ನಿವೃತ್ತಿ ನಂತರವೂ ಕುಂದದ ಎಂಎಸ್ ಧೋನಿ ಬ್ರಾಂಡ್ ಮೌಲ್ಯ; ಜಾಹೀರಾತು ಒಪ್ಪಂದದಲ್ಲಿ ಅಮಿತಾಭ್-ಶಾರುಖ್ ಮೀರಿಸಿದ ಮಾಹಿ
- ನಾಲ್ಕು ವರ್ಷಗಳ ಹಿಂದೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಂಎಸ್ ಧೋನಿ, ಈಗಲೂ ಅಭಿಮಾನಿಗಳ ಪಾಲಿನ ನೆಚ್ಚಿನ ಕ್ಯಾಪ್ಟನ್. ಕ್ರಿಕೆಟ್ ಮೈದಾನದಲ್ಲಿ ಹೆಚ್ಚು ಸಕ್ರಿಯರಾಗಿಲ್ಲದಿದ್ದರೂ, ಮಾಹಿ ಬ್ರಾಂಡ್ ಮೌಲ್ಯ ಸ್ವಲ್ಪವೂ ಕುಂದಿಲ್ಲ. ಬದಲಿಗೆ ಏರಿಕೆಯಾಗುತ್ತಲೇ ಇವೆ. ವಿವಿಧ ಕಂಪನಿಗಳು ಜಾಹೀರಾತು ಒಪ್ಪಂದಕ್ಕಾಗಿ ಧೋನಿ ಬೆನ್ನ ಹಿಂದೆ ಬೀಳುತ್ತಿವೆ.
- ನಾಲ್ಕು ವರ್ಷಗಳ ಹಿಂದೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಂಎಸ್ ಧೋನಿ, ಈಗಲೂ ಅಭಿಮಾನಿಗಳ ಪಾಲಿನ ನೆಚ್ಚಿನ ಕ್ಯಾಪ್ಟನ್. ಕ್ರಿಕೆಟ್ ಮೈದಾನದಲ್ಲಿ ಹೆಚ್ಚು ಸಕ್ರಿಯರಾಗಿಲ್ಲದಿದ್ದರೂ, ಮಾಹಿ ಬ್ರಾಂಡ್ ಮೌಲ್ಯ ಸ್ವಲ್ಪವೂ ಕುಂದಿಲ್ಲ. ಬದಲಿಗೆ ಏರಿಕೆಯಾಗುತ್ತಲೇ ಇವೆ. ವಿವಿಧ ಕಂಪನಿಗಳು ಜಾಹೀರಾತು ಒಪ್ಪಂದಕ್ಕಾಗಿ ಧೋನಿ ಬೆನ್ನ ಹಿಂದೆ ಬೀಳುತ್ತಿವೆ.
(1 / 6)
ವರ್ಷದಿಂದ ವರ್ಷಕ್ಕೆ ಐಪಿಎಲ್‌ನಲ್ಲಿ ಮಾತ್ರವೇ ಭಾಗವಹಿಸುತ್ತಿರುವ ಎಂಎಸ್‌ಡಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾರೆ. ಐಪಿಎಲ್ 2025ರ ಆವೃತ್ತಿಗೂ ಮುನ್ನ ಮಾಹಿಯನ್ನು ಸಿಎಸ್‌ಕೆ ಫ್ರಾಂಚೈಸಿ 4 ಕೋಟಿ ರೂ ಕೊಟ್ಟು ಉಳಿಸಿಕೊಂಡಿದೆ.
(2 / 6)
ಮೈದಾನದಲ್ಲಿ ಧೋನಿ ಹೆಚ್ಚು ಆಡದಿದ್ದರೂ, ಅವರ ಮಾರುಕಟ್ಟೆ ಮೌಲ್ಯದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಿಲ್ಲ. ವಾಸ್ತವವಾಗಿ, 2024ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಧೋನಿಯ ಮೌಲ್ಯವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
(AFP)(3 / 6)
2024ರ ಮೊದಲಾರ್ಧದಲ್ಲಿ ಬ್ರ್ಯಾಂಡ್ ಅನುಮೋದನೆಗಳ ವಿಷಯದಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ ಧೋನಿ ಬಾಲಿವುಡ್ ದಿಗ್ಗಜರಾದ ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಅವರನ್ನೇ ಮೀರಿಸಿದ್ದಾರೆ. ಈ ಕುರಿತು ಅಮೆರಿಕದ ನೀಲ್ಸನ್ ಮತ್ತು ಯುಕೆಯ ಕಾಂತಾರ್ ಜಂಟಿ ಉದ್ಯಮವಾದ TAM ಮೀಡಿಯಾ ರಿಸರ್ಚ್ ಪ್ರಕಟಿಸಿದ ಇತ್ತೀಚಿನ ವರದಿ ಹೇಳಿದೆ.
(4 / 6)
ಇತ್ತೀಚೆಗಷ್ಟೇ ಯುರೋಗ್ರಿಪ್ ಟೈರ್ಸ್‌ನ ಬ್ರಾಂಡ್ ಅಂಬಾಸೆಡರ್ ಆದ ಧೋನಿ; ಗಲ್ಫ್ ಆಯಿಲ್, ಕ್ಲಿಯರ್‌ಟ್ರಿಪ್, ಮಾಸ್ಟರ್ ಕಾರ್ಡ್, ಸಿಟ್ರೊಯೆನ್, ಲೇಸ್ ಮತ್ತು ಗರುಡಾ ಏರೋಸ್ಪೇಸ್‌ನಂತಹ ಹಲವು ದೊಡ್ಡ ದೊಡ್ಡ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ.
(5 / 6)
ವರದಿಯ ಪ್ರಕಾರ, 2024ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಧೋನಿ ಬರೋಬ್ಬರಿ 42 ಬ್ರ್ಯಾಂಡ್ ಡೀಲ್‌ಗಳನ್ನು ಪಡೆದಿದ್ದಾರೆ. ಈ ಪ್ರಮಾಣವು ಅಮಿತಾಬ್‌ಗಿಂತ ಒಂದು ಮತ್ತು ಶಾರುಖ್‌ಗಿಂತ 8ರಷ್ಟು ಹೆಚ್ಚು ಎಂಬುದು ವಿಶೇಷ.
(6 / 6)
ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಐಪಿಎಲ್ ಹೊಸ ನಿಯಮವನ್ನು ಪರಿಚಯಿಸಿದ ನಂತರ, 43 ವರ್ಷದ ಮಾಹಿಯನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಸಿಎಸ್‌ಕೆ ಉಳಿಸಿಕೊಂಡಿತು. ಧೋನಿ ಜೊತೆಗೆ ಗಾಯಕ್ವಾಡ್, ರವೀಂದ್ರ ಜಡೇಜಾ, ಮಥೀಶ ಪತಿರಾನ ಮತ್ತು ಶಿವಂ ದುಬೆ ಅವರನ್ನು ಸಿಎಸ್‌ಕೆ ಉಳಿಸಿಕೊಂಡಿತು. ಕಳೆದ ವರ್ಷ ಟ್ರೋಫಿ ಮಿಸ್ ಮಾಡಿಕೊಂಡಿದ್ದ ಸಿಎಸ್‌ಕೆ, ಈ ಬಾರಿ ಆರನೇ ಟ್ರೋಫಿ ಗೆಲುವಿಗೆ ಎದುರು ನೋಡುತ್ತಿದೆ.
(PTI)ಇತರ ಗ್ಯಾಲರಿಗಳು