ಇತಿಹಾಸದ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ: ಸಚಿನ್ ತೆಂಡೂಲ್ಕರ್ರ ದೊಡ್ಡ ವಿಶ್ವದಾಖಲೆ ಮುರಿಯಲು ಬೇಕು ಕೇವಲ 94 ರನ್!
- Virat Kohli: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ ವಿರಾಟ್ ಕೊಹ್ಲಿ.
- Virat Kohli: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ ವಿರಾಟ್ ಕೊಹ್ಲಿ.
(1 / 9)
ಫೆಬ್ರವರಿ 6ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಫೆಬ್ರವರಿ 19ರಿಂದ ಪ್ರಾರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ವಿರಾಟ್ ಕೊಹ್ಲಿ ಸಿದ್ಧತೆ ನಡೆಸುತ್ತಿದ್ದಾರೆ.
(2 / 9)
ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೊನೆಯದಾಗಿ ಏಕದಿನ ಕ್ರಿಕೆಟ್ ಆಡಿದ್ದ ವಿರಾಟ್ ಕೊಹ್ಲಿ, 6 ತಿಂಗಳ ನಂತರ ಈ ಫಾರ್ಮೆಟ್ಗೆ ಮರಳಿದ್ದಾರೆ.
(3 / 9)
ಇದೀಗ ಅವರ ಮುಂದೆ ಬೃಹತ್ ದಾಖಲೆಯೊಂದಿದೆ. ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆ ಮುರಿಯಲು ಸಜ್ಜಾಗಿದ್ದಾರೆ. ಅದಕ್ಕಾಗಿ ಕೊಹ್ಲಿಗೆ ಬೇಕಿರುವುದು 94 ರನ್ ಮಾತ್ರ.
(4 / 9)
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ, ಸಚಿನ್ ಅವರ ವಿಶ್ವದಾಖಲೆ ಮುರಿಯುವ ಸಾಧ್ಯತೆಯಿದೆ. ಜೊತೆಗೆ ಅವರೊಂದಿಗೆ ಎಲೈಟ್ ಪಟ್ಟಿಗೂ ಸೇರ್ಪಡೆಯಾಗಲಿದ್ದಾರೆ.
(5 / 9)
ಕೊಹ್ಲಿ ಇನ್ನು 94 ರನ್ ಗಳಿಸಿದರೆ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 14 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಅಲ್ಲದೆ, 14 ಸಾವಿರ ರನ್ ಪೂರ್ಣಗೊಳಿಸಿದ ವಿಶ್ವದ ಮೂರನೇ ಆಟಗಾರನೂ ಆಗಲಿದ್ದಾರೆ.
(6 / 9)
ಸಚಿನ್ ಮತ್ತು ಕುಮಾರ್ ಸಂಗಕ್ಕಾರ 14,000 ರನ್ ಕ್ಲಬ್ ಸೇರಿರುವ ಮೊದಲ ಇಬ್ಬರು ಆಟಗಾರರಾಗಿದ್ದಾರೆ. ಆದರೆ ಈ ರನ್ನುಗಳನ್ನು ವೇಗವಾಗಿ ಪೂರೈಸಿದ ಆಟಗಾರನಾಗುವ ಅವಕಾಶ ಕೊಹ್ಲಿ ಮುಂದಿದೆ.
(7 / 9)
ವಿರಾಟ್ 295 ಏಕದಿನ ಪಂದ್ಯಗಳ 283 ಇನ್ನಿಂಗ್ಸ್ಗಳಲ್ಲಿ 13906 ರನ್ ಗಳಿಸಿದ್ದಾರೆ. 50 ಶತಕ, 72 ಅರ್ಧಶತಕ ಸಿಡಿಸಿರುವ ಅವರ ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 183 ರನ್.
(8 / 9)
ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಅಥವಾ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೇವಲ 94 ರನ್ ಗಳಿಸಿದರೆ ನೂತನ ಮೈಲಿಗಲ್ಲನ್ನು ತಲುಪಲಿದ್ದಾರೆ.
ಇತರ ಗ್ಯಾಲರಿಗಳು