ಐಪಿಎಲ್ ಫೈನಲ್‌ಗೆ ಮತ್ತಷ್ಟು ಮೆರುಗು; ಆಪರೇಷನ್ ಸಿಂದೂರ್ ಯಶಸ್ವಿಯಾಗಿಸಿದ ಭಾರತೀಯ ಸಶಸ್ತ್ರ ಪಡೆಗಳಿಗೆ ಬಿಸಿಸಿಐ ವಿಶೇಷ ಗೌರವ
ಜೂನ್ 3ರಂದು ಐಪಿಎಲ್ 18ನೇ ಆವೃತ್ತಿಯ ಫೈನಲ್ ಪಂದ್ಯ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೂರ್ನಿ ಮುಕ್ತಾಯಗೊಳ್ಳಲಿದೆ. ಆ ದಿನ ಭಾರತೀಯ ಸಶಸ್ತ್ರ ಪಡೆಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ಗೌರವ ಸಲ್ಲಿಸಲು ನಿರ್ಧರಿಸಿದೆ.
(1 / 9)
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರನ್ನು ಗುರಿಯಾಗಿಸಿ ಹಲವಾರು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು. ಇದಕ್ಕೆ ಆಪರೇಷನ್ ಸಿಂದೂರ್ ಎಂದು ಹೆಸರಿಡಲಾಯ್ತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
(REUTERS)(2 / 9)
ಐಪಿಎಲ್ 2025ರ ಸಮಾರೋಪ ಸಮಾರಂಭವು ಭಾರತೀಯ ಸಶಸ್ತ್ರ ಪಡೆಗಳಿಗೆ ನೀಡುವ ಗೌರವವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹಿಂದೂಸ್ತಾನ್ ಟೈಮ್ಸ್‌ಗೆ ಖಚಿತಪಡಿಸಿದ್ದಾರೆ.
(REUTERS)(3 / 9)
"ಹೌದು, ಐಪಿಎಲ್ 2025ರ ಸಮಾರೋಪ ಸಮಾರಂಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ಗೌರವಿಸಲಾಗುತ್ತದೆ" ಎಂದು ಅವರು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.
(Surjeet Yadav)(4 / 9)
ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ, ನೌಕಾಪಡೆಯ ಮುಖ್ಯಸ್ಥ ದಿನೇಶ್ ಕೆ ತ್ರಿಪಾಠಿ ಮತ್ತು ವಾಯುಪಡೆಯ ಮುಖ್ಯಸ್ಥ ಎಪಿ ಸಿಂಗ್ ಅವರಿಗೆ ಸಮಾರೋಪ ಸಮಾರಂಭಕ್ಕೆ ಬಿಸಿಸಿಐ ಆಹ್ವಾನ ಪತ್ರಿಕೆ ಕಳುಹಿಸಿದೆ ಎಂದು ತಿಳಿದುಬಂದಿದೆ.
(PTI)(5 / 9)
"ನಮ್ಮ ಸಶಸ್ತ್ರ ಪಡೆಗಳ ನಿರಂತರ ಶೌರ್ಯ, ಧೈರ್ಯ ಮತ್ತು ಸೇವೆಗೆ ನಾವು ಕೃತಜ್ಞರಾಗಿದ್ದೇವೆ. ಆಪರೇಷನ್ ಸಿಂದೂರ್ ಅಡಿಯಲ್ಲಿ ಅವರ ಪ್ರಯತ್ನಗಳನ್ನು ಗೌರವಿಸುವ ಸಲುವಾಗಿ ನಾವು ವಿಶೇಷ ಗೌರವ ನೀಡಲು ಬಯಸುತ್ತೇವೆ. ಐಪಿಎಲ್ 2025ರ ಸಮಾರೋಪ ಸಮಾರಂಭವು ಸಶಸ್ತ್ರ ಪಡೆಗಳಿಗೆ ಗೌರವಾರ್ಪಣೆಯಾಗಲಿದೆ" ಎಂದು ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿವೆ.
(6 / 9)
ಸಮಾರೋಪ ಸಮಾರಂಭದಲ್ಲಿ ಮಿಲಿಟರಿ ಬ್ಯಾಂಡ್‌ಗಳ ಪ್ರದರ್ಶನವೂ ನಡೆಯುವ ಸಾಧ್ಯತೆಯಿದೆ. ಐಪಿಎಲ್ 2025ರ ಗ್ರ್ಯಾಂಡ್ ಫಿನಾಲೆಗೆ ಮುಂಚಿತವಾಗಿ ಸಂಗೀತ ಸಂಜೆಗಾಗಿ ಬಿಸಿಸಿಐ ಕೆಲವು ಪ್ರಮುಖ ಗಾಯಕರನ್ನು ಕರೆತರುವ ನಿರೀಕ್ಷೆಯಿದೆ.
(PTI)(7 / 9)
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ಬೆನ್ನಲ್ಲೇ, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸಿತು. ಆ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಐಪಿಎಲ್ 2025 ಋತುವನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಕದನ ವಿರಾಮ ಘೋಷಿಸಿದ ನಂತರ ಪಂದ್ಯಾವಳಿ ಪುನರಾರಂಭವಾಯಿತು.
(Hindustan Times)(8 / 9)
ಐಪಿಎಲ್ 2025 ಋತುವಿನ ಪುನರಾರಂಭಕ್ಕೆ ಭಾರತೀಯ ಸಶಸ್ತ್ರ ಪಡೆಗಳ ಪ್ರಯತ್ನಗಳನ್ನು ಬಿಸಿಸಿಐ ಈಗಾಗಲೇ ಗುರುತಿಸಿದೆ. ಹಲವಾರು ಸ್ಥಳಗಳಲ್ಲಿ ಪಂದ್ಯ ಆರಂಭವಾಗುವ ಮೊದಲು ರಾಷ್ಟ್ರಗೀತೆಯನ್ನು ಹಾಡಲಾಯ್ತು. ಸ್ಟೇಡಿಯಂಗಳ ದೈತ್ಯ ಪರದೆಗಳ ಮೇಲೆ 'ಧನ್ಯವಾದಗಳು, ಸಶಸ್ತ್ರ ಪಡೆಗಳು' ಎಂಬ ಸಂದೇಶಗಳನ್ನು ಪ್ರದರ್ಶಿಸಲಾಯಿತು.
(AFP)(9 / 9)
ಐಪಿಎಲ್ 2025ರ ಕ್ವಾಲಿಫೈಯರ್ 1 ಪಂದ್ಯವು ಮೇ 29ರಂದು ಮುಲ್ಲಾನ್‌ಪುರದಲ್ಲಿ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಕೂಡಾ ಮೇ 30ರಂದು ಅದೇ ಸ್ಥಳದಲ್ಲಿ ನಡೆಯಲಿದೆ. ಕ್ವಾಲಿಫೈಯರ್ 2 ಹಾಗೂ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಪಂಜಾಬ್ ಕಿಂಗ್ಸ್ ತಂಡ ಕ್ವಾಲಿಫೈಯರ್ 1ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
(REUTERS)ಇತರ ಗ್ಯಾಲರಿಗಳು