ಟೆಸ್ಟ್ ಶ್ರೇಯಾಂಕ: ಜೋ ರೂಟ್ ನಂಬರ್ 1 ಸ್ಥಾನ ಕಸಿದುಕೊಂಡ ಮತ್ತೋರ್ವ ಆಂಗ್ಲ ಆಟಗಾರ; ವಿರಾಟ್-ರೋಹಿತ್ ಶ್ರೇಯಾಂಕ ಕುಸಿತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೆಸ್ಟ್ ಶ್ರೇಯಾಂಕ: ಜೋ ರೂಟ್ ನಂಬರ್ 1 ಸ್ಥಾನ ಕಸಿದುಕೊಂಡ ಮತ್ತೋರ್ವ ಆಂಗ್ಲ ಆಟಗಾರ; ವಿರಾಟ್-ರೋಹಿತ್ ಶ್ರೇಯಾಂಕ ಕುಸಿತ

ಟೆಸ್ಟ್ ಶ್ರೇಯಾಂಕ: ಜೋ ರೂಟ್ ನಂಬರ್ 1 ಸ್ಥಾನ ಕಸಿದುಕೊಂಡ ಮತ್ತೋರ್ವ ಆಂಗ್ಲ ಆಟಗಾರ; ವಿರಾಟ್-ರೋಹಿತ್ ಶ್ರೇಯಾಂಕ ಕುಸಿತ

  • ಐಸಿಸಿ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಅಗ್ರ ಶ್ರೇಯಾಂಕಿತ ಆಲ್ರೌಂಡರ್ ಆಗಿ ಮುಂದುವರೆದಿದ್ದಾರೆ. ಬ್ಯಾಟರ್‌ಗಳ ಪೈಕಿ ಆಸೀಸ್‌ನ ಯುವ ಆಟಗಾರನಿಗೆ ಕಿರೀಟಧಾರಣೆಯಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದ ನಂತರ ಹ್ಯಾರಿ ಬ್ರೂಕ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದರು. ಆ ಬಳಿಕ ಕಿವೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮತ್ತೊಂದು ಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕದೊಂದಿಗೆ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಹ್ಯಾರಿ ಬ್ರೂಕ್ ನಂ.1 ಬ್ಯಾಟರ್ ಆಗಿದ್ದಾರೆ. ಅವರು‌ ತಮ್ಮದೇ ದೇಶದ ಅನುಭವಿ ಆಟಗಾರ ಜೋ ರೂಟ್ ಅವರಿಂದ ಅಗ್ರಸ್ಥಾನವನ್ನು ಕಸಿದುಕೊಂಡಿದ್ದಾರೆ. ವಿಶೇಷವೆಂದರೆ, ಹ್ಯಾರಿ ಬ್ರೂಕ್ 2022ರ ಸೆಪ್ಟೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
icon

(1 / 5)

(AP)

ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಜೋ ರೂಟ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್‌ ತಂಡದ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಯಶಸ್ವಿ ಜೈಸ್ವಾಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಕಳೆದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ಆರು ಸ್ಥಾನ ಮೇಲಕ್ಕೇರಿ ಐದನೇ ಸ್ಥಾನದಲ್ಲಿದ್ದಾರೆ. ಟೆಂಬಾ ಬವುಮಾ ಮೂರು ಸ್ಥಾನ ಮೇಲಕ್ಕೇರಿ ಏಳನೇ ಸ್ಥಾನಕ್ಕೇರಿದ್ದಾರೆ. ರಿಷಭ್ ಪಂತ್ ಮೂರು ಸ್ಥಾನ ಕುಸಿದು 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಶುಬ್ಮನ್ ಗಿಲ್ ಒಂದು ಸ್ಥಾನ ಮೇಲೇರಿ 17ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 6 ಸ್ಥಾನ ಕುಸಿದು 20ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಶರ್ಮಾ 5 ಸ್ಥಾನ ಕುಸಿದು 31ನೇ ಸ್ಥಾನದಲ್ಲಿದ್ದಾರೆ.
icon

(2 / 5)

ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ ಒಂದು ಸ್ಥಾನ ಕುಸಿದು 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಗಿಸೊ ರಬಾಡ ಎರಡನೇ ಸ್ಥಾನದಲ್ಲಿದ್ದಾರೆ. ಜೋಶ್ ಹೇಜಲ್‌ವುಡ್ ಮೂರನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಆರನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ ಒಂದು ಸ್ಥಾನ ಮೇಲೇರಿ 25ನೇ ಸ್ಥಾನದಲ್ಲಿದ್ದಾರೆ.
icon

(3 / 5)

(AFP)

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರೂ, ರವೀಂದ್ರ ಜಡೇಜಾ ವಿಶ್ವದ ನಂಬರ್ ಒನ್ ಟೆಸ್ಟ್ ಆಲ್ರೌಂಡರ್ ಕಿರೀಟವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಆದರೆ ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದರು. ಬಾಂಗ್ಲಾದೇಶದ ಮೆಹಿದಿ ಹಸನ್ ಮಿರಾಜ್ ಎರಡನೇ ಸ್ಥಾನಕ್ಕೇರಿದ್ದಾರೆ.
icon

(4 / 5)

(BCCI)

ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ ಒಂದು ಸ್ಥಾನ ಕುಸಿದು 50ನೇ ಸ್ಥಾನಕ್ಕೆ ಕುಸಿದಿದ್ದಾರೆ. ರವೀಂದ್ರ ಜಡೇಜಾ 51ನೇ ಸ್ಥಾನದಲ್ಲಿದ್ದಾರೆ. ನಿತೀಶ್ ರೆಡ್ಡಿ ಆರು ಸ್ಥಾನ ಮೇಲಕ್ಕೇರಿ 69ನೇ ಸ್ಥಾನದಲ್ಲಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು