ಭಾರತ vs ನ್ಯೂಜಿಲೆಂಡ್ ಮೊದಲ ಟೆಸ್ಟ್ 3ನೇ ದಿನದಾಟಕ್ಕೂ ಮಳೆ ಅಡ್ಡಿಯಾಗುತ್ತಾ; ಬೆಂಗಳೂರು ಹವಾಮಾನ ಹೇಗಿರಲಿದೆ?
- ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಎರಡನೇ ದಿನವೇ ಟಾಸ್ ಪ್ರಕ್ರಿಯೆ ನಡೆದು ದಿನದಾಟ ನಡೆಯಿತು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿಲ್ಲ. ಸದ್ಯ ಪಂದ್ಯದ ಮುಂದಿನ 3 ದಿನಗಳ ಕಾಲ ಬೆಂಗಳೂಡು ಹವಾಮಾನ ಹೇಗಿರಲಿದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
- ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಎರಡನೇ ದಿನವೇ ಟಾಸ್ ಪ್ರಕ್ರಿಯೆ ನಡೆದು ದಿನದಾಟ ನಡೆಯಿತು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿಲ್ಲ. ಸದ್ಯ ಪಂದ್ಯದ ಮುಂದಿನ 3 ದಿನಗಳ ಕಾಲ ಬೆಂಗಳೂಡು ಹವಾಮಾನ ಹೇಗಿರಲಿದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 5)
ಇತ್ತೇಚೆಗೆ ಬಾಂಗ್ಲಾದೇಶ ವಿರುದ್ಧ ನಡೆದ ಕಾನ್ಪುರ ಟೆಸ್ಟ್ ನಂತರ ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮಳೆ ಖಳನಾಯಕ. ಅಕ್ಟೋಬರ್ 16ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟವು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಪಂದ್ಯವು ಎರಡನೇ ದಿನ ಗುರುವಾರ ಪ್ರಾರಂಭವಾಯಿತು.
(AP)(2 / 5)
ಸದ್ಯ ಪಂದ್ಯದ 3ನೇ ದಿನದ ಹವಾಮಾನ ಹೇಗಿರುತ್ತದೆ ಎಂಬುದು ಅಭಿಮಾನಿಗಳ ನಿರೀಕ್ಷೆ. ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಅನೇಕ ಸ್ಥಳಗಳಲ್ಲಿ ನೀರು ಸಂಗ್ರಹವಾಗಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ ನಗರದಲ್ಲಿ ಮುಂದಿನ ದಿನಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಟೆಸ್ಟ್ ಪಂದ್ಯದ ಮೂರನೇ ದಿನ ಮಳೆಯಾಗುವ ಸಾಧ್ಯತೆ ಶೇಕಡಾ 67 ರಷ್ಟಿದೆ.
(AFP)(3 / 5)
ಗುರುವಾರ ಶೇ.40ರಷ್ಟು ಮಳೆಯಾಗುವ ಸಾಧ್ಯತೆ ಇತ್ತು. ಇದಕ್ಕಿಂತ ಮೂರನೇ ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ, ಹವಾಮಾನ ಮುನ್ಸೂಚನೆಯ ಪ್ರಕಾರ, ಶುಕ್ರವಾರ ಮೋಡ ಕವಿದ ವಾತಾವರಣವಿರುತ್ತದೆ. ಕಡಿಮೆ ಬೆಳಕಿನಿಂದಾಗಿ ಪಂದ್ಯ ನಿಲ್ಲುವು ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.
(AFP)(4 / 5)
ಟೆಸ್ಟ್‌ನ ನಾಲ್ಕನೇ ದಿನದಂದು ಮಳೆಯಾಗುವ ಸಾಧ್ಯತೆ ಕಡಿಮೆ. ಶನಿವಾರ ಶೇ.25ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ ಮೋಡ ಕವಿದಿರುತ್ತದೆ. ಆ ದಿನ ಪೂರ್ಣ ಆಟ ನಡೆಯುವ ಸಾಧ್ಯತೆ ಇದೆ. ಐದನೇ ದಿನ ಅಂದರೆ ಭಾನುವಾರ, ಮಳೆಯಾಗುವ ಸಾಧ್ಯತೆ ಶೇಕಡಾ 40 ರಷ್ಟಿದೆ. ಗುಡುಗು ಸಹಿತ ಮಳೆ ಜೊತೆಗೆ ಮೋಡ ಕವಿದ ವಾತಾವರಣ ಇರುವ ಸಂಭವವಿದೆ.
(PTI)(5 / 5)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತಕ್ಕೆ ಪ್ರತಿ ಪಂದ್ಯವೂ ನಿರ್ಣಾಯಕವಾಗಿದೆ. ಹೀಗಾಗಿ ಸಹಜವಾಗಿ ಮಳೆಯಿಂದ ಪಂದ್ಯ ರದ್ದಾಗಲು ರೋಹಿತ್ ಬಯಸುವುದಿಲ್ಲ. ಆದರೆ, ಗುರುವಾರದ ದಿನದಾಟದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿರುವ ಭಾರತ, ಗೆಲುವಿಗಾಗಿ ಭಾರಿ ಹೋರಾಟ ನಡೆಸಬೇಕಾಗುತ್ತದೆ. ಹೀಗಾಗಿ ಸೋಲಿನ ಭೀತಿ ತಂಡಕ್ಕಿದೆ. ಮುಂದೆ ಪಂದ್ಯವನ್ನು ಗೆಲ್ಲುವುದು ಅಥವಾ ಡ್ರಾಗೊಳಿಸುವುದಷ್ಟೇ ಭಾರತದ ಮುಂದಿನ ಹಾದಿ.
(BCCI- X)ಇತರ ಗ್ಯಾಲರಿಗಳು