WPL 2025 ಆರಂಭಕ್ಕೆ ದಿನಗಣನೆ; ಆತಿಥ್ಯ ಸ್ಥಳ ಶಾರ್ಟ್‌ಲಿಸ್ಟ್ ಮಾಡಿದ ಬಿಸಿಸಿಐ; ಈ ದಿನದಂದು ಟೂರ್ನಿ ಆರಂಭ ಸಾಧ್ಯತೆ
- ವಿಮೆನ್ಸ್ ಪ್ರೀಮಿಯರ್ ಲೀಗ್ (WPL) ಮೂರನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಈ ಬಾರಿಯೂ 2 ನಗರಗಳಲ್ಲಿ ಎರಡು ಹಂತಗಳಲ್ಲಿ ಪಂದ್ಯಾವಳಿಯನ್ನು ನಡೆಯಲು ಬಿಸಿಸಿಐ ಸಿದ್ಧತೆ ನಡೆಸಿದೆ. ಬರೋಡಾ ಮತ್ತು ಲಕ್ನೋ ನಗರಗಳು, ಪಂದ್ಯಾವಳಿಯ ಆತಿಥ್ಯದ ಸಂಭಾವ್ಯ ಸ್ಥಳಗಳಾಗಿ ಬಿಸಿಸಿಐ ಆಯ್ಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
- ವಿಮೆನ್ಸ್ ಪ್ರೀಮಿಯರ್ ಲೀಗ್ (WPL) ಮೂರನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಈ ಬಾರಿಯೂ 2 ನಗರಗಳಲ್ಲಿ ಎರಡು ಹಂತಗಳಲ್ಲಿ ಪಂದ್ಯಾವಳಿಯನ್ನು ನಡೆಯಲು ಬಿಸಿಸಿಐ ಸಿದ್ಧತೆ ನಡೆಸಿದೆ. ಬರೋಡಾ ಮತ್ತು ಲಕ್ನೋ ನಗರಗಳು, ಪಂದ್ಯಾವಳಿಯ ಆತಿಥ್ಯದ ಸಂಭಾವ್ಯ ಸ್ಥಳಗಳಾಗಿ ಬಿಸಿಸಿಐ ಆಯ್ಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
(1 / 10)
ಪ್ರಸಕ್ತ ಋತುವಿನ ಪಂದ್ಯಾವಳಿಯು ಫೆಬ್ರುವರಿ 6 ಅಥವಾ 7ರಂದು ಆರಂಭವಾಗುವ ನಿರೀಕ್ಷೆಯಿದೆ. ಬರೋಡಾ ಫೈನಲ್ ಸೇರಿದಂತೆ ಎರಡನೇ ಹಂತದ ಪಂದ್ಯಾವಳಿಯ ಆತಿಥ್ಯಕ್ಕೆ ಸ್ಪರ್ಧೆಯಲ್ಲಿದೆ.
(WPL-X)(2 / 10)
ಐದು ತಂಡಗಳು ಭಾಗಿಯಾಗುವ ಪಂದ್ಯಾವಳಿಯ ದಿನಾಂಕ ಮತ್ತು ಸ್ಥಳಗಳನ್ನು ಬಿಸಿಸಿಐ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (UPCA) ಮತ್ತು ಬರೋಡಾ ಕ್ರಿಕೆಟ್ ಸಂಸ್ಥೆ (BCA)ಯೊಂದಿಗೆ ಈಗಾಗಲೇ ಅನೌಪಚಾರಿಕ ಚರ್ಚೆ ನಡೆಸಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
(3 / 10)
ಬರೋಡಾದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯವನ್ನು ಇತ್ತೀಚೆಗಷ್ಟೇ ಹೆಚ್ಚಿಸಲಾಗಿದೆ. ಕೊಟಂಬಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಸಲು ಬಿಸಿಸಿಐ ಉತ್ಸುಕವಾಗಿದೆ.
(4 / 10)
ಕಳೆದ ತಿಂಗಳಷ್ಟೇ ಉದ್ಘಾಟನೆಗೊಂಡ ಈ ಸ್ಟೇಡಿಯಂನಲ್ಲಿ ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಮಹಿಳೆಯರ ಮೂರು ಏಕದಿನ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಮೈದಾನವು ಕೆಲವು ರಣಜಿ ಟ್ರೋಫಿ ಪಂದ್ಯಗಳಿಗೂ ಆತಿಥ್ಯ ವಹಿಸಿದೆ.
(5 / 10)
ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ಸುತ್ತುಗಳನ್ನು ಕೂಡಾ ಇದೇ ಮೈದಾನದಲ್ಲಿ ನಿಗದಿಪಡಿಸಲಾಗಿದೆ. ಆ ಮೂಲಕ ಮೈದಾನದ ಸೌಲಭ್ಯದ ಸಂಪೂರ್ಣ ಸಿದ್ಧತೆಯನ್ನು ಪರಿಶೀಲಿಸಲು ಹೊನಲು ಬೆಳಕಿನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಮುಂದಾಗಿದೆ.
(REUTERS)(6 / 10)
ಒಟ್ಟು 23 ಪಂದ್ಯಗಳಿರುವಂತೆ ಡಬ್ಲ್ಯುಪಿಎಲ್ ಪಂದ್ಯಾವಳಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮಾರ್ಚ್ 8 ಅಥವಾ 9ರಂದು ಫೈನಲ್ ನಡೆಯುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
(PTI)(7 / 10)
ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಎರಡನೇ ಹಂತದ ಪಂದ್ಯಗಳನ್ನು ಆಯೋಜಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಮೈದಾನದ ಸೌಲಭ್ಯಗಳಿಗೆ ಅಂತಿಮ ಸ್ಪರ್ಶ ಒದಗಿಸಲು ಸಮಯ ಸಿಗುತ್ತದೆ ಎಂಬುದು ಇದರ ಉದ್ದೇಶ.
(PTI)(8 / 10)
ಉದ್ಘಾಟನಾ ಆವೃತ್ತಿಯ ಡಬ್ಲ್ಯುಪಿಡಲ್ ಪಂದ್ಯಾವಳಿಯನ್ನು ಸಂಪೂರ್ಣವಾಗಿ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಎರಡನೇ ಆವೃತ್ತಿಯನ್ನು ಬೆಂಗಳೂರು ಮತ್ತು ದೆಹಲಿಯಲ್ಲಿ ಆಯೋಜಿಸಲಾಗಿತ್ತು.
(PTI)(9 / 10)
ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು ಕಳೆದ ಆವೃತ್ತಿಯ ಡಬ್ಲ್ಯುಪಿಎಲ್ ಚಾಂಪಿಯನ್ ಆಗಿದೆ. ಈ ಬಾರಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ತಂಡ ಕಣಕ್ಕಿಳಿಯಲಿದೆ.
(PTI)ಇತರ ಗ್ಯಾಲರಿಗಳು