ಐಪಿಎಲ್‌ನಲ್ಲಿ ವೇಗದ 5000 ರನ್ ಗಳಿಸಿ ರೋಹಿತ್, ಧೋನಿ ಹಿಂದಿಕ್ಕಿದ ರಹಾನೆ; ಟಾಪ್-7 ಪಟ್ಟಿಯಲ್ಲಿ ಯಾರಿದ್ದಾರೆ?
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಜಿಂಕ್ಯ ರಹಾನೆ 5,000 ರನ್ ಪೂರೈಸುವ ಮೂಲಕ ನೂತನ ಇತಿಹಾಸ ನಿರ್ಮಿಸಿದ್ದಾರೆ. ಶ್ರೀಮಂತ ಲೀಗ್‌ನಲ್ಲಿ ವೇಗವಾಗಿ 5,000 ರನ್ ಪೂರೈಸಿದ ಟಾಪ್ 7 ಆಟಗಾರರ ಪಟ್ಟಿಗೆ ಅವರು ಸೇರಿದ್ದಾರೆ.
(1 / 8)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 2025ರ ಐಪಿಎಲ್‌ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. 33 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 48 ರನ್ ಗಳಿಸಿ ಅರ್ಧಶತಕ ಗಳಿಸುವ ಅವಕಾಶ ಕಳೆದುಕೊಂಡರೂ ಐಪಿಎಲ್‌ನಲ್ಲಿ 5000 ರನ್ ಪೂರ್ಣಗೊಳಿಸಿದರು.
(PTI)(2 / 8)
ಐಪಿಎಲ್‌ನಲ್ಲಿ ಇನ್ನಿಂಗ್ಸ್‌ಗಳ ವಿಷಯದಲ್ಲಿ ವೇಗವಾಗಿ 5000 ರನ್ ಪೂರ್ಣಗೊಳಿಸಿದ ಆಟಗಾರರ ಪಟ್ಟಿಯಲ್ಲಿ ರಹಾನೆ 7ನೇ ಸ್ಥಾನವನ್ನು ತಲುಪಿದ್ದಾರೆ. 182 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಮುಟ್ಟಿದ್ದಾರೆ. ಕ್ರಮವಾಗಿ 187 ಮತ್ತು 208 ಇನ್ನಿಂಗ್ಸ್‌ಗಳಲ್ಲಿ 5 ಸಾವಿರ ರನ್ ಗಳಿಸಿದ್ದ ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ದಾಖಲೆ ಮುರಿದಿದ್ದಾರೆ.
(AFP)(3 / 8)
ಐಪಿಎಲ್‌ನಲ್ಲಿ ವೇಗವಾಗಿ ಐದು ಸಾವಿರ ರನ್ ಗಳಿಸಿದ ದಾಖಲೆಯನ್ನು ಕೆಎಲ್ ರಾಹುಲ್ ಹೊಂದಿದ್ದು, 130 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿರುವ ರಾಹುಲ್, ಐಪಿಎಲ್ 2025ರಲ್ಲಿಯೇ ಇತಿಹಾಸ ನಿರ್ಮಿಸಿದ್ದಾರೆ.
(PTI)(4 / 8)
ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ 135 ಇನ್ನಿಂಗ್ಸ್‌ಗಳಲ್ಲಿ 5,000 ರನ್‌ಗಳ ಗಡಿ ದಾಟಿದ್ದರು. ಅವರೀಗ ಎರಡನೇ ಸ್ಥಾನದಲ್ಲಿದ್ದಾರೆ.
(X)(5 / 8)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 157 ಇನ್ನಿಂಗ್ಸ್‌ಗಳಲ್ಲಿ ಐದು ಸಾವಿರ ರನ್ ಗಳಿಸಿದರು. ಐಪಿಎಲ್‌ನಲ್ಲಿ ಎಂಟು ಸಾವಿರ ರನ್ ಪೂರೈಸಿದ ಏಕೈಕ ಆಟಗಾರ ಅವರು.
(REUTERS)(6 / 8)
ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ 161 ಇನ್ನಿಂಗ್ಸ್‌ಗಳಲ್ಲಿ 5000 ರನ್ ಗಳಿಸಿದ್ದಾರೆ.
(X)(7 / 8)
ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 168 ಇನ್ನಿಂಗ್ಸ್‌ಗಳಲ್ಲಿ 5,000 ರನ್‌ಗಳ ಗಡಿ ದಾಟಿದ್ದರು.
(X)ಇತರ ಗ್ಯಾಲರಿಗಳು