ODI Ranking: ಅಗ್ರಸ್ಥಾನದಲ್ಲೇ ಮುಂದುವರೆದ ಶುಭ್ಮನ್ ಗಿಲ್, ಟಾಪ್​-5ಗೆ ಎಂಟ್ರಿಕೊಟ್ಟ ವಿರಾಟ್ ಕೊಹ್ಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Odi Ranking: ಅಗ್ರಸ್ಥಾನದಲ್ಲೇ ಮುಂದುವರೆದ ಶುಭ್ಮನ್ ಗಿಲ್, ಟಾಪ್​-5ಗೆ ಎಂಟ್ರಿಕೊಟ್ಟ ವಿರಾಟ್ ಕೊಹ್ಲಿ

ODI Ranking: ಅಗ್ರಸ್ಥಾನದಲ್ಲೇ ಮುಂದುವರೆದ ಶುಭ್ಮನ್ ಗಿಲ್, ಟಾಪ್​-5ಗೆ ಎಂಟ್ರಿಕೊಟ್ಟ ವಿರಾಟ್ ಕೊಹ್ಲಿ

  • ICC ODI Ranking: ವಿರಾಟ್ ಕೊಹ್ಲಿ ಬಹಳ ಸಮಯದ ನಂತರ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ 5 ರಲ್ಲಿ ಮರಳಿದ್ದಾರೆ. ಟಾಪ್​-5ನಲ್ಲಿ ಭಾರತೀಯರೇ ಮೂವರಿರುವುದು ವಿಶೇಷ.

ಐಸಿಸಿ ಏಕದಿನ ನೂತನ ಶ್ರೇಯಾಂಕ ಪ್ರಕಟಗೊಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ 51ನೇ ಏಕದಿನ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಅವರು ಇತ್ತೀಚಿನ ಶ್ರೇಯಾಂಕದಲ್ಲಿ ಮತ್ತೊಮ್ಮೆ ಅಗ್ರ 5 ಕ್ಕೆ ಮರಳಿದ್ದಾರೆ. ಹಾಗಿದ್ದರೆ ಟಾಪ್​-5ನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ವಿವರ.
icon

(1 / 6)

(AFP)

ICC ODI Ranking: ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದ ಶುಭ್ಮನ್ ಗಿಲ್ ಅವರು ಈಗ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅಲ್ಲದೆ, 17 ಅಂಕ ಪಡೆದು 817 ರೇಟಿಂಗ್ ತಲುಪಿದ್ದಾರೆ.
icon

(2 / 6)

(REUTERS)

ICC ODI Ranking: ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ 2ನೇ ಸ್ಥಾನದಲ್ಲೇ ಇದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಅರ್ಧಶತಕ ಗಳಿಸಿ, ಭಾರತದ ವಿರುದ್ಧ ಕೇವಲ 23 ರನ್ ಗಳಿಸಿದ್ದ ಬಾಬರ್ ಈ ಹಿಂದೆ 773 ಅಂಕ ಹೊಂದಿದ್ದರು. ಇದೀಗ 770 ರೇಟಿಂಗ್​ಗೆ ಕುಸಿದಿದ್ದಾರೆ,
icon

(3 / 6)

ICC ODI Ranking: ಭಾರತದ ನಾಯಕ ರೋಹಿತ್ ಶರ್ಮಾ ಅವರು ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಕಳೆದ ವಾರ 761 ಅಂಕ ಹೊಂದಿದ್ದ ಹಿಟ್​ಮ್ಯಾನ್, 4 ಅಂಕ ರೇಟಿಂಗ್ ಕುಸಿದು 757 ಗಳಿಸಿದ್ದಾರೆ.
icon

(4 / 6)

(PTI)

ICC ODI Ranking: ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್​ಮನ್​ ಹೆನ್ರಿಚ್ ಕ್ಲಾಸೆನ್ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 749 ರೇಟಿಂಗ್ ಹೊಂದಿದ್ದಾರೆ.
icon

(5 / 6)

(AP)

ICC ODI Ranking: ವಿರಾಟ್ ಕೊಹ್ಲಿ ಒಂದು ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕದೊಂದಿಗೆ ಅವರು ಶ್ರೇಯಾಂಕದಲ್ಲಿ ಸುಧಾರಿಸಿದ್ದಾರೆ. ಇದಕ್ಕೂ ಮುನ್ನ 727 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದರು. ಈಗ 743 ಅಂಕ ಸಂಪಾದಿಸಿದ್ದಾರೆ. ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಭಾರತದ ಶ್ರೇಯಸ್ ಅಯ್ಯರ್ 679 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.
icon

(6 / 6)

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು