ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಡಬ್ಲ್ಯುಟಿಸಿ ಫೈನಲ್ ಕನಸು ಭಗ್ನ, ಬಿಜಿಟಿ ಸರಣಿ ಸೋಲಿನ ಬೆನ್ನಲ್ಲೇ ಕುಸಿದ ಭಾರತ
- Test Ranking: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟೆಸ್ಟ್ ತಂಡಗಳ ನೂತನ ರ‍್ಯಾಂಕಿಂಗ್ ಪ್ರಕಟಿಸಿದೆ. ಆಸ್ಟ್ರೇಲಿಯಾ ತಂಡ ತನ್ನ ಆಳ್ವಿಕೆ ಮುಂದುವರೆಸಿದರೆ, ಸೌತ್ ಆಫ್ರಿಕಾ ದ್ವಿತೀಯ ಸ್ಥಾನಕ್ಕೆ ಜಿಗಿತ ಕಂಡಿದೆ. ಎರಡನೇ ಸ್ಥಾನದಲ್ಲಿದ್ದ ಎಷ್ಟಕ್ಕೆ ಕುಸಿತ ಕಂಡಿದೆ? ಇಲ್ಲಿದೆ ವಿವರ.
- Test Ranking: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟೆಸ್ಟ್ ತಂಡಗಳ ನೂತನ ರ‍್ಯಾಂಕಿಂಗ್ ಪ್ರಕಟಿಸಿದೆ. ಆಸ್ಟ್ರೇಲಿಯಾ ತಂಡ ತನ್ನ ಆಳ್ವಿಕೆ ಮುಂದುವರೆಸಿದರೆ, ಸೌತ್ ಆಫ್ರಿಕಾ ದ್ವಿತೀಯ ಸ್ಥಾನಕ್ಕೆ ಜಿಗಿತ ಕಂಡಿದೆ. ಎರಡನೇ ಸ್ಥಾನದಲ್ಲಿದ್ದ ಎಷ್ಟಕ್ಕೆ ಕುಸಿತ ಕಂಡಿದೆ? ಇಲ್ಲಿದೆ ವಿವರ.
(1 / 9)
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-3 ಅಂತರದ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ, ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ.
(AFP)(2 / 9)
ಭಾರತ ತಂಡವು ಆಡಿದ ಕೊನೆಯ 8 ಟೆಸ್ಟ್‌ಗಳಲ್ಲಿ 6ರಲ್ಲಿ ಸೋತಿದ್ದು, 1 ಗೆಲುವು, 1 ಪಂದ್ಯ ಡ್ರಾ ಸಾಧಿಸಿದೆ. ತವರಿನ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 0-3ರಿಂದ ಸೋತಿದ್ದ ಭಾರತ, ಬಿಜಿಟಿ ಸರಣಿಯಲ್ಲೂ 0-3 ರಿಂದ ಸೋಲನುಭವಿಸಿತು.
(AFP)(3 / 9)
ಆಸ್ಟ್ರೇಲಿಯಾ ವಿರುದ್ಧ ಸರಣಿ ಕಳೆದುಕೊಂಡ ಭಾರತ ತಂಡ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪ್ರವೇಶಿಸಲು ವಿಫಲವಾಯಿತು. ಇದರ ಬೆನ್ನಲ್ಲೇ ಶ್ರೇಯಾಂಕದಲ್ಲೂ ಕುಸಿದಿದೆ.
(AFP)(4 / 9)
ಮತ್ತೊಂದೆಡೆ ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು 2-0 ಅಂತರದಲ್ಲಿ ಸರಣಿ ಜಯದ ಜೊತೆಗೆ ಸತತ 7 ಪಂದ್ಯಗಳಲ್ಲಿ ಗೆಲುವು ಕಂಡಿರುವ ಕಾರಣ ಶ್ರೇಯಾಂಕದಲ್ಲಿ ಜಿಗಿತ ಕಂಡಿದೆ. ಇದರೊಂದಿಗೆ ಭಾರತ ತಂಡವನ್ನು ಕೆಳಕ್ಕೆ ನೂಕಿ ಎರಡನೇ ಲಗ್ಗೆ ಇಟ್ಟಿದೆ.
(AFP)(5 / 9)
ಬಿಜಿಟಿ ಸರಣಿ ಆರಂಭದ ವೇಳೆ ಭಾರತವು ಟೆಸ್ಟ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನ ಹೊಂದಿತ್ತು. ಅಂದು ಅಗ್ರಸ್ಥಾನದಲ್ಲೇ ಇದ್ದ ಆಸ್ಟ್ರೇಲಿಯಾ, ಸರಣಿ ಗೆದ್ದು 126 ಅಂಕ ಪಡೆದು ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
(ICC- X)(6 / 9)
ಕೇಪ್‌ಟೌನ್‌ನಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿದ ನಂತರ ದಕ್ಷಿಣ ಆಫ್ರಿಕಾ 112 ರೇಟಿಂಗ್ ಪಾಯಿಂಟ್‌ಗಳೊಂದಿಗೆ 2ನೇ ಸ್ಥಾನಕ್ಕೆ ಏರಿತು. ಭಾರತ 109 ರೇಟಿಂಗ್ನೊಂದಿಗೆ 3ನೇ ಸ್ಥಾನದಲ್ಲಿದೆ.
(AP)(7 / 9)
ಇಂಗ್ಲೆಂಡ್ 106 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 96 ಅಂಕಗಳೊಂದಿಗೆ ನ್ಯೂಜಿಲೆಂಡ್ ಐದನೇ ಸ್ಥಾನದಲ್ಲಿದೆ. ಶ್ರೀಲಂಕಾ 87 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.
(8 / 9)
ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಐರ್ಲೆಂಡ್ ತಂಡಗಳು ಕ್ರಮವಾಗಿ 7 ರಿಂದ 10ನೇ ಸ್ಥಾನ ಪಡೆದಿವೆ.
(AP)ಇತರ ಗ್ಯಾಲರಿಗಳು