ಭಾರತ vs ಕೆನಡಾ ಮುಖಾಮುಖಿ ದಾಖಲೆ; ಟಿ20 ವಿಶ್ವಕಪ್ ಪಂದ್ಯದ ಲೈವ್ ಸ್ಟ್ರೀಮಿಂಗ್ ವಿವರ
- ಟಿ20 ವಿಶ್ವಕಪ್ 2024ರಲ್ಲಿ ಭಾರತ ತಂಡವು ಜೂನ್ 15ರಂದು ಕೆನಡಾ ತಂಡವನ್ನು ಎದುರಿಸುತ್ತಿದೆ. ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ಪಂದ್ಯ ನಡೆಯುತ್ತಿದ್ದು, ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಅಮೆರಿಕದಲ್ಲಿ ಇದು ಭಾರತದ ಕೊನೆಯ ಪಂದ್ಯವಾಗಿದೆ.

(1 / 6)
ಭಾರತ ತಂಡವು ಟೂರ್ನಿಯಲ್ಲಿ ಇದುವರೆಗೆ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಗೆದ್ದು ಉತ್ತಮ ಫಾರ್ಮ್‌ನಲ್ಲಿದೆ. ಕೊನೆಯ ಪಂದ್ಯದಲ್ಲಿ ಸಹ-ಆತಿಥೇಯ ಯುಎಸ್ಎ ತಂಡವನ್ನು ಸೋಲಿಸಿ ರೋಹಿತ್ ಶರ್ಮಾ ಬಳಗವು, ಇಂದು ತನಗಿಂತ ಕೆಳ ಶ್ರೇಯಾಂಕದ ಕೆನಡಾ ಮಣಿಸಲು ಸಜ್ಜಾಗಿದೆ.
(Getty Images via AFP)(2 / 6)
ಭಾರತ ಮತ್ತು ಕೆನಡಾ ದೇಶಗಳು ಇದೇ ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗುತ್ತಿವೆ. ಇದುವರೆಗೂ ಟಿ20ಯಲ್ಲಿ ಈ ಎರಡು ತಂಡಗಳು ಪರಸ್ಪರ ಸೆಣಸಿಲ್ಲ.
(Getty Images via AFP)(3 / 6)
ಭಾರತ ತಂಡವು ಫ್ಲೋರಿಡಾದಲ್ಲಿ ಈವರೆಗೆ ಎಂಟು ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಎರಡರಲ್ಲಿ ಸೋಲು ಕಂಡಿದೆ.
(Getty Images via AFP)(4 / 6)
ಈ ಮೈದಾನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತದ ಪರ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಎರಡು ಅರ್ಧ ಶತಕಗಳೊಂದಿಗೆ 49ರ ಸರಾಸರಿ ಹಾಗೂ 153.12ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಒಟ್ಟು 196 ರನ್ ಕಲೆ ಹಾಕಿದ್ದಾರೆ.
(Surjeet Yadav)(5 / 6)
ಫ್ಲೋರಿಡಾದಲ್ಲಿ ಆಡಿದ ಕೊನೆಯ ನಾಲ್ಕು ಟಿ20 ಪಂದ್ಯಗಳಲ್ಲಿ ಭಾರತವು ಮೂರರಲ್ಲಿ ಗೆದ್ದಿದೆ. ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸೋಲು ಕಂಡಿದೆ.
(Surjeet Yadav)ಇತರ ಗ್ಯಾಲರಿಗಳು