ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ; ಐರ್ಲೆಂಡ್‌ ವಿರುದ್ಧ 304 ರನ್‌ ಅಂತರದ ಗೆಲುವು; ಸರಣಿ ಕ್ಲೀನ್‌ಸ್ವೀಪ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ; ಐರ್ಲೆಂಡ್‌ ವಿರುದ್ಧ 304 ರನ್‌ ಅಂತರದ ಗೆಲುವು; ಸರಣಿ ಕ್ಲೀನ್‌ಸ್ವೀಪ್

ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ; ಐರ್ಲೆಂಡ್‌ ವಿರುದ್ಧ 304 ರನ್‌ ಅಂತರದ ಗೆಲುವು; ಸರಣಿ ಕ್ಲೀನ್‌ಸ್ವೀಪ್

  • ಐರ್ಲೆಂಡ್‌ ವನಿತೆಯರ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 304 ರನ್‌ಗಳ ಅಂತರದ ದಾಖಲೆಯ ಜಯ ಸಾಧಿಸಿದೆ. ರನ್‌ಗಳ ಅಂತರದಲ್ಲಿ ಟೀಮ್‌ ಇಂಡಿಯಾ ವನಿತೆಯರಿಗೆ ಇದು ದೊಡ್ಡ ವಿಜಯವಾಗಿದೆ. ಇದರೊಂದಿಗೆ 3-0 ಅಂತರದಿಂದ ಸರಣಿ ಕ್ಲೀನ್‌ ಸ್ವೀಪ್‌ ಸಾಧಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ, 5 ವಿಕೆಟ್‌ ನಷ್ಟಕ್ಕೆ ಭರ್ಜರಿ 435 ರನ್‌ ಪೇರಿಸಿತು. 50 ಓವರ್‌ ಸ್ವರೂಪದಲ್ಲಿ ಭಾರತ ತಂಡದ ಗರಿಷ್ಠ ಇನ್ನಿಂಗ್ಸ್ ಮೊತ್ತ ಇದಾಗಿದೆ. ಇದೇ ವೇಳೆ ವನಿತೆಯರ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ನಾಲ್ಕನೇ ಅತಿ ದೊಡ್ಡ ಮೊತ್ತವಾಗಿದೆ. ಭಾರತ ಪುರುಷರ ತಂಡ ಕೂಡಾ ಇಷ್ಟು ಮೊತ್ತ ದಾಖಲಿಸಿಲ್ಲ. 
icon

(1 / 10)

ಭಾರತದ ಪರ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್‌ ಆಕರ್ಷಕ ಶತಕ ಸಿಡಿಸಿದರು. ಇವರಿಬ್ಬರೂ ಮೊದಲ ವಿಕೆಟ್‌ಗೆ ಭರ್ಜರಿ 233 ರನ್‌ಗಳ ಜೊತೆಯಾಟವಾಡಿದರು.
icon

(2 / 10)

ಸ್ಮೃತಿ ಕೇವಲ 70 ಎಸೆತಗಳಲ್ಲಿ ಸೆಂಚುರಿ ಬಾರಿಸಿದರು. ಕೊನೆಗೆ 135 ರನ್‌ ಗಳಿಸಿ ಔಟಾದರು. ಇದರಲ್ಲಿ 7 ಸ್ಫೋಟಕ ಸಿಕ್ಸರ್‌ ಕೂಡಾ ಸೇರಿತ್ತು. ವನಿತೆಯರ ಕ್ರಿಕೆಟ್‌ನಲ್ಲಿ ಇದು ಭಾರತದ ಪರ ಅತ್ಯಂತ ವೇಗದ ಶತಕವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಮಂಧನಾ ಅವರ 10ನೇ ಶತಕವಾಗಿದೆ.
icon

(3 / 10)

