Hardik Pandya: ಇಂಗ್ಲೆಂಡ್ ವಿರುದ್ಧ 2 ವಿಕೆಟ್ ಕಿತ್ತು ಭುವನೇಶ್ವರ್, ಬುಮ್ರಾ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hardik Pandya: ಇಂಗ್ಲೆಂಡ್ ವಿರುದ್ಧ 2 ವಿಕೆಟ್ ಕಿತ್ತು ಭುವನೇಶ್ವರ್, ಬುಮ್ರಾ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ

Hardik Pandya: ಇಂಗ್ಲೆಂಡ್ ವಿರುದ್ಧ 2 ವಿಕೆಟ್ ಕಿತ್ತು ಭುವನೇಶ್ವರ್, ಬುಮ್ರಾ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ

  • .Hardik Pandya Record: ಇಂಗ್ಲೆಂಡ್ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ 2 ವಿಕೆಟ್ ಉರುಳಿಸಿದ ವೇಗಿ ಭುವನೇಶ್ವರ್ ಕುಮಾರ್​,  ಜಸ್ಪ್ರೀತ್ ಬುಮ್ರಾ ಅವರ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಮುರಿದಿದ್ದಾರೆ.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಎರಡು ವಿಕೆಟ್ ಉರುಳಿಸಿದ ಭಾರತದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ದಾಖಲೆ ನಿರ್ಮಿಸಿದ್ದಾರೆ.
icon

(1 / 9)

ಜೇಕಬ್ ಬೆಥಲ್ ಮತ್ತು ಜೋಫ್ರಾ ಆರ್ಚರ್ ಅವರನ್ನು ಔಟ್ ಮಾಡಿದ ಬೆನ್ನಲ್ಲೇ ಭಾರತದ ವೇಗದ ಬೌಲರ್​​ಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಹಾರ್ದಿಕ್ ಹಿಂದಿಕ್ಕಿದ್ದಾರೆ.
icon

(2 / 9)

ಪ್ರಮುಖರನ್ನೇ ಹಿಂದಿಕ್ಕಿ ಎಲೈಟ್ ಪಟ್ಟಿಗೆ ಸೇರಿರುವ ಹಾರ್ದಿಕ್, ಟಿ20ಐ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಉರುಳಿಸಿದ 3ನೇ ಬೌಲರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
icon

(3 / 9)

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ 4 ಓವರ್​ಗಳಲ್ಲಿ 42 ರನ್ ನೀಡಿ 2 ವಿಕೆಟ್ ಪಡೆದರು. ಇದರೊಂದಿಗೆ ಟಿ20ಐನಲ್ಲಿ ಅವರ ಒಟ್ಟು ವಿಕೆಟ್​ಗಳ ಸಂಖ್ಯೆ 91ಕ್ಕೆ ಏರಿದೆ.
icon

(4 / 9)

110 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 98 ಇನ್ನಿಂಗ್ಸ್​​ಗಳಲ್ಲಿ ಕಣಕ್ಕಿಳಿದ 91 ವಿಕೆಟ್​ ಪಡೆದಿದ್ದಾರೆ. ಬುಮ್ರಾ 70 ಟಿ20ಐ ಪಂದ್ಯಗಳ 69 ಇನ್ನಿಂಗ್ಸ್​​ಗಳಲ್ಲಿ 89 ವಿಕೆಟ್, ಭುವನೇಶ್ವರ್ 87 ಟಿ20ಐ ಪಂದ್ಯಗಳ 86 ಇನ್ನಿಂಗ್ಸ್​​ಗಳಲ್ಲಿ 90 ವಿಕೆಟ್ ಪಡೆದಿದ್ದಾರೆ.
icon

(5 / 9)

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಅರ್ಷದೀಪ್​ ಸಿಂಗ್ ಹೆಸರಿನಲ್ಲಿದೆ. ಪಂದ್ಯದಲ್ಲಿ ಅರ್ಷದೀಪ್ ಅವರು 2 ವಿಕೆಟ್ ಉರುಳಿಸಿ ಯುಜ್ವೇಂದ್ರ ಚಹಲ್ ಅವರಿಂದ ಸಾರ್ವಕಾಲಿಕ ದಾಖಲೆಯನ್ನು ಕಸಿದುಕೊಂಡರು.
icon

(6 / 9)

(Surjeet Yadav)

ಅರ್ಷದೀಪ್ 61 ಪಂದ್ಯಗಳ 61 ಇನ್ನಿಂಗ್ಸ್​​ಗಳಲ್ಲಿ 97 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಚಹಲ್ 2ನೇ ಸ್ಥಾನದಲ್ಲಿದ್ದಾರೆ. 80 ಪಂದ್ಯಗಳ 79 ಇನ್ನಿಂಗ್ಸ್​​ಗಳಲ್ಲಿ 96 ವಿಕೆಟ್ ಪಡೆದಿದ್ದಾರೆ. 
icon

(7 / 9)

(PTI)

ಇದೀಗ ಈ ಎಲೈಟ್ ಪಟ್ಟಿಯಲ್ಲಿ ಚಹಲ್ ಅವರನ್ನು ಹಿಂದಿಕ್ಕಲು ಹಾರ್ದಿಕ್​ಗೆ ಇನ್ನೂ 6 ವಿಕೆಟ್​ಗಳ ಅಗತ್ಯ ಇದೆ. ಪ್ರಸ್ತುತ ಸರಣಿಯಲ್ಲಿ ಹಾರ್ದಿಕ್ 5 ವಿಕೆಟ್ ಪಡೆದರೆ ಯುಜಿ ದಾಖಲೆ ಮುರಿಯಲಿದ್ದಾರೆ.
icon

(8 / 9)

ಕ್ರಿಕೆಟ್​ ಸುದ್ದಿಗಳ ಅಪ್ಡೇಟ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(9 / 9)

ಇತರ ಗ್ಯಾಲರಿಗಳು