ಐಪಿಎಲ್‌ನಲ್ಲಿ ಶನಿವಾರ ಡಬಲ್ ಧಮಾಕಾ; 2 ರೋಚಕ ಪಂದ್ಯಗಳ 10 ಪ್ರಮುಖ ಅಂಶಗಳು
- ಐಪಿಎಲ್‌ನಲ್ಲಿ ಏಪ್ರಿಲ್ 19ರಂದು 2 ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎದುರಾಗಲಿವೆ.
- ಐಪಿಎಲ್‌ನಲ್ಲಿ ಏಪ್ರಿಲ್ 19ರಂದು 2 ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎದುರಾಗಲಿವೆ.
(1 / 11)
ಗುಜರಾತ್ ಹಾಗೂ ಡೆಲ್ಲಿ ತಂಡಗಳು ಟೂರ್ನಿಯಲ್ಲಿ ಉತ್ತಮ ಪ್ರದರ್ಶಣ ನೀಡುತ್ತಿವೆ. ಅತ್ತ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ರಾಜಸ್ಥಾನ ತಂಡಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿವೆ. ಶನಿವಾರದ ಎರಡು ಪಂದ್ಯಗಳಿಗೆ ಸಂಬಂಧಿಸಿದ ಪ್ರಮುಖ 10 ಅಂಶಗಳನ್ನು ನೋಡೋಣ
(Surjeet Yadav)(2 / 11)
ಶುಭ್ಮನ್ ಗಿಲ್, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಗುಜರಾತ್ ತಂಡದ ಬ್ಯಾಟಿಂಗ್ ಶಕ್ತಿ. ಈ ಮೂವರು ಮಧ್ಯಮ ಕ್ರಮಾಂಕಕ್ಕೆ ಹೆಚ್ಚು ಜವಾಬ್ದಾರಿ ನೀಡಿಲ್ಲ. ತಂಡದ ಬೌಲಿಂಗ್ ಕೂಡಾ ಬಲಿಷ್ಠವಾಗಿದೆ. ಪವರ್‌ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಮಧ್ಯಮ ಓವರ್‌ಗಳಲ್ಲಿ ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್ ವಿಕೆಟ್ ಟೇಕಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
(AP)(3 / 11)
ಅಹಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಡೆಲ್ಲಿ ತಂಡ 2-0 ದಾಖಲೆ ಹೊಂದಿದೆ. ಹೀಗಾಗಿ ತವರಿನಲ್ಲಿ ಡಿಸಿ ವಿರುದ್ಧ ಮೊದಲ ಗೆಲುವಿಗೆ ಟೈಟನ್ಸ್ ಎದುರು ನೋಡುತ್ತಿದೆ. ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ಉಭಯ ತಂಡಗಳು 5 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಡೆಲ್ಲಿ 3ರಲ್ಲಿ ಗೆದ್ದು ಮುನ್ನಡೆ ಸಾಧಿಸಿದೆ.
(AFP)(4 / 11)
ಗುಜರಾತ್ ತಂಡದಲ್ಲಿ ಗಾಯಗೊಂಡ ಗ್ಲೆನ್ ಫಿಲಿಪ್ಸ್ ಬದಲಿಗೆ ದಸುನ್ ಶನಕ ಸ್ಥಾನ ಪಡೆದಿದ್ದಾರೆ. ಆದರೆ ಅವರು ಈ ಪಂದ್ಯಕ್ಕೆ ಲಭ್ಯವಾಗುವ ಸಾಅಧಯತೆ ಇಲ್ಲ. ಅತ್ತ ಕಗಿಸೊ ರಬಾಡ ಕಮ್‌ಬ್ಯಾಕ್ ಕುರಿತು ಯಾವುದೇ ಮಾಹಿತಿ ಬಂದಿಲ್ಲ.
(Surjeet Yadav)(5 / 11)
ಫಾಫ್ ಡು ಪ್ಲೆಸಿಸ್ ಫಿಟ್ ಆದರೆ, ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬದಲಿಗೆ ಡೆಲ್ಲಿ ತಂಡದಲ್ಲಿ ಸ್ಥಾನ ಪಡೆಯಬಹುದು. ಕಳೆದ ಆವೃತ್ತಿಯಲ್ಲಿ ಅಬ್ಬರಿಸಿದ್ದ ಜೇಕ್ ಫ್ರೇಸರ್, ಈ ಬಾರಿ ಆಡಿದ 6 ಇನ್ನಿಂಗ್ಸ್‌ಗಳಲ್ಲಿ 105.76ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 55 ರನ್ ಮಾತ್ರ ಗಳಿಸಿದ್ದಾರೆ.
(Surjeet Yadav)(6 / 11)
ಕೊನೆಯ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತಿದ್ದ ರಾಜಸ್ಥಾನ್ ರಾಯಲ್ಸ್, ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿಲ್ಲ. ಅತ್ತ ಲಕ್ನೋ ಕೂಡಾ ಕೆಲವು ಪಂದ್ಯಗಳಲ್ಲಿ ಅಬ್ಬರಿಸಿದರೆ, ಇನ್ನೂ ಕೆಲವು ಪಂದ್ಯಗಳಲ್ಲಿ ಸೋತಿದೆ.
(AFP)(7 / 11)
ರಾಜಸ್ಥಾನ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಳಪೆ ದಾಖಲೆ ಹೊಂದಿದೆ. ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಎಲ್‌ಎಸ್‌ಜಿ ಗೆದ್ದಿದೆ.
(AFP)(8 / 11)
ಪಂದ್ಯದ ದಿನ ಮಧ್ಯಾಹ್ನ ಅಹಮದಾಬಾದ್‌ನಲ್ಲಿ ತಾಪಮಾನವು 41 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಆರ್ದ್ರತೆ ಪ್ರಮಾಣ ಕೇವಲ 16 ಶೇಕಡದಷ್ಟಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.
(PTI)(9 / 11)
ರನ್ ಗಳಿಸಲು ಹೆಸರಾಗಿರುವ ಸ್ಟೇಡಿಯಂನಲ್ಲಿ, ತಂಡಗಳು ಹೆಚ್ಚು ರನ್ ಗಳಿಸಲು ಎದುರು ನೋಡುತ್ತವೆ. ಟಿ20 ಸ್ವರೂಪದಲ್ಲಿ ಇಲ್ಲಿ ಟಾಸ್ ಗೆಲ್ಲುವ ತಂಡಗಳು ಮೊದಲು ಬೌಲಿಂಗ್ ಮಾಡಲು ಆದ್ಯತೆ ನೀಡುತ್ತವೆ. ಇಲ್ಲಿ ಚೇಸಿಂಗ್ ಸುಲಭ ಎಂಬುದು ಅಂಕಿ-ಅಂಶಗಳು ಹೇಳುತ್ತವೆ. ಆದರೆ, ಈ ಬಾರಿ ಇಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿವೆ. ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 219 ತಲುಪಿದೆ.
(PTI)(10 / 11)
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಬ್ಯಾಟರ್ ಹೆಚ್ಚು ರನ್ ಗಳಿಸಲು ಮುಂದಾಗುತ್ತಾರೆ. ಆರ್‌ಸಿಬಿ ವಿರುದ್ಧದ ಕೊನೆಯ ಪಂದ್ಯದಲ್ಲಿ, ಆರಂಭದಲ್ಲಿ ಪಿಚ್ ಸ್ವಲ್ಪ ನಿಧಾನಗತಿಯಲ್ಲಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ರನ್ ಕಲೆ ಹಾಕಲು ಪರದಾಡಿತ್ತು. ಆದರೆ, ಚೇಸಿಂಗ್ ವೇಳೆ ಆರ್‌ಸಿಬಿ ಸರಾಗವಾಗಿ ಬ್ಯಾಟ್ ಬೀಸಿತು. ಹೀಗಾಗಿ ಟಾಸ್ ಗೆಲ್ಲುವ ತಂಡವು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಬಹುದು.
(PTI)ಇತರ ಗ್ಯಾಲರಿಗಳು