ಐಪಿಎಲ್ ರದ್ದಾದರೆ ಬಿಸಿಸಿಐಗೆ ಬೊಕ್ಕಸಕ್ಕೆ ಭಾರಿ ನಷ್ಟ; ಪ್ರತಿ ಪಂದ್ಯದಿಂದ ಆಗುವ ನಷ್ಟ ಕೋಟಿ ಕೋಟಿ
ದೇಶದ ಸುರಕ್ಷತೆ ಮತ್ತು ಐಪಿಎಲ್, ಈ ಎರಡು ವಿಷಯಗಳು ಬಂದಾಗ ದೇಶವೇ ಮುಖ್ಯ. ಐಪಿಎಲ್ ಅಥವಾ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಮುಂದೆಯೂ ನಡೆಸಬಹುದು. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಡುವೆಯೂ ಟೂರ್ನಿ ನಡೆಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಬಿಸಿಸಿಐಗೆ ಅಪಾರ ಪ್ರಮಾಣದ ನಷ್ಟವಾಗುವುದಂತೂ ಸತ್ಯ.
(1 / 7)
ದೇಶದ ಗಡಿಯನ್ನು ಸುರಕ್ಷಿತವಾಗಿಡಲು ಸಶಸ್ತ್ರ ಪಡೆಗಳು ಶತ್ರು ಪಡೆಗಳ ವಿರುದ್ಧ ಹೋರಾಡುತ್ತಿರುವ ಸವಾಲಿನ ಸಮಯದಲ್ಲಿ, ಐಪಿಎಲ್ ಮುಂದೂಡಿಕೆಯಿಂದಾಗುವ ಆರ್ಥಿಕ ಪರಿಣಾಮಗಳನ್ನು ಚರ್ಚಿಸುವುದು ಅಸಂಬದ್ಧ ಎಂದು ತೋರುವುದು ಸಹಜ. ಆದರೆ ಇದು ವಾಸ್ತವ ಸಂಗತಿ.
(HT_PRINT)(2 / 7)
ತಂಡದ ಮಾಲೀಕರು ಮತ್ತು ಆಟಗಾರರು, ಪ್ರಸಾರಕರು, ವಿವಿಧ ಸಂಸ್ಥೆಗಳ ಪ್ರಾಯೋಜಕರು, ಪ್ರಮುಖ ಪಾಲುದಾರರು ಮಾತ್ರವಲ್ಲ. ಐಪಿಎಲ್ ಪರಿಸರ ವ್ಯವಸ್ಥೆ ತುಂಬಾ ದೊಡ್ಡದು. ಐಪಿಎಲ್ ಜೊತೆಗೆ ಸಂಬಂಧ ಇರುವ ಸಣ್ಣ ಸಣ್ಣ ಭಾಗಗಳ ಮೇಲೂ ಪರಿಣಾಮ ಬೀರುತ್ತವೆ.
(AFP)(3 / 7)
ವಿವಿಧ ಕ್ರೀಡಾಂಗಣಗಳ ಒಳಗೆ ಮತ್ತು ಹೊರಗಿನ ಮಾರಾಟಗಾರರು, ಸರಕುಗಳನ್ನು ಮಾರಾಟ ಮಾಡುವವರು, ಕ್ಯಾಬ್ ಮತ್ತು ತ್ರಿಚಕ್ರ ವಾಹನ ನಿರ್ವಾಹಕರು, ಆತಿಥ್ಯ ಮೈದಾನದ ನಗರದಲ್ಲಿ ಪ್ರೇಕ್ಷಕರು ತಂಗುವ ರೆಸ್ಟೋರೆಂಟ್‌ಗಳಿಗೂ ನಷ್ಟವಾಗಲಿದೆ.
