ಲೋಕಸಭೆ ಚುನಾವಣೆ 2024: ಐಪಿಎಲ್ ಮುಗಿದ ಬೆನ್ನಲ್ಲೇ ರಾಂಚಿಗೆ ತೆರಳಿ ಮತದಾನ ಮಾಡಿದ ಎಂಎಸ್ ಧೋನಿ
- ಲೋಕಸಭೆ ಚುನಾವಣೆ 2024ರ ಆರನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ರಾಂಚಿಯಲ್ಲಿ ಶನಿವಾರ ಮತ ಚಲಾಯಿಸಿದ್ದಾರೆ. ಐಪಿಎಲ್ 17ನೇ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಅಭಿಯಾನ ಮುಗಿಸಿ ರಾಂಚಿಗೆ ಮರಳಿದ ಮಾಹಿ, ಹಕ್ಕು ಚಲಾಯಿಸಿದ್ದಾರೆ.

(1 / 5)
ಮೇ 25ರ ಶನಿವಾರ ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ ಚಲಾಯಿಸಿದ್ದಾರೆ. ರಾಂಚಿಗೆ ಆಗಮಿಸಿದ ಅವರು, ಸ್ಥಳೀಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
(Somnath Sen)(2 / 5)
ರಾಂಚಿಯ ಶಾಲಾ ಕಟ್ಟಡದಲ್ಲಿರುವ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ನಂತರ ಎಂಎಸ್ ಧೋನಿ ಅಭಿಮಾನಿಗಳತ್ತ ಕೈಬೀಸಿದರು.
(AP)(3 / 5)
ಆರನೇ ಹಂತದ ಮತದಾನವು ಬಿಗಿ ಭದ್ರತೆ ನಡುವೆ ನಡೆದಿದೆ. ದೇಶದ ಒಟ್ಟು ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಲ್ಲಿ ಇಂದು (ಶನಿವಾರ) ಮುಂಜಾನೆಯಿಂದ ಮತದಾನ ನಡೆಯಿತು.
(DC Ranchi-X)(4 / 5)
ಐಪಿಎಲ್ 2024ರ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಆಡಿದ್ದ ಧೋನಿ, ಆರ್‌ಸಿಬಿ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೋತ ಬಳಿಕ ರಾಂಚಿಗೆ ಹಿಂತಿರುಗಿದ್ದಾರೆ. ಅದರ ಬೆನ್ನಲ್ಲೇ ತಮ್ಮ ಹಕ್ಕು ಚಲಾಯಿಸಿ ಮತದಾನದ ಜಾಗೃತಿ ಮೂಡಿಸಿದ್ದಾರೆ.
(PTI)ಇತರ ಗ್ಯಾಲರಿಗಳು