Explainer: ದಕ್ಷಿಣ ಆಫ್ರಿಕಾ ಡಬ್ಲ್ಯುಟಿಸಿ ಫೈನಲ್ ಸ್ಥಾನ ಬಹುತೇಕ ಖಚಿತ; ಭಾರತದ ಸೋಲು-ಗೆಲುವಿನ ಲೆಕ್ಕಾಚಾರವೇನು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Explainer: ದಕ್ಷಿಣ ಆಫ್ರಿಕಾ ಡಬ್ಲ್ಯುಟಿಸಿ ಫೈನಲ್ ಸ್ಥಾನ ಬಹುತೇಕ ಖಚಿತ; ಭಾರತದ ಸೋಲು-ಗೆಲುವಿನ ಲೆಕ್ಕಾಚಾರವೇನು?

Explainer: ದಕ್ಷಿಣ ಆಫ್ರಿಕಾ ಡಬ್ಲ್ಯುಟಿಸಿ ಫೈನಲ್ ಸ್ಥಾನ ಬಹುತೇಕ ಖಚಿತ; ಭಾರತದ ಸೋಲು-ಗೆಲುವಿನ ಲೆಕ್ಕಾಚಾರವೇನು?

  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಡಿದ್ದ ಮೊದಲ 5 ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಮಾತ್ರ ಗೆದ್ದಿತ್ತು. ಅಲ್ಲದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ, ಅಲ್ಲಿಂದ ಹಿಂತಿರುಗಿಯೂ ನೋಡದ ತಂಡ ಇದೀಗ ಶ್ರೀಲಂಕಾ ವಿರುದ್ಧದ ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಸದ್ಯ ದಕ್ಷಿಣ ಆಫ್ರಿಕಾ ತಂಡವು 63.33 ಶೇಕಡಾ ಅಂಕಗಳೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದೆ. ಆ ಮೂಲಕ  ಮುಂದಿನ ವರ್ಷದ ಜೂನ್‌ ತಿಂಗಳಲ್ಲಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ.
icon

(1 / 8)

ದಕ್ಷಿಣ ಆಫ್ರಿಕಾ ತಂಡವು ಮುಂದೆ ತವರಿನಲ್ಲಿ ಪಾಕಿಸ್ತಾನ ವಿರುದ್ಧ ಸರಣಿ ಆಡಲಿದೆ. ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾಕ್ಕೆ ಕೇವಲ ಒಂದು ಗೆಲುವಿನ ಅಗತ್ಯವಿದೆ.
icon

(2 / 8)

ಒಂದು ವೇಳೆ ಶಾನ್ ಮಸೂದ್ ನೇತೃತ್ವದ ಪಾಕಿಸ್ತಾನ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ತವರಿನಲ್ಲೇ ವೈಟ್‌ವಾಶ್ ಆದರೆ, ತಂಡವು ಫೈನಲ್‌ ಅವಕಾಶ ಕಳೆದುಕೊಳ್ಳಬಹುದು. ಏಕೆಂದರೆ, ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಆಡುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಾ ಮುಂದು ತಾ ಮುಂದು ಎಂದು ಅಗ್ರ ಎರಡು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಇವೆರಡರಲ್ಲಿ ಒಂದು ತಂಡವಂತೂ ಫೈನಲ್‌ ಪ್ರವೇಶಿಸುವುದು ಖಚಿತ.
icon

(3 / 8)

ಅತ್ತ, ಮುಂದಿನ ತಿಂಗಳ ಕೊನೆಯಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದರಿಸಲಿರುವ ಶ್ರೀಲಂಕಾ ತಂಡ ಕೂ, ಫೈನಲ್ ಪ್ರವೇಶಿಸಲು ಅವಕಾಶ ಹೊಂದಿದೆ ಎಂಬುದನ್ನು ಮರೆಯುವಂತಿಲ್ಲ.
icon

(4 / 8)

ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನಕ್ಕೆ ಬರುವುದರೊಂದಿಗೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಒತ್ತಡಕ್ಕೆ ಸಿಲುಕಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧಿಸಿದ ನಂತರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ, ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಸೋತು ಎರಡನೇ ಸ್ಥಾನಕ್ಕಿಳಿದಿತ್ತು. ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ.
icon

(5 / 8)

(AFP)

ಭಾರತವು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸದೆ ಡಬ್ಲ್ಯುಟಿಸಿ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಆಸ್ಟ್ರೇಲಿಯಾ ವಿರುದ್ಧ  ಉಳಿದ ಮೂರೂ ಪಂದ್ಯಗಳಲ್ಲಿ ಗೆಲ್ಲಬೇಕಾದ ಒತ್ತಡವಿದೆ.  ಒಂದರಲ್ಲಿ ಸೋತರೂ ಭಾರತದಿಂದ ಅವಕಾಶ ಕೈತಪ್ಪಬಹುದು. ಕೇವಲ ಒಂದು ಡ್ರಾಗೊಂಡರೂ ಭಾರತಕ್ಕೆ ಅವಕಾಶವಿದೆ. 
icon

(6 / 8)

ಭಾರತವು ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿ, ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಶ್ರೀಲಂಕಾ ವಿರುದ್ಧ ಸರಣಿ ವೈಟ್ವಾಶ್ ಮಾಡಿದರೆ ಫೈನಲ್‌ ಪ್ರವೇಶಿಸುವ ಅವಕಾಶ ಹೊಂದಿರುತ್ತದೆ. ಬಾರ್ಡರ್-ಗವಾಸ್ಕರ್ ಸರಣಿಯು 2-2ರಲ್ಲಿ ಡ್ರಾದಲ್ಲಿ ಕೊನೆಗೊಂಡರೆ, ಆ ನಂತರ ಶ್ರೀಲಂಕಾದ ಮೇಲೆ ಭಾರತ ಅವಲಂಬಿಸಬೇಕಾಗುತ್ತದೆ.
icon

(7 / 8)

(AP)

ಆಸ್ಟ್ರೇಲಿಯಾವನ್ನು ಲಂಕಾ 2-0 ಅಂತರದಿಂದ ಸೋಲಿಸಿದರೆ ಅಥವಾ ಸತತ ಎರಡರಲ್ಲೂ ಡ್ರಾ ಸಾಧಿಸಿದರೆ ಮಾತ್ರ 55.26% ಅಂಕಗಳೊಂದಿಗೆ ಭಾರತ ಫೈನಲ್‌ ಪ್ರವೇಶಿಸುವ ಅರ್ಹತೆ ಪಡೆಯುತ್ತದೆ.
icon

(8 / 8)

ಇತರ ಗ್ಯಾಲರಿಗಳು