ವಿರಾಟ್‌ ಕೊಹ್ಲಿ ಅಪ್ಪಿಕೊಳ್ಳಲು ಭದ್ರತೆ ಉಲ್ಲಂಘಿಸಿ ಎಂಸಿಜಿ ಮೈದಾನಕ್ಕೆ ನುಗ್ಗಿದ ಅಭಿಮಾನಿ -Photo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿರಾಟ್‌ ಕೊಹ್ಲಿ ಅಪ್ಪಿಕೊಳ್ಳಲು ಭದ್ರತೆ ಉಲ್ಲಂಘಿಸಿ ಎಂಸಿಜಿ ಮೈದಾನಕ್ಕೆ ನುಗ್ಗಿದ ಅಭಿಮಾನಿ -Photo

ವಿರಾಟ್‌ ಕೊಹ್ಲಿ ಅಪ್ಪಿಕೊಳ್ಳಲು ಭದ್ರತೆ ಉಲ್ಲಂಘಿಸಿ ಎಂಸಿಜಿ ಮೈದಾನಕ್ಕೆ ನುಗ್ಗಿದ ಅಭಿಮಾನಿ -Photo

  • ವಿರಾಟ್‌ ಕೊಹ್ಲಿ ಎಲ್ಲಿ ಹೋದರೂ, ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿರುತ್ತಾರೆ. ದೂರದ ಆಸ್ಟ್ರೇಲಿಯಾದ ಎಂಸಿಜಿಯಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ ಸಮಯದಲ್ಲಿ ವಿರಾಟ್‌ ನೋಡಲು ಅಭಿಮಾನಿ ಭದ್ರತೆಯನ್ನು ಉಲ್ಲಂಘಿಸಿದ್ದಾನೆ. 2ನೇ ದಿನದಂದು ಮೈದಾನದ ಒಳಗೆ ಬಂದ ಫ್ಯಾನ್‌, ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾನೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಸಮಯದಲ್ಲಿ, ಭದ್ರತೆಯನ್ನು ಮೀರಿ ಅಭಿಮಾನಿ ಪಿಚ್‌ ಬಳಿ ಬಂದಿದ್ದಾನೆ. ಈ ವೇಳೆ ಆಟಕ್ಕೂ ಅಡಚಣೆ ಸಂಭವಿಸಿದೆ. ಕೊಹ್ಲಿ ಬಳಿ ಬರುವ ಮೊದಲು ಸ್ಲಿಪ್ ಸಮೀಪ ನಿಂತಿದ್ದ ನಾಯಕ ರೋಹಿತ್ ಶರ್ಮಾ ಅವರತ್ತ ಹೋಗಿದ್ದಾನೆ.
icon

(1 / 5)

(AFP)

ಅಭಿಮಾನಿಯು 36 ವರ್ಷದ ಭಾರತದ ಮಾಜಿ ನಾಯಕನನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿದ್ದಾನೆ. ಕೊಹ್ಲಿ ಕೂಡಾ ಅಭಿಮಾನಿ ಜೊತೆಗೆ ಸಹಜವಾಗಿ ವರ್ತಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಮೈದಾನಕ್ಕೆ ಬಂದು ತ್ವರಿತವಾಗಿ ಮೈದಾನದಿಂದ ಹೊರಗೆ ಕರೆದೊಯ್ದಿದ್ದಾರೆ.
icon

(2 / 5)

ಅಭಿಮಾನಿಯು ಮೈದಾನಕ್ಕೆ ನುಗ್ಗಿದ್ದರಿಂದ, ಆಟವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯ್ತು. ಹೆಚ್ಚು ವಿಳಂಬವಾಗದೆ ಆಟವು ತ್ವರಿತವಾಗಿ ಪುನರಾರಂಭಗೊಂಡಿತು. 
icon

(3 / 5)

(AP)

ಪಂದ್ಯದ ಮೊದಲ ದಿನದಾಟದ ಸಮಯದಲ್ಲಿ ವಿರಾಟ್‌ ಹಾಗೂ ಆಸ್ಟ್ರೇಲಿಯಾದ 19 ವರ್ಷದ ಆಟಗಾರ ಸ್ಯಾಮ್ ಕಾನ್ಸ್ಟಾಸ್ ನಡುವೆ ವಾಗ್ವಾದ ನಡೆದಿತ್ತು. ಆ ನಂತರ ಕೊಹ್ಲಿಗೆ ಐಸಿಸಿ ದಂಡ ವಿಧಿಸಿತ್ತು. ಅದರ ಮರುದಿನವೇ ಈ ಘಟನೆ ನಡೆದಿದೆ.
icon

(4 / 5)

ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್‌ ಮೊತ್ತವನ್ನು 474 ರನ್‌ಗಳಿಗೆ ಏರಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್‌ ಆರಂಭಿಸಿರುವ ಭಾರತ 22 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 75 ರನ್‌ ಗಳಿಸಿದೆ.
icon

(5 / 5)

ಇತರ ಗ್ಯಾಲರಿಗಳು