ಇದೇ ವೇಳೆ ದೇಶದ ಹಲವು ಕ್ರಿಕೆಟಿಗರು ಬಿಸಿಸಿಐ ಗೌರವಕ್ಕೆ ಪಾತ್ರರಾಗಲಿದ್ದಾರೆ.
- (ಬಿಸಿಸಿಐ) ಸಚಿನ್ ತೆಂಡೂಲ್ಕರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಿದೆ. ಶನಿವಾರ (ಫೆ.1) ನಡೆಯಲಿರುವ ಬಿಸಿಸಿಐ ವಾರ್ಷಿಕ ಸಮಾರಂಭದಲ್ಲಿ ಮಾಸ್ಟರ್ ಬ್ಲಾಸ್ಟರ್‌ಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಬಿಸಿಸಿಐ ಪ್ರದಾನ ಮಾಡಲಿದೆ. ಇದೇ ವೇಳೆ ದೇಶದ ಹಲವು ಕ್ರಿಕೆಟಿಗರು ಬಿಸಿಸಿಐ ಗೌರವಕ್ಕೆ ಪಾತ್ರರಾಗಲಿದ್ದಾರೆ.
(1 / 11)
ರವಿಚಂದ್ರನ್ ಅಶ್ವಿನ್ ಅವರಿಗೆ ಬಿಸಿಸಿಐ ವಿಶೇಷ ಪ್ರಶಸ್ತಿ ನೀಡಲಿದೆ. ಇದೇ ಜಸ್ಪ್ರೀತ್ ಬುಮ್ರಾ ಮತ್ತು ಸ್ಮೃತಿ ಮಂಧಾನ ಅವರಿಗೆ ಪ್ರಶಸ್ತಿಗಳು ದೊರೆಯಲಿವೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಿದೆ.
(PTI)(2 / 11)
ದೇಶದ ಕ್ರಿಕೆಟ್‌ಗೆ ಸಚಿನ್ ನೀಡಿದ ಅಪಾರ ಕೊಡುಗೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರನ್ನು ಗೌರವಿಸಲಿದೆ. ಭಾರತದ ಮೊದಲ ನಾಯಕ ಕರ್ನಲ್ ಸಿ.ಕೆ.ನಾಯ್ಡು ಅವರ ಗೌರವಾರ್ಥ 1994ರಲ್ಲಿ ಸ್ಥಾಪಿಸಲಾದ ಪ್ರಶಸ್ತಿಗೆ ಸಚಿನ್ ತೆಂಡೂಲ್ಕರ್ ಭಾಜನರಾಗಿದ್ದಾರೆ.
(PTI)(3 / 11)
ಸಚಿನ್ ಅವರಿಗಿಂತ ಮೊದಲು 2023ರಲ್ಲಿ ವಿಶ್ವಕಪ್ ವಿಜೇತ ರವಿಶಾಸ್ತ್ರಿ ಮತ್ತು ಫಾರೂಕ್ ಎಂಜಿನಿಯರ್ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. ಸಚಿನ್ ತೆಂಡೂಲ್ಕರ್ ಈ ಗೌರವಕ್ಕೆ ಪಾತ್ರರಾದ 31ನೇ ವ್ಯಕ್ತಿಯಾಗಲಿದ್ದಾರೆ.
(AFP)(4 / 11)
ತಮ್ಮ 16ನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್ ತಮ್ಮ ವೃತ್ತಿಜೀವನದಲ್ಲಿ ಭಾರತದ ಪರ 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
(Sunil Khandare)(5 / 11)
ಇದೇ ವೇಳೆ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಿದೆ. 2024ರ ಡಿಸೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಫ್ ಸ್ಪಿನ್ನರ್, ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಳನ್ನು ಗೌರವಿಸಲಾಗುತ್ತಿದೆ.
(PTI)(6 / 11)
ಇತ್ತೀಚೆಗೆ ಐಸಿಸಿ ವರ್ಷದ ಕ್ರಿಕೆಟರ್ ಪ್ರಶಸ್ತಿ ಪಡೆದ ಜಸ್ಪ್ರೀತ್ ಬುಮ್ರಾ, ಅತ್ಯುತ್ತಮ ಪುರುಷ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಬಿಸಿಸಿಐ ಪಾಲಿ ಉಮ್ರಿಗರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
(PTI)(7 / 11)
ಇದೇ ವೇಳೆ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ, ವನಿತೆಯರ ವಿಭಾಗದಲ್ಲಿ ವರ್ಷದ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟರ್ ಪ್ರಶಸ್ತಿ ಪಡೆಯಲಿದ್ದಾರೆ.
(PTI)(8 / 11)
2023-24ರ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಕ್ಕಾಗಿ ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ ಅವರನ್ನು ಕೂಡಾ ಗೌರವಿಸಲಾಗುತ್ತಿದೆ.
(PTI)(9 / 11)
ಸರ್ಫರಾಜ್ ಖಾನ್ ಮತ್ತು ಆಶಾ ಶೋಭನಾ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಪದಾರ್ಪಣೆ ಪ್ರಶಸ್ತಿಗಳನ್ನು ಪಡೆಯಲಿದ್ದಾರೆ.
(AFP)(10 / 11)
ಮುಂಬೈ ಆಲ್‌ರೌಂಡರ್ ತನುಷ್ ಕೋಟ್ಯಾನ್ ಅವರಿಗೆ, 2023-24ರ ರಣಜಿ ಟ್ರೋಫಿಯಲ್ಲಿ ನೀಡಿದ ಪ್ರದರ್ಶನಕ್ಕಾಗಿ ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
(PTI)ಇತರ ಗ್ಯಾಲರಿಗಳು