Sourav Ganguly: ಗಂಗೂಲಿ ಬಯೋಪಿಕ್​ನಲ್ಲಿ ತನ್ನ ಪತ್ನಿ ಪಾತ್ರಕ್ಕೆ ಸಿಕ್ಕಿದ್ರು ನೋಡಿ ಬಾಲಿವುಡ್ ಹಾಟ್ ಬ್ಯೂಟಿ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sourav Ganguly: ಗಂಗೂಲಿ ಬಯೋಪಿಕ್​ನಲ್ಲಿ ತನ್ನ ಪತ್ನಿ ಪಾತ್ರಕ್ಕೆ ಸಿಕ್ಕಿದ್ರು ನೋಡಿ ಬಾಲಿವುಡ್ ಹಾಟ್ ಬ್ಯೂಟಿ?

Sourav Ganguly: ಗಂಗೂಲಿ ಬಯೋಪಿಕ್​ನಲ್ಲಿ ತನ್ನ ಪತ್ನಿ ಪಾತ್ರಕ್ಕೆ ಸಿಕ್ಕಿದ್ರು ನೋಡಿ ಬಾಲಿವುಡ್ ಹಾಟ್ ಬ್ಯೂಟಿ?

  • ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಜೀವನಚರಿತ್ರೆ ಒಂದು ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ. ಜುಲೈ ಅಂತ್ಯದ ವೇಳೆಗೆ ಕೋಲ್ಕತ್ತಾದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.  

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ ಅನ್ನು ಮೂರು ವರ್ಷಗಳ ಹಿಂದೆಯೇ ಘೋಷಿಸಲಾಗಿತ್ತು. ಬಂಗಾಳ ಮಹಾರಾಜನ ಜೀವನಚರಿತ್ರೆಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಹಲವು ಬಾರಿ ನಿರಾಸೆ ಉಂಟಾಗಿತ್ತು. ಇದೀಗ ಫ್ಯಾನ್ಸ್​ಗೆ ಗುಡ್​ನ್ಯೂಸ್ ಸಿಕ್ಕಿದೆ. ಇದೇ ವರ್ಷ ಚಿತ್ರೀಕರಣ ಪ್ರಾರಂಭವಾಗಬಹುದು ಎಂದು ವರದಿಯಾಗಿದೆ.
icon

(1 / 6)

ಎಲ್ಲವೂ ಅಂದುಕೊಂಡಂತೆ ಜರುಗಿದರೆ ದಾದಾ ಅವರ ಜೀವನಚರಿತ್ರೆ 2025ರ ಮಧ್ಯದಲ್ಲಿ ಸೆಟ್ಟೇರಲಿದೆ. ಜುಲೈ ಅಂತ್ಯದ ವೇಳೆಗೆ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮೊದಲ ಹಂತದ ಶೂಟಿಂಗ್​​​ ಕೋಲ್ಕತ್ತಾದಲ್ಲಿ ನಡೆಯುವ ಸಾಧ್ಯತೆ ಇದೆ. ಜೀವನ ಚರಿತ್ರೆಯ ಕುರಿತು ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಅವರೊಂದಿಗೆ ಗಂಗೂಲಿ ಮಾತುಕತೆ ನಡೆಸಿದ್ದು, ಸ್ಕ್ರಿಪ್ಟ್ ಬಹುತೇಕ ಪೂರ್ಣಗೊಂಡಿದೆ.
icon

(2 / 6)

(AFP)

ಬಯೋಪಿಕ್​ನಲ್ಲಿ ಸೌರವ್ ಗಂಗೂಲಿ ಅವರ ಪಾತ್ರದಲ್ಲಿ ನಟಿಸಲು ರಣಬೀರ್ ಕಪೂರ್ ಹೆಸರು ಮೊದಲು ಕೇಳಿಬಂದಿತ್ತು. ನಂತರ ಆಯುಷ್ಮಾನ್ ಖುರಾನ್ ಹೆಸರು ಕೇಳಿ ಬಂದಿತ್ತು. ಆದರೆ ಅವರೂ ಕೂಡ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಅವರ ಪಾತ್ರಕ್ಕೆ ರಾಜ್​ಕುಮಾರ್ ರಾವ್ ನಟಿಸಲಿದ್ದಾರೆ ಎಂದು ಹಲವು ವರದಿಗಳು ತಿಳಿಸಿವೆ. ಆದರೆ ಯಾವುದೂ ಅಂತಿಮಗೊಂಡಿಲ್ಲ.
icon

(3 / 6)

ಇದೇ ವೇಳೆ ಸೌರವ್ ಗಂಗೂಲಿ ಅವರ ಪತ್ನಿ ಪಾತ್ರಕ್ಕೆ ಬಾಲಿವುಡ್ ನಟಿ ತೃಪ್ತಿ ದಿಮ್ರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಈ ಹಾಟ್​ ಬ್ಯೂಟಿ ಜೊತೆಗೆ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
icon

(4 / 6)

ಸ್ಕ್ರಿಪ್ಟ್ ಪೂರ್ಣಗೊಳ್ಳುವವರೆಗೆ, ಯಾರನ್ನೂ ಅಂತಿಮಗೊಳಿಸಲು ಸಾಧ್ಯವಿಲ್ಲ ಎಂದು ಸೌರವ್ ಅವರ ಹತ್ತಿರದ ಮೂಲವೊಂದು ಹೇಳಿದೆ. ಆದಾಗ್ಯೂ, ಫೆಬ್ರವರಿ ಅಂತ್ಯದ ವೇಳೆಗೆ ಸ್ಕ್ರಿಪ್ಟ್ ಪೂರ್ಣಗೊಳ್ಳಬಹುದು. ಮಾರ್ಚ್ ಮೊದಲ ವಾರದಲ್ಲಿ ಬಯೋಪಿಕ್​ನಲ್ಲಿ ಯಾರೆಲ್ಲಾ ನಟಿಸಬಹುದು ಎಂಬುದು ಅಂತಿಮಗೊಳ್ಳಲಿದ್ಯಂತೆ.
icon

(5 / 6)

ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡಿದ ಕ್ರಿಕೆಟಿಗರೊಂದಿಗೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಯುವರಾಜ್​​ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಲಾಗಿದ್ಯಂತೆ.
icon

(6 / 6)

ಇತರ ಗ್ಯಾಲರಿಗಳು