ಐಪಿಎಲ್ ಒಂದೇ ಆವೃತ್ತಿಯಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ನಾಯಕ ಯಾರು; 2ನೇ ಸ್ಥಾನಕ್ಕೆ ಶ್ರೇಯಸ್ ಅಯ್ಯರ್, ಆರ್‌ಸಿಬಿ ಸ್ಟಾರ್ ನಂ.1
ನಾಯಕನಾಗಿ ಐಪಿಎಲ್‌ನ ಒಂದೇ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಯಾರಿರಬಹುದು? ಈ ಪ್ರಶ್ನೆಗೆ ಈ ಫೋಟೋ ಗ್ಯಾಲರಿಯಲ್ಲಿ ನಿಮಗೆ ಉತ್ತರ ಸಿಗಲಿದೆ. ಇದರಲ್ಲಿ ವಿರಾಟ್ ಕೊಹ್ಲಿಯಿಂದ ಹಿಡಿದು ಎಂಎಸ್ ಧೋನಿಯವರೆಗೆ ಅನುಭವಿ ಆಟಗಾರರ ಹೆಸರುಗಳಿವೆ.
(1 / 6)
ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಒಂದೇ ಋತುವಿನಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಯಾರು ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಇದಕ್ಕೆ ಉತ್ತರವಿದೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ಅವರ ಹೆಸರು ಹೊಸತಾಗಿ ಸೇರ್ಪಡೆಯಾಗಿದೆ. ಉಳಿದ ಮೂವರು ನಾಯಕರು ಯಾರು? ಮುಂದೆ ತಿಳಿಯೋಣ.
(AP)(2 / 6)
ಐಪಿಎಲ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 2016ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 38 ಸಿಕ್ಸರ್ ಬಾರಿಸಿದ್ದರು. ಆ ಸಮಯದಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು. ಇದು ದಾಖಲೆಯ ಸಿಕ್ಸರ್.
(AFP)(3 / 6)
ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ನಾಯಕರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದಾರೆ. 2016ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅವರು 31 ಸಿಕ್ಸರ್ ಬಾರಿಸಿದ್ದರು.
(4 / 6)
ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ನಾಯಕರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೇಯಸ್ ಅಯ್ಯರ್ 2025ರಲ್ಲಿ ಈವರೆಗೆ ಒಟ್ಟು 31 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅವರು ಕನಿಷ್ಠ ಇನ್ನೂ ಎರಡು ಪಂದ್ಯಗಳನ್ನು ಈ ಬಾರಿ ಆಡಲಿದ್ದಾರೆ. ಪಂಜಾಬ್ ಕಿಂಗ್ಸ್ ನಾಯಕ ಮುಂದೆ ವಾರ್ನರ್ ಹಾಗೂ ವಿರಾಟ್ ದಾಖಲೆ ಬ್ರೇಕ್ ಮಾಡಿದರೂ ಅಚ್ಚರಿ ಇಲ್ಲ.
(AFP)(5 / 6)
ಐಪಿಎಲ್ ಋತುವಿನಲ್ಲಿ ನಾಯಕನಾಗಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಎಂಎಸ್ ಧೋನಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 30 ಸಿಕ್ಸರ್ ಬಾರಿಸಿದ್ದರು.
(HT_PRINT)ಇತರ ಗ್ಯಾಲರಿಗಳು