ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಯಾವ ತಂಡದ ವಿರುದ್ಧ ಎಷ್ಟು ರನ್ ಗಳಿಸಿದ್ದಾರೆ; ಈ ವಿಶಿಷ್ಟ ಸಾಧನೆ ಮಾಡಿದ ಏಕೈಕ ಆಟಗಾರ
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ನಡೆದ ಎಲ್ಲಾ 18 ಆವೃತ್ತಿಗಳಲ್ಲಿ ಆಡಿದ್ದಾರೆ. ಇದುವರೆಗೆ 8509 ರನ್ ಗಳಿಸಿದ್ದಾರೆ. ಕೊಹ್ಲಿ ಪ್ರತಿ ತಂಡಗಳ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಲ್ಲಿ ವಿರಾಟ್ ಯಾವ ತಂಡಗಳ ವಿರುದ್ಧ ಎಷ್ಟು ರನ್ ಗಳಿಸಿದ್ದಾರೆ ಎಂಬ ವಿವರ ಇಲ್ಲಿದೆ. ಐಪಿಎಲ್‌ನಲ್ಲಿ 4 ತಂಡಗಳ ವಿರುದ್ಧ 1,000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ.
(1 / 10)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಐಪಿಎಲ್ ಆರಂಭವಾದಾಗಿನಿಂದ ಆಡುತ್ತಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಚೆನ್ನೈ ವಿರುದ್ಧ ಆಡಿದ 34 ಇನ್ನಿಂಗ್ಸ್‌ಗಳಲ್ಲಿ ಅವರು 38.20ರ ಸರಾಸರಿಯಲ್ಲಿ 1146 ರನ್ ಗಳಿಸಿದ್ದಾರೆ.
(REUTERS)(2 / 10)
ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಇದೆ. ಡೆಲ್ಲಿ ಫ್ರಾಂಚೈಸಿ (ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್) ವಿರುದ್ಧ ಕೊಹ್ಲಿ 30 ಇನ್ನಿಂಗ್ಸ್‌ಗಳಲ್ಲಿ 49.13ರ ಸರಾಸರಿಯಲ್ಲಿ 1130 ರನ್ ಗಳಿಸಿದ್ದಾರೆ.
(AFP)(3 / 10)
ಪಂಜಾಬ್ ಫ್ರಾಂಚೈಸಿಯಾದ ಪಂಜಾಬ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧವೂ ವಿರಾಟ್ ಉತ್ತಮ ದಾಖಲೆ ಹೊಂದಿದ್ದಾರೆ. ಅವರು ಪಂಜಾಬ್ ಫ್ರಾಂಚೈಸಿಯ ವಿರುದ್ಧ 34 ಇನ್ನಿಂಗ್ಸ್‌ಗಳಲ್ಲಿ 36.80ರ ಸರಾಸರಿಯಲ್ಲಿ 1104 ರನ್ ಗಳಿಸಿದ್ದಾರೆ.
(PTI)(4 / 10)
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ವಿರಾಟ್ ಕೊಹ್ಲಿ 32 ಇನ್ನಿಂಗ್ಸ್‌ಗಳಲ್ಲಿ 40.84ರ ಸರಾಸರಿಯಲ್ಲಿ 1021 ರನ್ ಗಳಿಸಿದ್ದಾರೆ.
(AFP)(5 / 10)
ಮುಂಬೈ ಇಂಡಿಯನ್ಸ್ ಐದನೇ ಸ್ಥಾನದಲ್ಲಿದೆ. ಕೊಹ್ಲಿ ಮುಂಬೈ ವಿರುದ್ಧ 34 ಇನ್ನಿಂಗ್ಸ್‌ಳಲ್ಲಿ 922 ರನ್ ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೊಹ್ಲಿಯ ಸರಾಸರಿ 32.92 ಆಗಿದೆ.
(PTI)(6 / 10)
ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಹ್ಲಿ 896 ರನ್ ಸೇರಿಸಿದ್ದಾರೆ. ಅವರು ರಾಜಸ್ಥಾನ್ ತಂಡದ ವಿರುದ್ಧ 32 ಇನ್ನಿಂಗ್ಸ್‌ಗಳಲ್ಲಿ 35.84 ಸರಾಸರಿಯಲ್ಲಿ ಆಡಿದ್ದಾರೆ,
(AP)(7 / 10)
ಸನ್‌ರೈಸರ್ಸ್ ಹೈದರಾಬಾದ್: ಆರ್‌ಸಿಬಿ ಆಟಗಾರ ಎಸ್ಆರ್‌ಎಚ್ ವಿರುದ್ಧ 23 ಇನ್ನಿಂಗ್ಸ್‌ಗಳಲ್ಲಿ 36.28ರ ಸರಾಸರಿಯಲ್ಲಿ 762 ರನ್ ಗಳಿಸಿದ್ದಾರೆ.
(PTI)(8 / 10)
ಗುಜರಾತ್ ಟೈಟಾನ್ಸ್ (ಜಿಟಿ) ಎಂಟನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ಜಿಟಿ ವಿರುದ್ಧ ಆಡಿದ 6 ಇನ್ನಿಂಗ್ಸ್‌ಗಳಲ್ಲಿ 87.75ರ ಸರಾಸರಿಯಲ್ಲಿ 351 ರನ್ ಗಳಿಸಿದ್ದಾರೆ.
(AFP)(9 / 10)
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ವಿರಾಟ್ ಕೊಹ್ಲಿ 27.80ರ ಸರಾಸರಿಯಲ್ಲಿ 139 ರನ್ ಗಳಿಸಿದ್ದಾರೆ. ಅವರು ಎಲ್ಎಸ್‌ಜಿ ವಿರುದ್ಧ ಐದು ಇನ್ನಿಂಗ್ಸ್‌ಗಳಲ್ಲಿ ಮಾತ್ರ ಆಡಿದ್ದಾರೆ.
(PTI)ಇತರ ಗ್ಯಾಲರಿಗಳು