ಕೆಕೆಆರ್ ವಿರುದ್ಧದ ಕದನಕ್ಕೆ ಆರ್ಸಿಬಿ ಪರ ಆಡಲಿಲ್ಲವೇಕೆ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್?
- ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಅವಕಾಶ ಪಡೆಯಲಿಲ್ಲವೇಕೆ? ಇಲ್ಲಿದೆ ವಿವರ.
- ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಅವಕಾಶ ಪಡೆಯಲಿಲ್ಲವೇಕೆ? ಇಲ್ಲಿದೆ ವಿವರ.
(1 / 9)
ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಕಣಕ್ಕಿಳಿಯದಿರುವುದು ಅಚ್ಚರಿ ಮೂಡಿಸಿದೆ.
(2 / 9)
ಭುವನೇಶ್ವರ್ ಕುಮಾರ್ ಆಡುವ XI ಅಥವಾ ಇಂಪ್ಯಾಕ್ಟ್ ಪ್ಲೇಯರ್ ಲಿಸ್ಟ್‌ನ ಭಾಗವೂ ಆಗಿಲ್ಲ. ಫ್ರಾಂಚೈಸ್ ಅಥವಾ ನಾಯಕ ರಜತ್ ಪಾಟೀದಾರ್ ಅವರು ಅನುಭವಿ ಭಾರತೀಯ ವೇಗಿಯ ಅವಕಾಶ ಪಡೆಯದ ಕುರಿತು ಟಾಸ್ ವೇಳೆ ಮಾಹಿತಿ ನೀಡಿರಲಿಲ್ಲ.
(3 / 9)
ಹೀಗಾಗಿ ಭುವಿ ಆಡುವ 11ರ ಬಳಗದ ಭಾಗವಾಗಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪ್ಲೇಯಿಂಗ್ 11 ಪ್ರಕಟಿಸಿದಾಗ ಭುವಿ ಹೆಸರು ಇಲ್ಲದೇ ಇರುವುದು ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.
(4 / 9)
ಇದೀಗ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಆಡದೇ ಇರಲು ಕಾರಣ ಏನೆಂದು ಬಹಿರಂಗಗೊಂಡಿದೆ. ಫ್ರಾಂಚೈಸಿಯು ಈ ಬಗ್ಗೆ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಮೈದಾನಕ್ಕೆ ಮರಳಲಿದ್ದಾರೆ ಎಂದು ಭರವಸೆ ನೀಡಿದೆ.
(5 / 9)
ದುರದೃಷ್ಟವಶಾತ್, ಭುವಿ ಸಣ್ಣ ಗಾಯದಿಂದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಅವರು ಶೀಘ್ರದಲ್ಲೇ ಹಿಂತಿರುಗಲಿದ್ದಾರೆ ಎಂದು ರಜತ್ ಪಾಟೀದಾರ್ ನೇತೃತ್ವದ ಫ್ರಾಂಚೈಸ್ ಟಾಸ್ ನಂತರ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
(6 / 9)
ಭುವಿ ಅಲಭ್ಯತೆಯಲ್ಲಿ ರಸಿಕ್ ದಾರ್ ಸಲಾಂ ಅವರು ಕಣಕ್ಕಿಳಿದರು. ಇವರ ಜೊತೆಗೆ ಜೋಶ್ ಹೇಜಲ್ವುಡ್ ಮತ್ತು ಯಶ್ ದಯಾಳ್ ಅವರು ವೇಗಿಗಳಾಗಿ ತಂಡವನ್ನು ಮುನ್ನಡೆಸಿದರು.
(7 / 9)
ಕಳೆದ ವರ್ಷ ಸನ್ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ವೇಗಿ ಭುವನೇಶ್ವರ್ ಕುಮಾರ್ ಅವರು ಐಪಿಎಲ್ ಮೆಗಾ ಹರಾಜಿನಲ್ಲಿ 10.75 ಕೋಟಿ ರೂಪಾಯಿಗೆ ಆರ್ಸಿಬಿ ಸೇರಿದ್ದರು. ಅವರ ಖರೀದಿಗೆ ಲಕ್ನೋ ಮತ್ತು ಮುಂಬೈ ತಂಡಗಳು ಪೈಪೋಟಿ ನಡೆಸಿದ್ದವು.
(8 / 9)
2009, 2010ರಲ್ಲಿ ಆರ್ಸಿಬಿ ಪರ ಆಡಿದ್ದ ಭುವನೇಶ್ವರ್, ಬಳಿಕ 2011 ರಿಂದ 2013ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ನಂತರ 2014ರಿಂದ 11 ಸೀಸನ್ಗಳ ಕಾಲ ಸನ್ರೈಸರ್ಸ್ ಹೈದರಾಬಾದ್ ಪರವೇ ಆಡಿದ್ದರು. ಇದೀಗ ಮತ್ತೆ ಆರ್ಸಿಬಿ ಸೇರಿದ್ದಾರೆ.
ಇತರ ಗ್ಯಾಲರಿಗಳು