6,4,4,6,6,4 ಒಂದೇ ಓವರ್ನಲ್ಲಿ 30 ರನ್ ಚಚ್ಚಿ ವಿಧ್ವಂಸ ಸೃಷ್ಟಿಸಿದ ಡೆವಾಲ್ಡ್ ಬ್ರೆವಿಸ್; 20 ರಿಂದ 50 ರನ್ ಮುಟ್ಟಿದ ಬೇಬಿ ಎಬಿ!
2025ರ ಐಪಿಎಲ್ನಲ್ಲಿ ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಆದರೆ ಗೆಲುವಿನಲ್ಲಿ ಡೆವಾಲ್ಡ್ ಬ್ರೆವಿಸ್ ಅವರ ಪಾತ್ರ ದೊಡ್ಡದು. ಅದರಲ್ಲೂ ಆ ಓವರ್ ಪಂದ್ಯದ ಚಿತ್ರಣವನ್ನೇ ಬದಲಿಸಿತು.
(1 / 5)
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ ಅಬ್ಬರಿಸಿ ಬೊಬ್ಬರಿದರು. ಒಂದು ಓವರ್ನಲ್ಲಿ 30 ರನ್ ಗಳಿಸಿ ಕೆಕೆಆರ್ ಸೋಲಿಗೆ ಕಾರಣರಾದರು.
(AP)(2 / 5)
ಒಂದು ಹಂತದಲ್ಲಿ 16 ಎಸೆತಗಳಲ್ಲಿ 20 ರನ್ ಗಳಿಸಿದ ಸೌತ್ ಆಫ್ರಿಕಾದ ಬ್ಯಾಟರ್, ಮುಂದಿನ 6 ಎಸೆತಗಳಲ್ಲಿ 30 ರನ್ ಗಳಿಸಿ ತಮ್ಮ ಅರ್ಧ ಶತಕವನ್ನು ಪೂರ್ಣಗೊಳಿಸಿದರು.
(AP)(3 / 5)
ಕೆಕೆಆರ್ನ ವೈಭವ್ ಆರೋರಾ ಇನ್ನಿಂಗ್ಸ್ನ 11ನೇ ಓವರ್ನಲ್ಲಿ 30 ರನ್ ಬಿಟ್ಟುಕೊಟ್ಟರು. ಈ ದುಬಾರಿ ಓವರ್ನಲ್ಲಿ 3 ಬೌಂಡರಿ, 3 ಸಿಕ್ಸರ್ಗಳು ಸೇರಿದ್ದವು.
(AP)(4 / 5)
ಬ್ರೆವಿಸ್ ಆ ಓವರ್ನಲ್ಲಿ ಕ್ರಮವಾಗಿ 6, 4, 4, 6, 6, 6, 4 ರನ್ ಗಳಿಸಿದರು. ಬ್ರೆವಿಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿ ಸಂಭ್ರಮಿಸಿದರು.
(REUTERS)ಇತರ ಗ್ಯಾಲರಿಗಳು