ತಂಡವೊಂದರ 10ಕ್ಕೆ ಹತ್ತೂ ಬ್ಯಾಟರ್ಸ್ ರಿಟೈರ್ಡ್ ಹರ್ಟ್; ಇದೆಂಥಾ ವಿಚಿತ್ರ, ಆದ್ರೂ ಗೆದ್ದವ್ರೆ!
ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತೆ ತಂಡವೊಂದರ ಹತ್ತಕ್ಕೆ ಹತ್ತೂ ಬ್ಯಾಟರ್ಸ್ ರಿಟೈರ್ಡ್ ಔಟ್ ಆಗುವ ಘಟನೆ ನಡೆದಿದೆ. ಯುಎಇ ಮತ್ತು ಕತಾರ್ ಮಹಿಳಾ ತಂಡಗಳ ನಡುವಿನ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ.
(1 / 10)
ಕ್ರಿಕೆಟ್ ಇತಿಹಾಸದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಈ ಹಿಂದೆ ನಡೆದಿರಲಿಲ್ಲ, ಮುಂದೆದೂ ನಡೆಯುವುದೂ ಅಸಾಧ್ಯ. ವಿಚಿತ್ರ ಗೆಲುವು ಸಾಧಿಸಿ ವಿಶ್ವಕಪ್ಗೂ ಅರ್ಹತೆ ಪಡೆದುಕೊಂಡಿದೆ. ಅದರಲ್ಲೂ ಆ ತಂಡದ ತಂತ್ರ, ಬುದ್ಧಿವಂತಿಕೆ, ಧೈರ್ಯಕ್ಕೆ ಸಲಾಂ ಹೇಳಲೇಬೇಕು.
(2 / 10)
ಮೈದಾನಕ್ಕಿಳಿದ ಹತ್ತಕ್ಕೆ ಬ್ಯಾಟರ್ಸ್ ರಿಟೈರ್ಡ್ ಔಟ್ ಆದ ಘಟನೆ ಕ್ರಿಕೆಟ್ ಚರಿತ್ರೆಯಲ್ಲಿ ನಡೆದಿದ್ದು ಇದೇ ಮೊದಲು. ಆರಂಭಿಕರು ಇಬ್ಬರು ರನ್ ಗಳಿಸಿದ್ದು ಬಿಟ್ಟರೆ ಉಳಿದಂತೆ ಯಾರೂ ರನ್ ಗಳಿಸಿಲ್ಲ. ಎಲ್ಲರೂ ಶೂನ್ಯಕ್ಕೆ ರಿಟೈರ್ಡ್ ಹರ್ಟ್ ಆಗಿರುವುದು ವಿಶೇಷ.
(3 / 10)
ಬ್ಯಾಂಕಾಕ್‌ನ ಟೆರ್ಡ್‌ಥೈ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಪ್ರದೇಶ ಅರ್ಹತಾ ಪಂದ್ಯದಲ್ಲಿ ಕತಾರ್ ಮತ್ತು ಯುಎಇ ನಡುವಿನ ಪಂದ್ಯದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಯುಎಇ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯ ನಡೆದಿದ್ದು ಮೇ 10ರಂದು.
(4 / 10)
ಮೊದಲು ಬ್ಯಾಟಿಂಗ್ ನಡೆಸಿದ ಯುಎಇ ಮಹಿಳಾ ತಂಡ 16 ಓವರ್‌ಗಳಲ್ಲಿ ವಿಕೆಟ್ ನಷ್ಟ ಇಲ್ಲದೆ 192 ರನ್ ಪೇರಿಸಿತು. ಈ ಸ್ಕೋರ್ ಬಂದಿದ್ದು ಕೂಡ ಆರಂಭಿಕ ಇಬ್ಬರಿಂದ ಮಾತ್ರ. ನಾಯಕಿ ಈಶಾ ಓಜಾ 113 ರನ್ ಗಳಿಸಿದರೆ, ತೀರ್ಥಾ ಸತೀಶ್ 74 ರನ್ ಗಳಿಸಿದರು. ಆದರೆ ಈ ಗುರಿ ಬೆನ್ನಟ್ಟಿದ ಕತಾರ್ ಕೇವಲ 29ಕ್ಕೆ ಅಲೌಟ್ ಆಯಿತು. ಪರಿಣಾಮ 163 ರನ್‌ಗಳ ಗೆಲುವು ಸಾಧಿಸಿತು.