ಇದೇ ವೇಳೆ ಪ್ರತಿಕಾ ರಾವಲ್‌ ಕೂಡಾ ಚೊಚ್ಚಲ ಏಕದಿನ ಶತಕ ಸಿಡಿಸಿದರು. ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು, ಅಂತಿಮ ಪಂದ್ಯದಲ್ಲಿ ಕೇವಲ 129 ಎಸೆತಗಳಲ್ಲಿ 154 ರನ್‌ ಪೇರಿಸಿದರು. ಮಂಧಾನ ಜೊತೆಗೆ ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾದ ಬಳಿಕ, ರಿಚಾ ಘೋಷ್‌ ಜೊತೆಗೂಡಿ ಎರಡನೇ ವಿಕೆಟ್‌ಗೆ 104 ರನ್‌ಗಳ ಜೊತೆಯಾಟವಾಡಿದರು.
icon

(4 / 10)

ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಪ್ರತಿಕಾ, 103.33ರ ಸರಾಸರಿಯಲ್ಲಿ 310 ರನ್‌ ಗಳಿಸಿದ್ದಾರೆ. ಆ ಮೂಲಕ ಸರಣಿಯ ಗರಿಷ್ಠ ರನ್‌ ಸ್ಕೋರರ್‌ ಆಗಿದ್ದಾರೆ. ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಶತಕ ಬಾರಿಸಿದ ಅವರು, ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಸರಣಿಶ್ರೇಷ್ಠ ಗೌರವಕ್ಕೂ ಭಾಜನರಾದರು.
icon

(5 / 10)

ಭಾರತ ನೀಡಿದ ಬೃಹತ್‌ ಗುರಿ ಬೆನ್ನಟ್ಟಿದ ಐರ್ಲೆಂಡ್‌ 31.4 ಓವರ್‌ಗಳಲ್ಲಿ ಕೇವಲ 131 ರನ್‌ ಗಳಿಸಿ ಆಲೌಟ್‌ ಆಯ್ತು.‌ ಇದರೊಂದಿಗೆ ಭಾರತ 304 ರನ್‌ಗಳ ಗೆಲುವು ಒಲಿಸಿಕೊಂಡಿತು.
icon

(6 / 10)

ಭಾರತ ವನಿತೆಯರ ಪಾಲಿಗೆ ಇದು ರನ್‌ಗಳ ಅಂತರದಲ್ಲಿ ಅತಿದೊಡ್ಡ ಜಯವಾಗಿದೆ. ಒಟ್ಟಾರೆಯಾಗಿ ವನಿತೆಯರ ಏಕದಿನ ಕ್ರಿಕೆಟ್‌ನಲ್ಲಿ 7ನೇ ಅತಿ ದೊಡ್ಡ ಗೆಲುವಾಗಿದೆ.
icon

(7 / 10)

ಐರ್ಲೆಂಡ್‌ ಪರ ಫೋರ್ಬ್ಸ್‌ 41 ರನ್‌ ಗಳಿಸಿದರೆ, ಓರ್ಲಾ ಪ್ರೆಂಡರ್‌ಗ್ಯಾಸ್ಟ್ 36 ರನ್‌ ಗಳಿಸಿದ್ದೇ ತಂಡದ ಗರಿಷ್ಠ ಮೊತ್ತಗಳು.
icon

(8 / 10)

ಭಾರತದ ಪರ ದೀಪ್ತಿ ಶರ್ಮಾ 3 ವಿಕೆಟ್‌ ಕಬಳಿಸಿದರೆ, ತನುಜಾ ಕನ್ವರ್‌ 2 ವಿಕೆಟ್‌ ಪಡೆದು ಮಿಂಚಿದರು.
icon

(9 / 10)

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಎಚ್‌ಟಿ ಕನ್ನಡ ಸುದ್ದಿತಾಣಕ್ಕೆ ಭೇಟಿ ನೀಡಿ.
icon

(10 / 10)

ಇತರ ಗ್ಯಾಲರಿಗಳು