ಐಪಿಎಲ್ನಲ್ಲಿ ಎಷ್ಟು ಪಂದ್ಯಗಳು ಉಳಿದಿವೆ, ಯಾವಾಗೆಲ್ಲಾ ಶ್ರೀಮಂತ ಲೀಗ್ ರದ್ದಾಗಿತ್ತು, ಬಿಸಿಸಿಐ ಮುಂದಿನ ನಡೆ ಏನು?
- ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಉದ್ವಿಗ್ನತೆಯಿಂದ 2025ರ ಐಪಿಎಲ್ ಆವೃತ್ತಿಯನ್ನು ಬಿಸಿಸಿಐ ಒಂದು ವಾರ ಅಮಾನತುಗೊಳಿಸಿದೆ. ಇದೀಗ ಎಷ್ಟು ಪಂದ್ಯಗಳು ಉಳಿದಿವೆ, ಯಾವಾಗೆಲ್ಲಾ ಶ್ರೀಮಂತ ಲೀಗ್ ರದ್ದಾಗಿತ್ತು? ಇಲ್ಲಿದೆ ಮಾಹಿತಿ.
- ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಉದ್ವಿಗ್ನತೆಯಿಂದ 2025ರ ಐಪಿಎಲ್ ಆವೃತ್ತಿಯನ್ನು ಬಿಸಿಸಿಐ ಒಂದು ವಾರ ಅಮಾನತುಗೊಳಿಸಿದೆ. ಇದೀಗ ಎಷ್ಟು ಪಂದ್ಯಗಳು ಉಳಿದಿವೆ, ಯಾವಾಗೆಲ್ಲಾ ಶ್ರೀಮಂತ ಲೀಗ್ ರದ್ದಾಗಿತ್ತು? ಇಲ್ಲಿದೆ ಮಾಹಿತಿ.
(1 / 10)
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಕಾರಣ 18ನೇ ಆವೃತ್ತಿಯ ಐಪಿಎಲ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಒಂದು ವಾರದ ತನಕ ಈ ರದ್ದು ಮುಂದುವರೆಯಲಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ.
(2 / 10)
ಮೇ 8ರಂದು ರಾತ್ರಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಭಾರತೀಯ ಸೇನೆಯ ಆದೇಶದ ಕಾರಣ ನಿರ್ಧಾರ ಕೈಗೊಳ್ಳಲಾಯಿತು. ಪಂದ್ಯವು 10.1 ಓವರ್ಗಳ ತನಕ ನಡೆದಿತ್ತು.
(x/IPL)(3 / 10)
ಜಮ್ಮು, ಕಾಶ್ಮೀರ, ರಾಜಸ್ಥಾನ ಸೇರಿದಂತೆ ಪಾಕ್ ಗಡಿ ಭಾಗದ ರಾಜ್ಯಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಉಭಯ ದೇಶಗಳ ನಡುವೆ ದಾಳಿ-ಪ್ರತಿದಾಳಿ ನಡೆಸಿತ್ತು. ಪಾಕ್ ನಡೆಸಿದ್ದ ಕ್ಷಿಪಣಿ, ಡ್ರೋನ್ಗಳು ಮತ್ತು ಯುದ್ಧವಿಮಾನಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
(x/IPL)(4 / 10)
ಇದೀಗ ರದ್ದಾದ ಪಂದ್ಯದ ಜತೆಗೆ ಫೈನಲ್ ಸೇರಿ ಒಟ್ಟು 16 ಪಂದ್ಯಗಳು ಬಾಕಿ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು 11 ಮತ್ತು 12 ಪಂದ್ಯಗಳನ್ನು ಆಡಿವೆ. ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಆರ್ಸಿಬಿ ತಲಾ 16 ಅಂಕ ಪಡೆದು ಮೊದಲ 2 ಸ್ಥಾನದಲ್ಲಿವೆ.
(PTI)(5 / 10)
ಐಪಿಎಲ್ ರದ್ದಾಗಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಅರ್ಧಕ್ಕೆ ಮೊಟುಕುಗೊಂಡ ಘಟನೆಗಳು ನಡೆದಿವೆ. 2009ರಲ್ಲಿ ಸಾರ್ವತ್ರಿಕ ಚುನಾವಣೆ ಕಾರಣ ಟೂರ್ನಿಯನ್ನು ಭಾರತದ ಹೊರಗೆ ಅಂದರೆ ಸೌತ್ ಆಫ್ರಿಕಾದಲ್ಲಿ ಲೀಗ್ ಅನ್ನು ಆಯೋಜಿಸಲಾಗಿತ್ತು.
(AFP)(6 / 10)
2014ರಲ್ಲೂ ಚುನಾವಣೆ ಕಾರಣ ಭಾಗಶಃ ಐಪಿಎಲ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಭಾರತ ಜಂಟಿಯಾಗಿ ಆಯೋಜಿಸಿತ್ತು. ಆರಂಭಿಕ 20 ಪಂದ್ಯಗಳನ್ನು ಯುಎಇ, ಅಬುಧಾಬಿ, ದುಬೈ ಮತ್ತು ಶಾರ್ಜಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಿದ್ದವು. ಬಳಿಕ ಮೇನಲ್ಲಿ ಐಪಿಎಲ್ ಅನ್ನು ಭಾರತದಲ್ಲಿ ಆಯೋಜಿಸಲಾಗಿತ್ತು.
(Surjeet Yadav)(7 / 10)
2021ರಲ್ಲಿ ಕೋವಿಡ್ ಕಾರಣ ಇತಿಹಾಸದಲ್ಲಿ ಮೊದಲ ಬಾರಿಗೆ ಐಪಿಎಲ್ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಬಳಿಕ ಅದೇ ವರ್ಷ ಸೆಪ್ಟೆಂಬರ್ನಲ್ಲಿ ಯುಎಇನಲ್ಲಿ ಐಪಿಎಲ್ ಮರು ಆರಂಭ ಆಗಿತ್ತು.
(Surjeet )(8 / 10)
ಪ್ರಸ್ತುತ ಮುಂದಿನ ವಾರ ಉಳಿದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡುವುದಾಗಿ ಐಪಿಎಲ್ ತಿಳಿಸಿದೆ. ಆದರೆ ಮೇ 25ರೊಳಗೆ ಪಂದ್ಯ ಮುಗಿಸಬೇಕಾದ ಅಗತ್ಯ ಇರುವುದರಿಂದ ಡಬಲ್ ಹೆಡ್ಡರ್ ಪಂದ್ಯಗಳಿಗೆ ಆದ್ಯತೆ ನೀಡಬಹುದು.
(PTI)(9 / 10)
ಏಕೆಂದರೆ ಜೂನ್ನಲ್ಲಿ ಆರಂಭದಲ್ಲಿ ಡಬ್ಲ್ಯುಟಿಸಿ ಫೈನಲ್, ಜೂನ್ 20 ರಿಂದ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಬ್ಯುಸಿ ಶೆಡ್ಯೂಲ್ನಲ್ಲಿ ಬೇಗನೇ ಐಪಿಎಲ್ ಮುಗಿಸಲು ಸಿದ್ಧತೆ ನಡೆಸಲಿದೆ. ಒಂದು ವೇಳೆ ಉದ್ವಿಗ್ನತೆ ಮುಂದುವರೆದರೆ ಐಪಿಎಲ್ ವರ್ಷಾಂತ್ಯಕ್ಕೆ ಮುಂದೂಡುವ ಸಾಧ್ಯತೆ ಇದೆ.
(PTI)ಇತರ ಗ್ಯಾಲರಿಗಳು