ಸಿಡ್ನಿ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಕಣಕ್ಕೆ; ಇದರ ಹಿಂದಿದೆ ಮಹತ್ವದ ಉದ್ದೇಶ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿಡ್ನಿ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಕಣಕ್ಕೆ; ಇದರ ಹಿಂದಿದೆ ಮಹತ್ವದ ಉದ್ದೇಶ

ಸಿಡ್ನಿ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಕಣಕ್ಕೆ; ಇದರ ಹಿಂದಿದೆ ಮಹತ್ವದ ಉದ್ದೇಶ

  • IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಶುಕ್ರವಾರ (ಜನವರಿ 3) ಪ್ರಾರಂಭವಾಗಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರರು ಗುಲಾಬಿ ಕ್ಯಾಪ್ ಧರಿಸಿ ಕಣಕ್ಕಿಳಿಯಲಿದ್ದಾರೆ. ಇದಕ್ಕೆ ಕಾರಣವೇನು?

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿರುದ್ಧ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ, ಐದನೇ ಟೆಸ್ಟ್​ಗೆ ಭರ್ಜರಿ ಸಿದ್ಧತೆ ನಡೆಸಿದೆ. ಇಂಡೋ-ಆಸೀಸ್​ ನಡುವಿನ ಅಂತಿಮ ಪಂದ್ಯ ಶುಕ್ರವಾರ (ಜನವರಿ 3) ಸಿಡ್ನಿಯಲ್ಲಿ ನಡೆಯಲಿದೆ. 2025ರ ನೂತನ ವರ್ಷದಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರರು ಗುಲಾಬಿ ಕ್ಯಾಪ್ ಧರಿಸಿ ಆಡಲಿದ್ದಾರೆ. ಅದಕ್ಕೆ ಕಾರಣ ಏನೆಂಬುದರ ಮಾಹಿತಿ ಇಲ್ಲಿದೆ.
icon

(1 / 5)

ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಆಸ್ಟ್ರೇಲಿಯಾದ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಮೈದಾನಕ್ಕಿಳಿಯಲಿದ್ದಾರೆ. ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್​ಗ್ರಾಥ್ ಅವರು ಕ್ಯಾನ್ಸರ್ ನಿರ್ಮೂಲನೆಗೆ ಒಂದು ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಈ ಫೌಂಡೇಶನ್ ನಿರಂತರ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಇದಕ್ಕೆ ಬೆಂಬಲವಾಗಿ ಆಸ್ಟ್ರೇಲಿಯಾ ಪಿಂಕ್ ಟೆಸ್ಟ್ ಆಡಲಿದೆ.
icon

(2 / 5)

ಭಾರತದ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರರು ಗುಲಾಬಿ ಕ್ಯಾಪ್ ಧರಿಸಲಿದ್ದಾರೆ. ಜೆರ್ಸಿಗಳ ಮೇಲಿನ ಲೋಗೋಗಳು ಗುಲಾಬಿ ಬಣ್ಣದ್ದಾಗಿರುತ್ತವೆ. ಕಿಟ್​ಗಳು ಸಹ ಗುಲಾಬಿ ಬಣ್ಣದ್ದಾಗಿರುತ್ತವೆ. ಪಿಂಕ್ ಟೆಸ್ಟ್​ಗೂ ಮುನ್ನ ಫೋಟೋಶೂಟ್ ನಡೆಸಲಾಗಿದೆ.
icon

(3 / 5)

ಪಿಂಕ್ ಟೆಸ್ಟ್ ಆಡುವ ಸಂಪ್ರದಾಯ 2009ರಿಂದಲೇ ಪ್ರಾರಂಭವಾಯಿತು. ಮೆಕ್​ಗ್ರಾಥ್​ ಫೌಂಡೇಶನ್​ ಉಪಕ್ರಮದಲ್ಲಿ ಈ ಪಂದ್ಯ ಆರಂಭಗೊಂಡಿತ್ತು. ಅಂದಿನಿಂದ ಆಸೀಸ್ ಪ್ರತಿವರ್ಷ ಗುಲಾಬಿ ಕಿಟ್​​ನೊಂದಿಗೆ ಪಂದ್ಯವನ್ನಾಡುತ್ತಿದೆ.
icon

(4 / 5)

2008ರಲ್ಲಿ ಮೆಕ್​ಗ್ರಾಥ್ ಅವರ ಪತ್ನಿ ಜೆನ್ ಅವರು ಸ್ತನ ಕ್ಯಾನ್ಸರ್​​ನಿಂದ ನಿಧನರಾದರು. ಹೀಗಾಗಿ, ಮೆಕ್​ಗ್ರಾಥ್ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಸಂತ್ರಸ್ತರನ್ನು ಬೆಂಬಲಿಸಲು ಫೌಂಡೇಶನ್ ಸ್ಥಾಪಿಸಿದರು. ಅಲ್ಲದೆ, ಸಾಕಷ್ಟು ಮಂದಿಗೆ ಶಿಕ್ಷಣವನ್ನೂ ನೀಡುತ್ತಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು