ರಾಹುಲ್ ದ್ರಾವಿಡ್ ಹುಟ್ಟುಹಬ್ಬ: ಐಸಿಸಿ ಟ್ರೋಫಿ ಬರ ನೀಗಿಸಿದ ಟೀಮ್ ಇಂಡಿಯಾ ಯಶಸ್ವಿ ಕೋಚ್ ದಾಖಲೆಗಳ ಚಿತ್ರಣ
- 1996ರಿಂದ 2011ರವರೆಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ 'ದಿ ವಾಲ್' ಆಗಿ ಮಿಂಚಿದ ರಾಹುಲ್ ದ್ರಾವಿಡ್, 2021ರಿಂದ 2024ರವರೆಗೆ ಟೀಮ್ ಇಂಡಿಯಾ ಕೋಚ್ ಆಗಿ ಸೇವೆ ಸಲ್ಲಿಸಿದರು. ಇವರ ಕೋಚಿಂಗ್‌ನಲ್ಲಿ ಭಾರತ ಪುರುಷರ ತಂಡ ಟಿ20 ವಿಶ್ವಕಪ್ ಗೆದ್ದು ಬೀಗಿತು. ಇಂದು ಕನ್ನಡಿಗ ದ್ರಾವಿಡ್ ಅವರ 52ನೇ ಹುಟ್ಟುಹಬ್ಬ. ತರಬೇತುದಾರರಾಗಿ ಅವರ ಸಾಧನೆಗಳ ನೋಟ ಇಲ್ಲಿದೆ
- 1996ರಿಂದ 2011ರವರೆಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ 'ದಿ ವಾಲ್' ಆಗಿ ಮಿಂಚಿದ ರಾಹುಲ್ ದ್ರಾವಿಡ್, 2021ರಿಂದ 2024ರವರೆಗೆ ಟೀಮ್ ಇಂಡಿಯಾ ಕೋಚ್ ಆಗಿ ಸೇವೆ ಸಲ್ಲಿಸಿದರು. ಇವರ ಕೋಚಿಂಗ್‌ನಲ್ಲಿ ಭಾರತ ಪುರುಷರ ತಂಡ ಟಿ20 ವಿಶ್ವಕಪ್ ಗೆದ್ದು ಬೀಗಿತು. ಇಂದು ಕನ್ನಡಿಗ ದ್ರಾವಿಡ್ ಅವರ 52ನೇ ಹುಟ್ಟುಹಬ್ಬ. ತರಬೇತುದಾರರಾಗಿ ಅವರ ಸಾಧನೆಗಳ ನೋಟ ಇಲ್ಲಿದೆ
(1 / 9)
ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ಕಂಡ ಮಹಾಗೋಡೆ. ಟೆಸ್ಟ್‌ನಲ್ಲಿ ಅವರ ಸುದೀರ್ಘ ಇನ್ನಿಂಗ್ಸ್‌ಗಳು ವಿಶೇಷ. ಭಾರತೀಯ ಕ್ರಿಕೆಟ್‌ನಲ್ಲಿ ಕೆಲವೊಂದು ಸೋಲುಗಳಿಂದಾಗಿ ಹಲವು ಬಾರಿ ಸಾಕಷ್ಟು ಟೀಕೆಗಳನ್ನು ಕೂಡಾ ಎದುರಿಸಿದ್ದಾರೆ. ಆಟಗಾರನಾಗಿ ಮಾತ್ರವಲ್ಲದೆ ಭಾರತೀಯ ತಂಡದ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಐತಿಹಾಸಿಕ ವಿಜಯದ ಭಾಗವಾಗಿದ್ದಾರೆ
(2 / 9)
2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ರಾಹುಲ್ ದ್ರಾವಿಡ್, 2016ರಿಂದ 2019ರವರೆಗೆ ಭಾರತ ಅಂಡರ್-19 ತಂಡದ ಕೋಚ್ ಆಗಿದ್ದರು.
(3 / 9)
ಇವರ ತರಬೇತಿಯಡಿ 2016ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ರನ್ನರ್ ಅಪ್ ಆದರೆ, 2018ರಲ್ಲಿ ಅಂಡರ್-19 ಟ್ರೋಫಿ ಗೆದ್ದಿತು.
(4 / 9)
ದ್ರಾವಿಡ್ ಅವರನ್ನು 2019ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಆ ಬಳಿಕ 2021ರಲ್ಲಿ ಭಾರತೀಯ ತಂಡಕ್ಕೆ ತರಬೇತಿ ನೀಡಲು ಪ್ರಾರಂಭಿಸಿದರು.
(5 / 9)
ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ 56 ಏಕದಿನ ಪಂದ್ಯಗಳಲ್ಲಿ 41 ಮತ್ತು 68 ಟಿ20 ಪಂದ್ಯಗಳಲ್ಲಿ 48 ಪಂದ್ಯಗಳನ್ನು ಗೆದ್ದಿದೆ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದೆ.
(6 / 9)
ಭಾರತದ ಐಸಿಸಿ ಟ್ರೋಫಿ ಬರ ನೀಗಿಸಿ ಮತ್ತೆ ವಿಶ್ವಕಪ್ ಗೆಲ್ಲುವ ಕನಸನ್ನು ಈಡೇರಿಸಿದವರು ರಾಹುಲ್ ದ್ರಾವಿಡ್. ಕಳೆದ ವರ್ಷ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತವು ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತು. 11 ವರ್ಷಗಳ ಐಸಿಸಿ ಕಪ್ ಬರವನ್ನು ಕೊನೆಗೊಳಿಸಿತು.
(7 / 9)
2023ರಲ್ಲಿ ಏಕದಿನ ವಿಶ್ವಕಪ್ ಫೈನಲ್ ಹಾಗೂ ಅದೇ ವರ್ಷದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡವನ್ನು ಮುನ್ನಡೆಸುವಲ್ಲಿ ದ್ರಾವಿಡ್ ಪ್ರಮುಖ ಪಾತ್ರ ವಹಿಸಿದ್ದರು. ವೈಟ್-ಬಾಲ್ ಮತ್ತು ಟೆಸ್ಟ್ ಕ್ರಿಕೆಟ್ ಹೀಗೆ ಆಟದ ಎಲ್ಲಾ ಸ್ವರೂಪಗಳಲ್ಲಿ ಭಾರತ ತಂಡವನ್ನು ನಂ.1 ಸ್ಥಾನಕ್ಕೆ ಮುನ್ನಡೆಸಿದರು.
(8 / 9)
ದ್ರಾವಿಡ್ ನಾಯಕತ್ವದಲ್ಲಿ ಭಾರತ 147 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 103 ಪಂದ್ಯಗಳನ್ನು ಗೆದ್ದಿದೆ. ಇದರಲ್ಲಿ ಎರಡು ಟಿ20 ಪಂದ್ಯಗಳು ಟೈ ಆಗಿದ್ದು, ಅದನ್ನು ಭಾರತ ಸೂಪರ್ ಓವರ್‌ನಲ್ಲಿ ಗೆದ್ದಿತ್ತು. ರಾಹುಲ್ ದ್ರಾವಿಡ್ ಭಾರತ ತಂಡ ಕಂಡ ಅತ್ಯುತ್ತಮ ಕೋಚ್‌ಗಳಲ್ಲಿ ಒಬ್ಬರು. ಇವರ ಒಟ್ಟಾರೆ ಯಶಸ್ಸಿನ ಪ್ರಮಾಣ 68.70.
ಇತರ ಗ್ಯಾಲರಿಗಳು