ತವರು ನೆಲದಲ್ಲಿ ಸತತ 17ನೇ ಸರಣಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ; ಭಾರತ vs ಇಂಗ್ಲೆಂಡ್ ಟೆಸ್ಟ್ ದಾಖಲೆಗಳಿವು
- India vs England: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತವು ಭರ್ಜರಿ ಜಯ ಸಾಧಿಸಿದೆ. ಇದು ತವರು ನೆಲದಲ್ಲಿ ಭಾರತಕ್ಕೆ ಸತತ 17ನೇ ಸರಣಿ ಗೆಲುವಾಗಿದೆ. ಭಾರತವು ಕೊನೆಯ ಬಾರಿಗೆ 2012-13ರಲ್ಲಿ ಇದೇ ಇಂಗ್ಲೆಂಡ್ ತಂಡದ ವಿರುದ್ಧ 2-1 ಅಂತರದಲ್ಲಿ ಸರಣಿಯ ಸೋತಿತ್ತು. ಸದ್ಯ ಈ ಗೆಲುವಿನೊಂದಿಗೆ ಭಾರತ ನಿರ್ಮಿಸಿದ ದಾಖಲೆಗಳನ್ನು ನೋಡೋಣ.
- India vs England: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತವು ಭರ್ಜರಿ ಜಯ ಸಾಧಿಸಿದೆ. ಇದು ತವರು ನೆಲದಲ್ಲಿ ಭಾರತಕ್ಕೆ ಸತತ 17ನೇ ಸರಣಿ ಗೆಲುವಾಗಿದೆ. ಭಾರತವು ಕೊನೆಯ ಬಾರಿಗೆ 2012-13ರಲ್ಲಿ ಇದೇ ಇಂಗ್ಲೆಂಡ್ ತಂಡದ ವಿರುದ್ಧ 2-1 ಅಂತರದಲ್ಲಿ ಸರಣಿಯ ಸೋತಿತ್ತು. ಸದ್ಯ ಈ ಗೆಲುವಿನೊಂದಿಗೆ ಭಾರತ ನಿರ್ಮಿಸಿದ ದಾಖಲೆಗಳನ್ನು ನೋಡೋಣ.
(1 / 8)
ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ, ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಗಿಲ್ ಮತ್ತು ಜುರೆಲ್ 136 ಎಸೆತಗಳಲ್ಲಿ ಅಜೇಯ 72 ರನ್ ಗಳಿಸಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು.
(PTI)(2 / 8)
ಈ ಗೆಲುವಿನೊಂದಿಗೆ ಭಾರತ ತಂಡವು ದಾಖಲೆ ನಿರ್ಮಿಸಿದೆ. ತವರು ನೆಲದಲ್ಲಿ ಸತತ 17ನೇ ಟೆಸ್ಟ್ ಸರಣಿ ಗೆಲುವನ್ನು ಒಲಿಸಿಕೊಂಡಿದೆ.
(PTI)(3 / 8)
ಬೆನ್ ಸ್ಟೋಕ್ಸ್ ನಾಯಕತ್ವ ಹಾಗೂ ಬ್ರೆಂಡನ್ ಮೆಕಲಮ್ ಕೋಚಿಂಗ್‌ನಲ್ಲಿ ಇಂಗ್ಲೆಂಡ್ ತಂಡವು ಇದೇ ಮೊದಲ ಬಾರಿಗೆ ಸರಣಿ ಸೋಲು ಕಂಡಿದೆ.
(PTI)(4 / 8)
ಅಲ್ಲದೆ, ಈ ಇಬ್ಬರ ಮಾರ್ಗದರ್ಶನದಡಿ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಸೋತಿರುವುದು ಇದೇ ಮೊದಲು.
(AP)(5 / 8)
2013ರ ನಂತದ ಭಾರತದಲ್ಲಿ ಇದೇ ಮೊದಲ ಬಾರಿಗೆ 150ಕ್ಕೂ ಅಧಿಕ ರನ್‌ಗಳನ್ನು ಭಾರತವು ಯಶಸ್ವಿಯಾಗಿ ಚೇಸ್ ಮಾಡಿದೆ. 2013ರ ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಭಾರತವು ಆರು ವಿಕೆಟ್‌ಗಳಿಂದ ಗೆದ್ದಿತ್ತು.
(AFP)(7 / 8)
ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಐದು ವಿಕೆಟ್‌ಗಳಿಂದ ಜಯ ಗಳಿಸಿತು. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇದು ತವರು ನೆಲದಲ್ಲಿ ಭಾರತಕ್ಕೆ ಸತತ 17ನೇ ಸರಣಿ ಜಯ. ಭಾರತವು ಕೊನೆಯ ಬಾರಿಗೆ 2012/13 ರಲ್ಲಿ ಇಂಗ್ಲೆಂಡ್ ವಿರುದ್ಧ 2-1 ಅಂತರದಿಂದ ಸರಣಿ ಸೋತಿತ್ತು.
(REUTERS)(8 / 8)
ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ, ಗೆಲುವಿಗೆ 192 ರನ್‌ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ, 61 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿ ಗೆದ್ದು ಬೀಗಿತು. ಧ್ರುವ್ ಜುರೆಲ್ ಹಾಗೂ ಶುಭ್ಮನ್ ಗಿಲ್ ಆರನೇ ವಿಕೆಟ್‌ಗೆ ಅಜೇಯ 72 ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
(AP)ಇತರ ಗ್ಯಾಲರಿಗಳು