(ANI)(4 / 7)
18ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಒಂದು ವಾರಗಳ ಕಾಲ ಮುಂದೂಡಲಾಗಿದೆ. ಮುಂದಿನ ಏಳು ದಿನಗಳಲ್ಲಿ, ಬಿಸಿಸಿಐ ಮುಂದಿನ ನಿರ್ಧಾರ ಪ್ರಕಟಿಸಲಿದೆ. ವಿಷಯವಾಗಿ ಆಳವಾಗಿ ಸಮಾಲೋಚಿಸಿ ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ. ಪಂದ್ಯಾವಳಿಯ ನಾಲ್ಕನೇ ಒಂದು ಭಾಗಕ್ಕಿಂತ ಕಡಿಮೆ ಪ್ರಮಾಣದ ಪಂದ್ಯಗಳನ್ನು (ನಾಲ್ಕು ಪ್ಲೇಆಫ್ ಪಂದ್ಯಗಳು ಸೇರಿದಂತೆ 16 ಪಂದ್ಯ) ಮುಂದೂಡಲಾಗಿದೆ. ಈ ಒಂದೊಂದು ಪಂದ್ಯವೂ ಬಿಸಿಸಿಐಗೆ ಆದಾಯದ ದೃಷ್ಟಿಯಿಂದ ಮುಖ್ಯ.
(ANI Video Grab)(5 / 7)
ರದ್ದಾದ ಪ್ರತಿಯೊಂದು ಪಂದ್ಯದಿಂದಲೂ ಭಾರಿ ಪ್ರಮಾಣದ ನಷ್ಟವಾಗಲಿದೆ. ರದ್ದಾದ ಪ್ರತಿ ಪಂದ್ಯದಿಂದ ಉಂಟಾಗುವ ನಷ್ಟವು 100ರಿಂದ 125 ಕೋಟಿ ರೂ.ಗಳವರೆಗೆ ಆಗುತ್ತದೆ ಎಂದು ಅಂದಾಜಿಸಲಾಗಿದೆ. ವಿಮೆಯನ್ನು ಲೆಕ್ಕ ಹಾಕಿದ ನಂತರವೂ, ಪ್ರಸಾರ, ಪ್ರಾಯೋಜಕತ್ವ ಮತ್ತು ಇತರ ಪಂದ್ಯಕ್ಕೆ ಸಂಬಂಧಿಸಿದ ಆದಾಯಗಳನ್ನು ಗಣನೆಗೆ ತೆಗೆದುಕೊಂಡ ಮೇಲೂ ಆ ನಷ್ಟವು ಅದರ ಅರ್ಧದಷ್ಟು ಆಗಬಹುದು.
(ANI Pic Service)(6 / 7)
ಬಿಸಿಸಿಐನ ಪ್ರಬಲ ಕ್ರಿಯಾತ್ಮಕ ಅಂಗವಾದ ಐಪಿಎಲ್ ಆಡಳಿತ ಮಂಡಳಿಯು, ಪಂದ್ಯಾವಳಿಯನ್ನು ಶೀಘ್ರವಾಗಿ ಪುನರಾರಂಭಿಸಲು ಸನ್ನದ್ಧ ಸ್ಥಿತಿಯಲ್ಲಿರಲು ಫ್ರಾಂಚೈಸಿಗಳಿಗೆ ಹೇಳಿದೆ.
(ANI Pic Service)(7 / 7)
ಒಂದು ವೇಳೆ ನಿಯಂತ್ರಣಕ್ಕೆ ಬರದ ಕಾರಣಗಳಿಂದ ಐಪಿಎಲ್ ಪಂದ್ಯಾವಳಿ ಸಂಪೂರ್ಣ ರದ್ದಾದರೆ, ಆತಿಥೇಯ ಪ್ರಸಾರಕರಿಂದ ಹಿಡಿದು ಎಲ್ಲಾ ಹತ್ತು ಫ್ರಾಂಚೈಸಿಗಳ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಆಯಾ ಮೈದಾನಗಳಲ್ಲಿ ನಡೆಯುವವ ಪಂದ್ಯಗಳ ಟಿಕೆಟ್ ಮಾರಾಟವು, ಆತಿಥೇಯ ಫ್ರಾಂಚೈಸಿಗಳಿಗೆ ಸಂಬಂಧಿಸಿದೆ. ಹೀಗಾಗಿ ಫ್ರಾಂಚೈಸ್‌ಗಳಿಗೆ ಭಾರಿ ನಷ್ಟವಾಗಲಿದೆ.
(REUTERS)ಇತರ ಗ್ಯಾಲರಿಗಳು