ತವರು ಮೈದಾನ ಚೆಪಾಕ್‌ನಲ್ಲಿ ಕನಿಷ್ಠ ಮೊತ್ತ ದಾಖಲಿಸಿದ ಸಿಎಸ್‌ಕೆ; ಧೋನಿ ನಾಯಕತ್ವಕ್ಕೆ ಮರಳಿದ ಪಂದ್ಯದಲ್ಲೇ ಕಳಪೆ ಸಾಧನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತವರು ಮೈದಾನ ಚೆಪಾಕ್‌ನಲ್ಲಿ ಕನಿಷ್ಠ ಮೊತ್ತ ದಾಖಲಿಸಿದ ಸಿಎಸ್‌ಕೆ; ಧೋನಿ ನಾಯಕತ್ವಕ್ಕೆ ಮರಳಿದ ಪಂದ್ಯದಲ್ಲೇ ಕಳಪೆ ಸಾಧನೆ

ತವರು ಮೈದಾನ ಚೆಪಾಕ್‌ನಲ್ಲಿ ಕನಿಷ್ಠ ಮೊತ್ತ ದಾಖಲಿಸಿದ ಸಿಎಸ್‌ಕೆ; ಧೋನಿ ನಾಯಕತ್ವಕ್ಕೆ ಮರಳಿದ ಪಂದ್ಯದಲ್ಲೇ ಕಳಪೆ ಸಾಧನೆ

  • ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಪ್ರಸಕ್ತ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯ ಗೆದ್ದ ಬಳಿಕ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಇದೀಗ ಕೆಕೆಆರ್‌ ವಿರುದ್ಧವೂ ಅಲ್ಪ ಮೊತ್ತ ಕಲೆ ಹಾಕಿ ಚೆಪಾಕ್‌ನಲ್ಲಿ ಮತ್ತೊಂದು ಕಳಪೆ ದಾಖಲೆ ನಿರ್ಮಿಸಿದೆ.

5 ಬಾರಿಯ ಚಾಂಪಿಯನ್‌ ಆಗಿರುವ ಸಿಎಸ್‌ಕೆ ತಂಡ, ಈ ಬಾರಿ ಗೆಲುವಿಗಾಗಿ ಹೆಣಗಾಡುತ್ತಿದೆ. ತಂಡದ 5 ಪಂದ್ಯಗಳ ಬಳಿಕ, ನಾಯಕನಾಗಿದ್ದ ರುತುರಾಜ್‌ ಗಾಯಕ್ವಾಡ್‌ ಗಾಯದಿಂದಾಗಿ ತಂಡದಿಂದ ಹೊರಬಿದ್ದರು. ಎಂ ಎಸ್‌ ಧೋನಿ ನಾಯಕನಾಗಿ ತಂಡಕ್ಕೆ ಮರಳಿದರು.
icon

(1 / 6)

(PTI)

ಎಂಎಸ್‌ ಧೋನಿ ನಾಯಕನಾಗಿ ತಂಡಕ್ಕೆ ಮರಳಿದ ಮೊದಲ ಪಂದ್ಯದಲ್ಲಿಯೇ, ಕೆಕೆಆರ್‌ ವಿರುದ್ಧ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ತವರು ಮೈದಾನ ಚೆಪಾಕ್‌ನಲ್ಲಿ ಅತ್ಯಂತ ಕನಿಷ್ಠ ಮೊತ್ತ ಕಲೆ ಹಾಕಿದೆ.
icon

(2 / 6)

(AFP)

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ‌ ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ, ಕೇವಲ 103 ರನ್‌ ಗಳಿಸಿತು. ಇದು ಚೆಪಾಕ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಮಾಹಿ ನಾಯಕತ್ವಕ್ಕೆ ಕಂಬ್ಯಾಕ್‌ ಮಾಡಿದ ಪಂದ್ಯದಲ್ಲೇ ಈ ಕಳಪೆ ದಾಖಲೆ ನಿರ್ಮಾಣವಾಗಿದೆ.
icon

(3 / 6)

103 ರನ್‌, ಒಟ್ಟಾರೆಯಾಗಿ ಚೆಪಾಕ್‌ ಮೈದಾನದಲ್ಲಿ ದಾಖಲಾದ ಎರಡನೇ ಕನಿಷ್ಠ ಮೊತ್ತವಾಗಿದೆ. ಈ ಹಿಂದೆ 2019ರಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ತಂಡ ಕಲೆ ಹಾಕಿದ್ದ 70 ರನ್‌, ಈವರೆಗಿನ ಅತಿ ಕಡಿಮೆ ಮೊತ್ತವಾಗಿದೆ.
icon

(4 / 6)

(AP)

ಸಿಎಸ್‌ಕೆ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ (ಯಾವುದೇ ಮೈದಾನ) ಕಲೆ ಹಾಕಿದ ಎರಡನೇ ಅಲ್ಪ ಮೊತ್ತ ಇದಾಗಿದೆ. ಈ ಹಿಂದೆ 2022ರಲ್ಲಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 97 ರನ್‌ ಗಳಿಸಿದ್ದು ತಂಡದ ಈವರೆಗಿನ ಕನಿಷ್ಠ ಮೊತ್ತವಾಗಿದೆ.
icon

(5 / 6)

(REUTERS)

ಸಿಎಸ್‌ಕೆ ಪರ ಶಿವಂ ದುಬೆ ಅಜೇಯ 31 ರನ್‌ ಗಳಿಸಿದರೆ, ವಿಜಯ್‌ ಶಂಕರ್‌ 29 ರನ್‌ ಗಳಿಸಿದರು. ನಾಯಕನಾಗಿ ನಿರೀಕ್ಷೆ ಮೂಡಿಸಿದ್ದ ಧೋನಿ 4 ಎಸೆತಗಳಲ್ಲಿ ಕೇವಲ 1 ರನ್‌ ಗಳಿಸಿ ಔಟಾದರು.
icon

(6 / 6)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು