ಅಂಡರ್ 19 ವನಿತೆಯರ ವಿಶ್ವಕಪ್; ಬಾಂಗ್ಲಾದೇಶ ವಿರುದ್ಧವೂ ಭಾರತಕ್ಕೆ 8 ವಿಕೆಟ್‌ ಜಯಭೇರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂಡರ್ 19 ವನಿತೆಯರ ವಿಶ್ವಕಪ್; ಬಾಂಗ್ಲಾದೇಶ ವಿರುದ್ಧವೂ ಭಾರತಕ್ಕೆ 8 ವಿಕೆಟ್‌ ಜಯಭೇರಿ

ಅಂಡರ್ 19 ವನಿತೆಯರ ವಿಶ್ವಕಪ್; ಬಾಂಗ್ಲಾದೇಶ ವಿರುದ್ಧವೂ ಭಾರತಕ್ಕೆ 8 ವಿಕೆಟ್‌ ಜಯಭೇರಿ

  • ಅಂಡರ್‌ 19 ವನಿತೆಯರ ವಿಶ್ವಕಪ್‌ನಲ್ಲಿ ಭಾರತ ಕಿರಿಯರ ತಂಡ ಭರ್ಜರಿ ಫಾರ್ಮ್‌ನಲ್ಲಿದೆ. ಬಾಂಗ್ಲಾದೇಶ ವಿರುದ್ಧದ ಸೂಪರ್‌ ಸಿಕ್ಸ್‌ ಹಂತದ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸೆಮಿಫೈನಲ್‌ ಟಿಕೆಟ್‌ ಬಹುತೇಕ ಖಚಿತಪಡಿಸಿಕೊಂಡಿದೆ.

ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಸೂಪರ್‌ ಸಿಕ್ಸ್‌ ಹಂತಕ್ಕೆ ಬಂದ ವನಿತೆಯರು, ಬಾಂಗ್ಲಾದೇಶದ ವಿರುದ್ಧವೂ ಅಬ್ಬರಿಸಿದರು. ವೈಷ್ಣವಿ ಶರ್ಮಾ ಹಾಗೂ ಜಿ ತ್ರಿಶಾ ಅಬ್ಬರದಾಟಕ್ಕೆ ಸುಲಭ ಗೆಲುವು ಒಲಿದಿದೆ.
icon

(1 / 7)

(BCCI)

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 8 ವಿಕೆಟ್‌ ಕಳೆದುಕೊಂಡು ಕೇವಲ 64 ರನ್‌ ಮಾತ್ರ ಗಳಿಸಿತು.
icon

(2 / 7)

ಇದಕ್ಕೆ ಪ್ರತಿಯಾಗಿ ಭಾರತ ತಂಡವು ಕೇವಲ 7.1 ಓವರ್‌ಗಳಲ್ಲೇ ಚೇಸಿಂಗ್‌ ಪೂರ್ಣಗೊಳಿಸಿತು. ಕೇವಲ 2 ವಿಕೆಟ್‌ ಕಳೆದುಕೊಂಡು 66 ರನ್‌ ಗಳಿಸಿ 8 ವಿಕೆಟ್‌ಗಳ ಜಯ ಸಾಧಿಸಿತು.
icon

(3 / 7)

ಭಾರತದ ಪರ ಮತ್ತೆ ಅಬ್ಬರಿಸಿದ ತ್ರಿಶಾ 31 ಎಸೆತಗಳಲ್ಲಿ 40 ರನ್‌ ಗಳಿಸಿದರೆ, ಕಮಲಿನಿ 3 ರನ್‌ ಗಳಿಸಿದರು. ಸಾನಿಕಾ ಚಲ್ಕೆ 11 ಹಾಗೂ ನಾಯಕಿ ನಿಕಿ ಪ್ರಸಾದ್‌ ಅಜೇಯ 5 ರನ್‌ ಗಳಿಸಿದರು.
icon

(4 / 7)

ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಬೌಲರ್‌ ವೈಷ್ಣವಿ ಶರ್ಮಾ, ಬಾಂಗ್ಲಾ ವಿರುದ್ಧವೂ ಅಬ್ಬರಿಸಿದರು. 3 ಪ್ರಮುಖ ವಿಕೆಟ್‌ ಪಡೆದು ಮತ್ತೊಮ್ಮೆ ಪಂದ್ಯಶ್ರೇಷ್ಠರಾದರು.
icon

(5 / 7)

ಭಾರತ ತಂಡವು ಮುಂದೆ ಜನವರಿ 28ರಂದು ನಡೆಯಲಿರುವ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ತಂಡವನ್ನು ಎದುರಿಸಲಿದೆ.
icon

(6 / 7)

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಎಚ್‌ಟಿ ಕನ್ನಡ ಸುದ್ದಿತಾಣಕ್ಕೆ ಭೇಟಿ ನೀಡಿ
icon

(7 / 7)

ಇತರ ಗ್ಯಾಲರಿಗಳು