ಡೇವಿಡ್ ವಾರ್ನರ್ ಮಾತ್ರವಲ್ಲ; ನಟನೆಯಲ್ಲೂ ಸೈ ಎನಿಸಿಕೊಂಡ ಸ್ಟಾರ್ ಕ್ರಿಕೆಟಿಗರಿವರು -Photos
- ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಡೇವಿಡ್ ವಾರ್ನರ್ ನಟನಾಗಿ ಬಡ್ತಿ ಪಡೆದಿದ್ದಾರೆ. ಅವರು ತೆಲುಗು ಚಿತ್ರ ‘ರಾಬಿನ್ ಹುಡ್’ನಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಮಾತ್ರವಲ್ಲದೆ ಕಪಿಲ್ ದೇವ್‌ರಿಂದ ಹಿಡಿದು ಅನೇಕ ಆಟಗಾರರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆ ಪಟ್ಟಿ ಇಲ್ಲಿದೆ.
- ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಡೇವಿಡ್ ವಾರ್ನರ್ ನಟನಾಗಿ ಬಡ್ತಿ ಪಡೆದಿದ್ದಾರೆ. ಅವರು ತೆಲುಗು ಚಿತ್ರ ‘ರಾಬಿನ್ ಹುಡ್’ನಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಮಾತ್ರವಲ್ಲದೆ ಕಪಿಲ್ ದೇವ್‌ರಿಂದ ಹಿಡಿದು ಅನೇಕ ಆಟಗಾರರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆ ಪಟ್ಟಿ ಇಲ್ಲಿದೆ.
(1 / 7)
ನಿತಿನ್ ಮತ್ತು ಶ್ರೀಲೀಲಾ ಅಭಿನಯದ ರಾಬಿನ್ ಹುಡ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಡೇವಿಡ್ ವಾರ್ನರ್ ನಟಿಸಿದ್ದಾರೆ. ಇವರ ಫಸ್ಟ್ ಲುಕ್ ಕೂಡಾ ಬಹಿರಂಗವಾಗಿದೆ. ಚಿತ್ರವು ಮಾರ್ಚ್ 28ರಂದು ಬಿಡುಗಡೆಗೆ ಸಜ್ಜಾಗಿದೆ.
(AFP)(2 / 7)
ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಸನ್ನಿ 1980ರಲ್ಲಿ ಮರಾಠಿ ಚಿತ್ರ 'ಸಾವ್ಲಿ ಪ್ರೇಮಾಚಿ' ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಅವರು ನಾಸಿರುದ್ದೀನ್ ಶಾ ಅವರೊಂದಿಗೆ ಮಾಲಾಮಾಲ್‌ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
(x/hi__hassan)(3 / 7)
ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ನಂತರ, ಅಜಯ್ ಜಡೇಜಾ ನಟನಾಗಿ ತಮ್ಮ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದರು. ಮಾಜಿ ನಾಯಕ 2003ರಲ್ಲಿ ಆಟದಿಂದ ನಿವೃತ್ತರಾದರು. ಅಜಯ್ ತಮ್ಮ ಚಲನಚಿತ್ರ ವೃತ್ತಿಜೀವನವನ್ನು 'ಖೇಲ್' ಚಿತ್ರದ ಮೂಲಕ ಆರಂಭಿಸಿದರು. ಅವರು ಪಾಲ್ ಪಾಲ್ ದಿಲ್ ಕೆ ಸಾಥ್ ಚಿತ್ರದಲ್ಲೂ ನಟಿಸಿದ್ದಾರೆ.
(x/saintkishore)(4 / 7)
ಕ್ರಿಕೆಟಿಗ ಶ್ರೀಶಾಂತ್ ಕೂಡ ಚಲನಚಿತ್ರಗಳಲ್ಲಿ ಅದೃಷ್ಟ ಪರೀಕ್ಷಿಸಿದ್ದಾರೆ. ಐಪಿಎಲ್ ಫಿಕ್ಸಿಂಗ್ ಆರೋಪದ ಮೇಲೆ ನಿಷೇಧಕ್ಕೊಳಗಾಗಿ ನಂತರ ನಿವೃತ್ತಿ ಘೋಷಿಸಿದ ಮಾಜಿ ವೇಗಿ, ಐದು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹಿಂದಿಯಲ್ಲಿ ಅಕ್ಷರ್ 2 ಮಾಡಿದ್ದಾರೆ. ಅವರು ಮಲಯಾಳಂನಲ್ಲಿ ಕಾತುವಾಕುಲ ರೆಂಡು ಕಾದಲ್ ಚಿತ್ರದಲ್ಲಿ ನಟಿಸಿದ್ದಾರೆ.
(x/vigil_in)(5 / 7)
ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಲೆಜೆಂಡರಿ ನಾಯಕ ಕಪಿಲ್ ದೇವ್ ಕೂಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಿವರು ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು '83' ಮತ್ತು 'ಮುಜ್ಸೆ ಶಾದಿ ಕರೋಗಿ' ಚಿತ್ರಗಳಲ್ಲಿ ನಟಿಸಿದ್ದಾರೆ.
(x/therealkapildev)(6 / 7)
ಭಾರತದ ಮಾಜಿ ಡ್ಯಾಶಿಂಗ್ ಆಲ್‌ರೌಂಡರ್, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಕೂಡ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರು ಬಾಲ ಕಲಾವಿದನಾಗಿ ಪಂಜಾಬಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರು 2008ರ ಅನಿಮೇಟೆಡ್ ಚಿತ್ರ 'ಜಂಬೋ'ದಲ್ಲಿ ಒಂದು ಪಾತ್ರಕ್ಕೆ ಧ್ವನಿ ನೀಡಿದರು. ಯುವಿ ತಂದೆ ಯೋಗರಾಜ್ ಸಿಂಗ್ ಒಂದು ಕಾಲದ ದೊಡ್ಡ ನಟ. ಅವರು 30ಕ್ಕೂ ಹೆಚ್ಚು ಪಂಜಾಬಿ ಚಲನಚಿತ್ರಗಳು ಮತ್ತು 10 ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
(x/YUVSTRONG12)(7 / 7)
ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಮೈದಾನದಲ್ಲಿ ಮಾತ್ರವಲ್ಲದೆ ಬೆಳ್ಳಿ ಪರದೆಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಕ್ರಮ್ ಅವರ 'ಕೋಬ್ರಾ' ಚಿತ್ರದಲ್ಲಿನ ಅವರ ಅಭಿನಯದಿಂದ ಇರ್ಫಾನ್ ಪ್ರಭಾವಿತರಾದರು. ಈ ಚಿತ್ರದಲ್ಲಿ ಅವರು ನೆಗೆಟಿವ್ ಶೇಡ್ ಹೊಂದಿರುವ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ವಿದೇಶಿ ಕ್ರಿಕೆಟಿಗರಾದ ಬ್ರೆಟ್ ಲೀ, ಡ್ವೇನ್ ಬ್ರಾವೋ ಕೂಡ ನಟನೆಗೆ ಕೈ ಹಾಕಿದ್ದಾರೆ.
(x/IrfanPathan)ಇತರ ಗ್ಯಾಲರಿಗಳು