ಜೋಶ್ ಹೇಜಲ್‌ವುಡ್‌ಗೆ ಗಾಯ, ಐಪಿಎಲ್‌ನಿಂದ ಹಿಂದೆ ಸರಿಯುವ ಸಾಧ್ಯತೆ; ಆರ್‌ಸಿಬಿ ಕಪ್ ಗೆಲುವಿನ ನಿರೀಕ್ಷೆಗೆ ಮತ್ತಷ್ಟು ಹೊಡೆತ
ಐಪಿಎಲ್ 2025ರ ಉಳಿದ ಭಾಗ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ. ಆದರೆ, ಕೊನೆಯ ಹಂತದ ಪಂದ್ಯಗಳ ಆರಂಭಕ್ಕೂ ಮುನ್ನವೇ ಆರ್‌ಸಿಬಿ ತಂಡಕ್ಕೆ ಚಿಂತೆ ಶುರುವಾಗಿದೆ. ತಂಡದ ಪ್ರಮುಖ ವಿದೇಶಿ ಬೌಲರ್ ಜೋಶ್ ಹೇಜಲ್‌ವುಡ್, ತಂಡದ ಇನ್ನುಳಿದ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ. ಆಸ್ಟ್ರೇಲಿಯಾದ ವೇಗದ ಬೌಲರ್ ಭುಜದ ಗಾಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
(1 / 7)
ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಆಗಿರುವ ಹೇಜಲ್‌ವುಡ್, ತಂಡದ ಪರ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. 18 ವಿಕೆಟ್ ಹಾಗೂ ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳೊಂದಿಗೆ ತಂಡದ ಹಲವು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
(AP)(2 / 7)
ಐಪಿಎಲ್ ಋತುವನ್ನು ಮುಂದೂಡುವುದಕ್ಕೂ ಮುನ್ನ ನಡೆದ ಆರ್‌ಸಿಬಿ ತಂಡದ ಅಂತಿಮ ಪಂದ್ಯದಲ್ಲಿ ಹೇಜಲ್‌ವುಡ್ ಆಡಿರಲಿಲ್ಲ. ಗಾಯದಿಂದಾಗಿ ಅವರನ್ನು ಹೊರಗಿಡಲಾಗಿತ್ತು. ಮೇ ಕೊನೆಯ ಎರಡು ವಾರಗಳೊಳಗೆ ಐಪಿಎಲ್ ಮತ್ತೆ ಆರಂಭವಾದರೆ, ಅವರು ಆರ್‌ಸಿಬಿ ಪರ ಆಡುವುದರಿಂದ ಹಿಂದೆ ಸರಿಯಬಹುದು.
(AFP)(3 / 7)
ಇಎಸ್‌ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ, ಹೇಜಲ್‌ವುಡ್ ಭುಜದ ಗಾಯದಿಂದಾಗಿ ಸಿಎಸ್‌ಕೆ ವಿರುದ್ಧದ ತವರು ಪಂದ್ಯದಿಂದ ಹೊರಗುಳಿಯಬೇಕಾಯಿತು.
(AP)(4 / 7)
ಇದು ಜೂನ್ 11ರಿಂದ ಆರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಮುಂಚಿತವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕೂಡಾ ಹೇಜಲ್‌ವುಡ್ ಗಾಯದ ಬಗ್ಗೆ ಕಾಳಜಿ ವಹಿಸುವ ಸಾಧ್ಯತೆ ಇದೆ.
(AFP)(5 / 7)
ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಗಾಯಗೊಂಡಿದ್ದ ಅವರು, ಆಸ್ಟ್ರೇಲಿಯಾ ಪರ ಚಾಂಪಿಯನ್ಸ್ ಟ್ರೋಫಿ ಆಡಿರಲಿಲ್ಲ. ಐಪಿಎಲ್‌ನಲ್ಲಿ ಈವರೆಗೆ ಸಕ್ರಿಯವಾಗಿ ಪಾಲ್ಗೊಂಡಿದ್ದ ಜೋಶ್, ಮತ್ತೆ ಆಡುವ ಸಾಧ್ಯತೆ ಇಲ್ಲ. ಮುಂದೆ ಲಾರ್ಡ್ಸ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್‌ಗೆ ಹೇಜಲ್‌ವುಡ್ ಮರಳುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
(AP)(6 / 7)
ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ನಂತರ, ಐಪಿಎಲ್ ಋತುವನ್ನು ಒಂದು ವಾರ ಸ್ಥಗಿತಗೊಳಿಸಲಾಯ್ತು. ವಿದೇಶಿ ಆಟಗಾರರನ್ನು ಅವರವರ ತಾಯ್ನಾಡಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.
(PTI)ಇತರ ಗ್ಯಾಲರಿಗಳು