(5 / 10)
ಪಂದ್ಯಕ್ಕೆ ಮಳೆ ಬರುವ ಸಾಧ್ಯತೆ ಹೆಚ್ಚಿತ್ತು. ಇತ್ತ ವಿಶ್ವಕಪ್ಗೆ ಅರ್ಹತೆ ಪಡೆಯಲು ಗೆಲುವು ಅನಿವಾರ್ಯವಾಗಿತ್ತು. ಅದಾಗಲೇ 192 ರನ್ ಗಳಿಸಿದ್ದ ಕಾರಣ ಯುಎಇ ಪ್ರಮುಖ ನಿರ್ಧಾರ ಕೈಗೊಂಡಿತು. ಹಾಗಾಗಿ ಟೀಮ್ ಮ್ಯಾನೇಜ್ಮೆಂಟ್ ಎಲ್ಲಾ ಬ್ಯಾಟರ್ಗಳನ್ನು ರಿಟೈರ್ಡ್ ಹರ್ಟ್ ಗೊಳಿಸಿತು.
(6 / 10)
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಡಿಕ್ಲರೇಶನ್‌ಗೆ ಅವಕಾಶವಿಲ್ಲದ ಕಾರಣ ಬ್ಯಾಟ್ಸ್‌ಮನ್‌ಗಳು ಒಬ್ಬೊಬ್ಬರಾಗಿ ಮೈದಾನಕ್ಕೆ ಬಂದು ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ಗೆ ಓಡಿದರು. ಇದು ಕ್ರೀಡೆಯ ಇತಿಹಾಸದಲ್ಲಿ ನಡೆದ ಮೊದಲ ಘಟನೆ ಇದು.
(7 / 10)
ಆರಂಭಿಕರಾದ ಇಶಾ ಓಜಾ ಮತ್ತು ತೀರ್ಥ ಸತೀಶ್ 192 ರನ್‌ಗಳ ಪ್ರಬಲ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಅನ್ನು ಮುನ್ನಡೆಸಿದರು. ಓಜಾ 55 ಎಸೆತಗಳಲ್ಲಿ 14 ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 113 ರನ್ ಗಳಿಸಿದರೆ, ಸತೀಶ್ 42 ಎಸೆತಗಳಲ್ಲಿ 74 ರನ್ ಗಳಿಸಿದರು.
(8 / 10)
ಯಾವುದೇ ವಿಕೆಟ್ ಕಳೆದುಕೊಳ್ಳದೆ ಮತ್ತು 4 ಓವರ್‌ಗಳು ಬಾಕಿ ಇರುವಾಗ ಯುಎಇ ತಂಡವು ಕ್ರೀಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿತು. ಉಳಿದ 8 ಆಟಗಾರರು ಯಾರೊಬ್ಬರೂ ಚೆಂಡನ್ನು ಎದುರಿಸಲಿಲ್ಲ. ಮೈದಾನಕ್ಕೆ ಬಂದು ರಿಟೈರ್ಡ್ ಆದರು.
(9 / 10)
ಇದಕ್ಕೆ ಪ್ರತಿಯಾಗಿ ಕತಾರ್ 11.1 ಓವರ್‌ಗಳಲ್ಲಿ 29 ರನ್‌ಗೆ ಸೋತಿತು. ಕೇವಲ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ರನ್ ಗಳಿಸುವಲ್ಲಿ ಯಶಸ್ವಿಯಾದರು. ರಿಜ್ಫಾ ಬಾನೊ ಎಮ್ಯಾನುಯೆಲ್ 29 ಎಸೆತಗಳಲ್ಲಿ 20 ರನ್ ಗಳಿಸುವ ಮೂಲಕ ಕತಾರ್‌ನ ಗರಿಷ್ಠ ಸ್ಕೋರರ್ ಆದರು.
ಇತರ ಗ್ಯಾಲರಿಗಳು