Jasprit Bumrah: ಮೊದಲ ದಿನವೇ 3 ವಿಕೆಟ್ ಕಿತ್ತು ಮೆಲ್ಬೋರ್ನ್​ನಲ್ಲಿ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jasprit Bumrah: ಮೊದಲ ದಿನವೇ 3 ವಿಕೆಟ್ ಕಿತ್ತು ಮೆಲ್ಬೋರ್ನ್​ನಲ್ಲಿ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

Jasprit Bumrah: ಮೊದಲ ದಿನವೇ 3 ವಿಕೆಟ್ ಕಿತ್ತು ಮೆಲ್ಬೋರ್ನ್​ನಲ್ಲಿ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

  • ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ ದಿಗ್ಗಜರನ್ನು ಹಿಂದಿಕ್ಕಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭರ್ಜರಿ ಫಾರ್ಮ್​​ನಲ್ಲಿರುವ ಜಸ್ಪ್ರೀತ್ ಬುಮ್ರಾ, ನಾಲ್ಕನೇ ಟೆಸ್ಟ್​​​ ಪಂದ್ಯದ ಮೊದಲ ದಿನ 3 ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮೆಲ್ಬೋರ್ನ್‌ ಕ್ರಿಕೆಟ್​ ಮೈದಾನದಲ್ಲಿ ಈ ಟೆಸ್ಟ್ ನಡೆಯುತ್ತಿದ್ದು, ಈ ಮೈದಾನದಲ್ಲಿ ಅತ್ಯಧಿಕ ಟೆಸ್ಟ್ ವಿಕೆಟ್​ ಪಡೆದ ಬೌಲರ್​ಗಳ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
icon

(1 / 6)

(BCCI - X)

ಮೆಲ್ಬೋರ್ನ್​ ಕ್ರಿಕೆಟ್ ಮೈದಾನದಲ್ಲಿ ಅತಿ ಹೆಚ್ಚು ಟೆಸ್ಟ್‌ ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆಯ ದಾಖಲೆಯ ಮುರಿದು ಬುಮ್ರಾ ಅಗ್ರಸ್ಥಾನಕ್ಕೇರಿದ್ದಾರೆ. ಈ ಯಾರ್ಕರ್ ಸ್ಪೆಷಲಿಸ್ಟ್​​ 5 ಇನ್ನಿಂಗ್ಸ್‌ಗಳಲ್ಲಿ 18 ವಿಕೆಟ್ ಪಡೆದು ನಂಬರ್​ ಆಗಿದ್ದಾರೆ.
icon

(2 / 6)

(AP)

ಈ ಪಟ್ಟಿಯಲ್ಲಿ ಭಾರತದ ದಿಗ್ಗಜ ಅನಿಲ್ ಕುಂಬ್ಳೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕುಂಬ್ಳೆ ಅವರು ಮೆಲ್ಬೋರ್ನ್‌ನಲ್ಲಿ 3 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. ಇದೀಗ ಈ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ.
icon

(3 / 6)

ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಆರ್ ಅಶ್ವಿನ್ ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 3 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 14 ವಿಕೆಟ್‌ ಕಬಳಿಸಿದ್ದಾರೆ.
icon

(4 / 6)

(PTI)

ಈ ಪಟ್ಟಿಯಲ್ಲಿ ಭಾರತದ ಶ್ರೇಷ್ಠ ಕ್ರಿಕೆಟಿಗ ಕಪಿಲ್ ದೇವ್ ಕೂಡ ಸೇರಿದ್ದಾರೆ. ಕಪಿಲ್ ದೇವ್ ಮೆಲ್ಬೋರ್ನ್‌ನಲ್ಲಿ 3ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ ಒಟ್ಟು 14 ವಿಕೆಟ್ ಪಡೆದಿದ್ದಾರೆ.
icon

(5 / 6)

ವೇಗದ ಬೌಲರ್ ಉಮೇಶ್ ಯಾದವ್ ಕೂಡ ಆಸ್ಟ್ರೇಲಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೆಲ್ಬೋರ್ನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಅವರು ಐದನೇ ಸ್ಥಾನದಲ್ಲಿದ್ದಾರೆ. ಉಮೇಶ್ 6 ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು