ಮತ್ತೆ ಭಾರತ-ಪಾಕಿಸ್ತಾನ ನಡುವೆ ನಾಲ್ಕೈದು ಹೈವೋಲ್ಟೇಜ್ ಪಂದ್ಯಗಳನ್ನು ವೀಕ್ಷಿಸಲು ಸಿದ್ದರಾಗಿ! ಇದೇ ವರ್ಷ, ಭಾರತದಲ್ಲೇ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮತ್ತೆ ಭಾರತ-ಪಾಕಿಸ್ತಾನ ನಡುವೆ ನಾಲ್ಕೈದು ಹೈವೋಲ್ಟೇಜ್ ಪಂದ್ಯಗಳನ್ನು ವೀಕ್ಷಿಸಲು ಸಿದ್ದರಾಗಿ! ಇದೇ ವರ್ಷ, ಭಾರತದಲ್ಲೇ!

ಮತ್ತೆ ಭಾರತ-ಪಾಕಿಸ್ತಾನ ನಡುವೆ ನಾಲ್ಕೈದು ಹೈವೋಲ್ಟೇಜ್ ಪಂದ್ಯಗಳನ್ನು ವೀಕ್ಷಿಸಲು ಸಿದ್ದರಾಗಿ! ಇದೇ ವರ್ಷ, ಭಾರತದಲ್ಲೇ!

  • ಭಾರತ ಮತ್ತು ಪಾಕಿಸ್ತಾನ ನಡುವೆ ಮುಂದಿನ ಪಂದ್ಯ ಯಾವಾಗ ಇರಲಿದೆ ಎಂಬ ಪ್ರಶ್ನೆ ಸದ್ಯ ಹರಿದಾಡುತ್ತಿರುವ ದೊಡ್ಡ ಪ್ರಶ್ನೆಯಾಗಿದೆ. ಇದೇ ವರ್ಷ ನಾಲ್ಕೈದು ಬಾರಿ ಉಭಯ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ.

ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವನ್ನು ಭಾರತ 6 ವಿಕೆಟ್​ಗಳಿಂದ ಸೋಲಿಸಿತು. ಮತ್ತೊಂದೆಡೆ ಭಾರತ ಸೆಮಿಫೈನಲ್​ಗೆ ಪ್ರವೇಶಿಸಿದರೆ, ಪಾಕಿಸ್ತಾನ ಟೂರ್ನಿಯಿಂದಲೇ ಅಧಿಕೃತವಾಗಿ ಹೊರಬಿದ್ದಿದೆ.
icon

(1 / 10)

(AFP)

ಒಂದ್ವೇಳೆ ಪಾಕಿಸ್ತಾನ ಕೂಡ ಸೆಮಿಫೈನಲ್​ ಪ್ರವೇಶಿಸಿದ್ದರೆ ಮತ್ತೊಮ್ಮೆ ಭಾರತದ ವಿರುದ್ಧ ಸೆಣಸಾಟಕ್ಕೆ ಅವಕಾಶ ಸಿಗಲಿದೆ ಎಂದು ಅಭಿಮಾನಿಗಳು ಕಾದಿದ್ದರು.
icon

(2 / 10)

ಅಂದರೆ ಸೆಮಿಫೈನಲ್​ನಲ್ಲಿ ಉಭಯ ತಂಡಗಳು ಗೆಲುವು ಸಾಧಿಸಿದ್ದರೆ ಫೈನಲ್​ನಲ್ಲಿ ಮುಖಾಮುಖಿಯಾಗುತ್ತವೆ ಎನ್ನುವ ನಂಬಿಕೆ ಇತ್ತು. ಆದರೀಗ ನಿರೀಕ್ಷೆ ಹುಸಿಯಾಗಿದೆ.
icon

(3 / 10)

ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವೆ ಮುಂದಿನ ಪಂದ್ಯ ಯಾವಾಗ ಇರಲಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದೇ ವರ್ಷ ನಾಲ್ಕೈದು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ.
icon

(4 / 10)

ಹೌದು, 2025ರ ಅಂತ್ಯ ಅಥವಾ 2026ರ ಆರಂಭವಾಗುವ ಏಷ್ಯಾಕಪ್​ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಬಹುದು. ಜೊತೆಗೆ ಇದೇ ವರ್ಷ ನಡೆಯುವ ಮಹಿಳೆಯರ ಏಷ್ಯಾಕಪ್, ಏಕದಿನ ವಿಶ್ವಕಪ್​ನಲ್ಲೂ ಎರಡು ತಂಡಗಳು ಮುಖಾಮುಖಿ ಸಾಧ್ಯತೆ ಇದೆ.
icon

(5 / 10)

(Surjeet Yadav)

ಮುಂದಿನ ವರ್ಷ ಪುರುಷರ ಟಿ20 ವಿಶ್ವಕಪ್​ ನಡೆಯಲಿದೆ. ಅದಕ್ಕೂ ಮುನ್ನ ಏಷ್ಯಾಕಪ್ ನಡೆಯಲಿದೆ. ಟೂರ್ನಿಯಲ್ಲಿ ಭಾರತ, ಪಾಕ್ ಜೊತೆಗೆ ಬಾಂಗ್ಲಾದೇಶ, ನೇಪಾಳ, ಅಫ್ಘಾನಿಸ್ತಾನ, ಶ್ರೀಲಂಕಾ, ಯುಎಇ ತಂಡಗಳು ಕಣಕ್ಕಿಳಿಯಲಿವೆ.
icon

(6 / 10)

(AP)

ಏಷ್ಯಾಕಪ್ ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಭಾರತ ಮತ್ತು ಪಾಕಿಸ್ತಾನ ಎ ಗುಂಪಿನಲ್ಲಿ ಸೆಣಸಾಟ ನಡೆಸಲಿವೆ.
icon

(7 / 10)

(BCCI - X)

ಎ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದರೆ ಉಭಯ ತಂಡಗಳು ಸೂಪರ್​-4ಗೆ ಪ್ರವೇಶಿಸಲಿದ್ದು, ಅಲ್ಲಿಯೂ ಮತ್ತೊಮ್ಮೆ ಸೆಣಸಾಟ ನಡೆಸಲಿವೆ. ಬಳಿಕ ಫೈನಲ್​ಗೆ ಅರ್ಹತೆ ಪಡೆದರೂ ಮತ್ತೆ ಮುಖಾಮುಖಿಯಾಗಲಿವೆ.
icon

(8 / 10)

ಇದಕ್ಕೂ ಮುನ್ನ ಭಾರತ ಮಹಿಳೆಯರ ತಂಡ ಮತ್ತು ಪಾಕಿಸ್ತಾನ ಮಹಿಳೆಯರ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿಯೂ ಮೂರ್ನಾಲ್ಕು ಪಂದ್ಯಗಳಲ್ಲಿ ಇತ್ತಂಡಗಳು ಕಾದಾಟ ನಡೆಸಬಹುದು.
icon

(9 / 10)

ಏಕೆಂದರೆ ಇದೇ ವರ್ಷ ಭಾರತದಲ್ಲಿ ಮಹಿಳೆಯರ ಏಕದಿನ ವಿಶ್ವಕಪ್ ನಡೆಯಲಿದೆ. ಅದಕ್ಕೂ ಮುನ್ನ ಜರುಗುವ ಏಷ್ಯಾಕಪ್ ಬಳಿಕ ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
icon

(10 / 10)

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು