ಎಸ್ಆರ್ಹೆಚ್ ವಿರುದ್ಧ ಸೋತರೂ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ-2ರೊಳಗೆ ಮುಗಿಸಲು ಇನ್ನೂ ಇದೆ ಅವಕಾಶ, ಹೇಗೆ?
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತರೂ ಅಂಕಪಟ್ಟಿಯಲ್ಲಿ ಅಗ್ರ-2ರೊಳಗೆ ಮುಗಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ ಅವಕಾಶ ಇದೆ.
(1 / 8)
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲಬೇಕಿದ್ದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಗ್ಗರಿಸಿದೆ. ಬರೋಬ್ಬರಿ 42 ರನ್ಗಳ ಅಂತರದಿಂದ ಸೋತ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿಯಿತು.
(AFP)(2 / 8)
ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿರುವ ಆರ್‌ಸಿಬಿ ಈಗ ಲೀಗ್ ಹಂತದಲ್ಲಿ ಅಗ್ರ-2ರೊಳಗೆ ಮುಕ್ತಾಯಗೊಳಿಸಲು ಎಸ್ಆರ್ಹೆಚ್ ವಿರುದ್ಧದ ಸೋಲು ಕೊಂಚ ಅಡ್ಡಿಪಡಿಸಿತು. ಸೋಲಿನ ಹೊರತಾಗಿಯೂ ಆರ್‌ಸಿಬಿ ಇನ್ನೂ ಅಗ್ರ-2ರಲ್ಲಿ ಸ್ಥಾನ ಪಡೆಯಲು ಅವಕಾಶ ಇದೆ. ಅದು ಹೇಗೆ ಎಂದು ಮುಂದೆ ತಿಳಿಯೋಣ.
(AFP)(3 / 8)
ಆರ್‌ಸಿಬಿ ಆಡಿರುವ 13 ಪಂದ್ಯಗಳಲ್ಲಿ 8 ಗೆಲುವು, 4 ಸೋಲಿನೊಂದಿಗೆ 17 ಅಂಕ ಪಡೆದಿದೆ. 1 ಪಂದ್ಯ ರದ್ದಾಗಿದೆ. ಇನ್ನೊಂದು ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿರುವ ಆರ್‌ಸಿಬಿ, ಗೆದ್ದರೆ 19 ಅಂಕದೊಂದಿಗೆ ಅಗ್ರ-2ರೊಳಗೆ ಸ್ಥಾನ ಪಡೆಯಬಹುದು.
(AFP)(4 / 8)
ಅಗ್ರ-2 ತಂಡಗಳಲ್ಲಿ ಒಂದಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶ ಹೊಂದಿರುವ ಆರ್‌ಸಿಬಿ ತಂಡ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಸಾಧ್ಯತೆಯೂ ಇದೆ. ಎಲ್‌ಎಸ್‌ಜಿ ವಿರುದ್ಧ ಬೆಂಗಳೂರು ಗೆಲ್ಲುವುದರ ಜೊತೆಗೆ ದೊಡ್ಡ ಅಂತರದಿಂದ ಗೆಲ್ಲುವುದು ಅಗತ್ಯ.
(AFP)(5 / 8)
ಗುಜರಾತ್ ಟೈಟಾನ್ಸ್ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಪಂಜಾಬ್ 17 ಅಂಕ ಪಡೆದಿದ್ದು, 2ನೇ ಸ್ಥಾನದಲ್ಲಿದೆ. ಐಪಿಎಲ್ 2025 ಗುಂಪು ಹಂತದ ಅಂತ್ಯದಲ್ಲಿ ಆರ್‌ಸಿಬಿ ಟೇಬಲ್ ಟಾಪರ್ ಆಗಲು ಪಿಬಿಕೆಎಸ್ ಮತ್ತು ಜಿಟಿ ಎರಡೂ ತಮ್ಮ ಕೊನೆಯ ಪಂದ್ಯಗಳನ್ನು ಸೋಲಬೇಕು ಮತ್ತು ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಗೆಲ್ಲಬೇಕು.
(AFP)(6 / 8)
ಗುಜರಾತ್ ತಂಡವು ಸಿಎಸ್‌ಕೆ ವಿರುದ್ಧದ ತನ್ನ ಉಳಿದ ಪಂದ್ಯವನ್ನು ಗೆದ್ದರೆ ಮತ್ತು ಪಿಬಿಕೆಎಸ್ ತಂಡವು ಉಳಿದ 2 ಪಂದ್ಯಗಳಲ್ಲಿ ಸೋತರೆ, ಆರ್‌ಸಿಬಿ 19 ಅಂಕಗಳೊಂದಿಗೆ ಅರ್ಹತೆ ಪಡೆಯುತ್ತದೆ. ಮೊದಲ 2ರಲ್ಲಿ ತಮ್ಮ ಸ್ಥಾನ ಪಡೆದರೆ ಆರ್ಸಿಬಿಗೆ ಸಿಗಲಿದೆ.
(AFP)(7 / 8)
ಪಿಬಿಕೆಎಸ್ ತಮ್ಮ ಉಳಿದ ಒಂದು ಅಥವಾ ಎರಡೂ ಪಂದ್ಯಗಳನ್ನು ಗೆದ್ದರೆ ಮತ್ತು ಜಿಟಿ ತಮ್ಮ ಕೊನೆಯ ಪಂದ್ಯವನ್ನು ಗೆಲ್ಲದಿದ್ದರೆ ಆರ್‌ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಫಿಕ್ಸ್ ಆಗಲಿದೆ.
(AFP)ಇತರ ಗ್ಯಾಲರಿಗಳು