ಅಂಡರ್ 19 ವನಿತೆಯರ ವಿಶ್ವಕಪ್: ತ್ರಿಶಾ ದಾಖಲೆಯ ಶತಕ, ಸ್ಕಾಟ್ಲೆಂಡ್ ವಿರುದ್ಧ ಭಾರತಕ್ಕೆ 150 ರನ್‌ಗಳ ಭರ್ಜರಿ ಜಯ
- ಅಂಡರ್ 19 ವನಿತೆಯರ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಸ್ಕಾಟ್ಲೆಂಡ್ ವಿರುದ್ಧದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ತಂಡವು 150 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ತ್ರಿಶಾ ಇತಿಹಾಸ ನಿರ್ಮಿಸಿದ್ದಾರೆ.
- ಅಂಡರ್ 19 ವನಿತೆಯರ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಸ್ಕಾಟ್ಲೆಂಡ್ ವಿರುದ್ಧದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ತಂಡವು 150 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ತ್ರಿಶಾ ಇತಿಹಾಸ ನಿರ್ಮಿಸಿದ್ದಾರೆ.
(1 / 9)
ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಚೊಚ್ಚಲ ಶತಕ ಬಾರಿಸಿದ ಭಾರತದ ಆರಂಭಿಕ ಆಟಗಾರ್ತಿ ತ್ರಿಶಾ ಗೊಂಗಾಡಿ, ಇತಿಹಾಸ ನಿರ್ಮಿಸಿದ್ದಾರೆ. ಈ ಟೂರ್ನಿ ಇತಿಹಾಸದಲ್ಲೇ ಇದು ಮೊದಲ ಸೆಂಚುರಿ. 59 ಎಸೆತಗಳಲ್ಲಿ ಬರೋಬ್ಬರಿ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ತ್ರಿಶಾ ಅಜೇಯ 110 ರನ್ ಬಾರಿಸಿದ್ದಾರೆ.
(2 / 9)
ಇದೇ ವೇಳೆ ಆರಂಭಿಕ ಆಟಗಾರ್ತಿ ಕಮಲಿನಿ ಜಿ 42 ಎಸೆತಗಳಲ್ಲಿ 51 ರನ್ ಗಳಿಸಿದರು. ಸಾನಿಕಾ ಚಾಲ್ಕೆ 20 ಎಸೆತಗಳಲ್ಲಿ 29 ರನ್ ಗಳಿಸಿ ಅಜೇಯರಾಗಿ ಉಳಿದರು.
(3 / 9)
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಸ್ಕಾಟ್ಲೆಂಡ್ 14 ಓವರ್‌ಗಳಲ್ಲಿ 58 ರನ್‌ಗಳಿಗೆ ಆಲೌಟ್ ಆಯಿತು.
(4 / 9)
ಸ್ಕಾಟ್ಲೆಂಡ್ ಪರ ಆರಂಭಿಕ ಆಟಗಾರ್ತಿಯರಾದ ಪಿಪ್ಪಾ ಕೆಲ್ಲಿ 12 ರನ್ ಗಳಿಸಿದರೆ, ಎಮ್ಮಾ ವಾಲ್ಸಿಂಗಂ ಕೂಡಾ 12 ರನ್ ಗಳಿಸುವ ಮೂಕ ಜಂಟಿಯಾಗಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
(5 / 9)
ಬೌಲಿಂಗ್‌ನಲ್ಲಿಯೂ ಭಾರತೀಯ ವನಿತೆಯರು ಅಬ್ಬರಿಸಿದರು. ಎಡಗೈ ಸ್ಪಿನ್ನರ್ ಆಯುಷಿ ಶುಕ್ಲಾ 8 ರನ್ ಗಳಿಸಿ 4 ವಿಕೆಟ್ ಪಡೆದರೆ, ಎಡಗೈ ವೇಗಿ ವೈಷ್ಣವಿ ಶರ್ಮಾ 5 ರನ್ ಕೊಟ್ಟು 3 ವಿಕೆಟ್ ಪಡೆದರು.
(6 / 9)
ಇದೇ ವೇಳೆ ಬೌಲಿಂಗ್‌ನಲ್ಲೂ ಮ್ಯಾಜಿಕ್ ಮಾಡಿದ ತ್ರಿಶಾ 6 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ವಿಶೇಷ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
(7 / 9)
ಭಾರತ ತಂಡವು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಗ್ರೂಪ್ 1ರಿಂದ ಆಸ್ಟೇಲಿಯಾ ಕೂಡಾ ಅಗ್ರ ನಾಲ್ಕರ ಸುತ್ತಿಗೆ ಲಗ್ಗೆ ಹಾಕಿದೆ. ಇದೇ ವೇಳೆ ಗ್ರೂಪ್ 2ರಿಂದ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮೀಸ್ ಪ್ರವೇಶ ಮಾಡಿವೆ.
(8 / 9)
ಜನವರಿ 31ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದೆ. ಫೆಬ್ರುವರಿ 2ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದೆ.
ಇತರ ಗ್ಯಾಲರಿಗಳು