ಪರ್ತ್‌ನಲ್ಲಿ ಮಳೆ ಭೀತಿ; ಭಾರತ vs ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಪಂದ್ಯಕ್ಕೆ ಹವಾಮಾನ ಅಡ್ಡಿಯಾಗುತ್ತಾ?
- ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ನವೆಂಬರ್ 22ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ. ಪರ್ತ್ ನಗರದಲ್ಲಿ ಈ ವಾರ ಮಳೆ ಸುರಿಯುತ್ತಿದೆ. ಮಂಗಳವಾರ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ರದ್ದಾಗುವ ಭೀತಿ ಶುರುವಾಗಿದೆ. ಹಾಗಿದ್ದರೆ ಹವಾಮಾನ ಮುನ್ಸೂಚನೆ ಏನು ಹೇಳುತ್ತಿದೆ ಎಂಬುದನ್ನು ನೋಡೋಣ.
- ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ನವೆಂಬರ್ 22ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ. ಪರ್ತ್ ನಗರದಲ್ಲಿ ಈ ವಾರ ಮಳೆ ಸುರಿಯುತ್ತಿದೆ. ಮಂಗಳವಾರ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ರದ್ದಾಗುವ ಭೀತಿ ಶುರುವಾಗಿದೆ. ಹಾಗಿದ್ದರೆ ಹವಾಮಾನ ಮುನ್ಸೂಚನೆ ಏನು ಹೇಳುತ್ತಿದೆ ಎಂಬುದನ್ನು ನೋಡೋಣ.
(1 / 5)
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 22ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಪರ್ತ್‌ನ ಆಪ್ಟಸ್‌ನಲ್ಲಿ ನಡೆಯಲಿದೆ. ಭಾರತ ತಂಡ ಈಗಾಗಲೇ ಆಸೀಸ್ ತಲುಪಿದ್ದು ಅಭ್ಯಾಸ ನಡೆಸುತ್ತಿದೆ. ಮೊದಲ ಪಂದ್ಯಕ್ಕೆ ಹವಾಮಾನ ಹೇಗಿರಲಿದೆ ಎಂಬುದರ ಬಗ್ಗೆ ಪ್ರಶ್ನೆಗಳಿವೆ. ಆಸ್ಟ್ರೇಲಿಯಾದಲ್ಲಿ ನವೆಂಬರ್ ತಿಂಗಳಿಂದ ಮೇ ತಿಂಗಳವರೆಗೆ ಆಸ್ಟ್ರೇಲಿಯಾದಲ್ಲಿ ಹೆಚ್ಚು ಮಳೆಯಾಗುವುದಿಲ್ಲ.(X)
(2 / 5)
ಮಂಗಳವಾರದಿಂದ ಪರ್ತ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭವಾಗುವ ದಿನವಾದ ಶುಕ್ರವಾರ ಮಳೆ ಬರುವ ಸಾಧ್ಯತೆ ಇಲ್ಲ. ಆಟ ಮುಂದುವರೆದಂತೆ ಹವಾಮಾನ ಸ್ಪಷ್ಟವಾಗುತ್ತದೆ. ಹವಾಮಾನ ಇಲಾಖೆಯ ಪ್ರಕಾರ, ಮಂಗಳವಾರ ದಿನ ಮೋಡ ಕವಿದ ವಾತಾವರಣ ಇರುತ್ತದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.(X)
(3 / 5)
ಮಂಗಳವಾರ ಶೇ.50ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಸುಮಾರು 0ಯಿಂದ 3 ಮಿಲಿಮೀಟರ್ ಮಳೆಯಾಗುವ ಸಾಧ್ಯತೆಯಿದೆ. ಮಂಗಳವಾರಕ್ಕಿಂತ ಬುಧವಾರ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಮಳೆಯಾಗುವ ಸಾಧ್ಯತೆ ಶೇ.70ರಷ್ಟಿದೆ. ಆ ದಿನ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬುಧವಾರ 0ರಿಂದ 8 ಮಿಲಿಮೀಟರ್ ಮಳೆಯಾಗಬಹುದು.(X)
(4 / 5)
ಗುರುವಾರ ಮಳೆಯ ಸಾಧ್ಯತೆ ಕಡಿಮೆ ಇದೆ, ಆದರೆ ಮೋಡ ಕವಿದ ವಾತಾವರಣ ಇರುತ್ತದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಮಳೆಯಾಗುವ ಸಾಧ್ಯತೆಯಿದೆ. ಆ ದಿನ 0ರಿಂದ 4 ಮಿಲಿಮೀಟರ್ ಮಳೆಯಾಗಬಹುದು. ಅದಾಗ್ಯೂ, ಪಂದ್ಯ ಆರಂಭವಾಗುವ ಶುಕ್ರವಾರ ದಿನ ಹವಾಮಾನ ಸುಧಾರಿಸಲಿದೆ. ಟೆಸ್ಟ್ ದಿನದಂದು, ಬೆಳಗ್ಗೆ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ. ಆದರೆ ದಿನದಾಟ ಮುಂದುವರೆದಂತೆ ಹವಾಮಾನವು ಸ್ಪಷ್ಟವಾಗುತ್ತದೆ.(X)
(5 / 5)
ಶುಕ್ರವಾರ ದಿನ ಹವಾಮಾನವು ಸ್ವಲ್ಪ ತಂಪಾಗಿರಬಹುದು. ತಾಪಮಾನವು ಗರಿಷ್ಠ 23 ಮತ್ತು ಕನಿಷ್ಠ 14ಕ್ಕೆ ಇಳಿಯುವ ನಿರೀಕ್ಷೆ ಇದೆ. ಟೆಸ್ಟ್ ಪಂದ್ಯ ಮುಂದುವರೆದಂತೆ ಮಳೆಯಾಗುವ ಸಾಧ್ಯತೆಯಿಲ್ಲ. ದಿನವಿಡೀ ಮೋಡವಿಲ್ಲದ ಆಕಾಶವಿರುತ್ತದೆ. ಆದಾರೆ, ಗಾಳಿಯು ಗಂಟೆಗೆ 15-25 ಕಿ.ಮೀ ವೇಗದಲ್ಲಿ ಬೀಸಬಹುದು, ಇದು ಸ್ವಿಂಗ್ ಬೌಲರ್‌ಗಳಿಗೆ ತುಸು ಹೆಚ್ಚುವರಿ ಪ್ರಯೋಜನ ನೀಡಬಹುದು.(X)
ಇತರ ಗ್ಯಾಲರಿಗಳು